ಮೈಸೂರು ಅರಮನೆಯಲ್ಲಿ ದಸರಾ ಸಿದ್ಧತೆ ವೇಳೆ ಅವಘಡ, ತ್ರಿಣೇಶ್ವರ ದೇಗುಲಕ್ಕೆ ಪೇಂಟಿಂಗ್ ಮಾಡುವಾಗ ಬಿದ್ದು ಅಫ್ತಾಬ್‌ ತಲೆಗೆ ಗಾಯ

| Updated By: ಆಯೇಷಾ ಬಾನು

Updated on: Sep 22, 2021 | 2:10 PM

ಅರಮನೆಯಲ್ಲಿರುವ ತ್ರಿಣೇಶ್ವರ ದೇವಾಲಯದ ಕಟ್ಟಡಕ್ಕೆ ಸುಣ್ಣ ಬಳಿಯುತ್ತಿದ್ದ ವೇಳೆ ಅಫ್ತಾಬ್ ಸರಿ ಸುಮಾರು 20-25 ಅಡಿ ಇರುವ ಗೋಪುರದಿಂದ ಕೆಳಗೆ ಬಿದ್ದಿದ್ದಾರೆ.

ಮೈಸೂರು ಅರಮನೆಯಲ್ಲಿ ದಸರಾ ಸಿದ್ಧತೆ ವೇಳೆ ಅವಘಡ, ತ್ರಿಣೇಶ್ವರ ದೇಗುಲಕ್ಕೆ ಪೇಂಟಿಂಗ್ ಮಾಡುವಾಗ ಬಿದ್ದು ಅಫ್ತಾಬ್‌ ತಲೆಗೆ ಗಾಯ
ಮೈಸೂರು ಅರಮನೆಯಲ್ಲಿ ದಸರಾ ಸಿದ್ಧತೆ ವೇಳೆ ಅವಘಡ, ತ್ರಿಣೇಶ್ವರ ದೇಗುಲಕ್ಕೆ ಪೇಂಟಿಂಗ್ ಮಾಡುವಾಗ ಕೆಳಗೆ ಬಿದ್ದು ಅಫ್ತಾಬ್‌ ತಲೆಗೆ ಗಾಯ
Follow us on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಕ್ಕೆ ಕೇವಲ ಬೆರಳೆಣಿಕೆಯಷ್ಟು ದಿನಗಳಿವೆ. ಹೀಗಾಗಿ ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಆದ್ರೆ ದಸರಾಗೂ ಮುನ್ನವೇ ಅರಮನೆಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಅರಮನೆಯಲ್ಲಿರುವ ತ್ರಿಣೇಶ್ವರ ದೇವಾಲಯದ ಕಟ್ಟಡಕ್ಕೆ ಸುಣ್ಣ ಬಳಿಯುವ ವೇಳೆ ಪೈಂಟರ್ ಗೋಪುರದಿಂದ ಬಿದ್ದಿದ್ದಾರೆ.

ಅರಮನೆಯಲ್ಲಿರುವ ತ್ರಿಣೇಶ್ವರ ದೇವಾಲಯದ ಕಟ್ಟಡಕ್ಕೆ ಸುಣ್ಣ ಬಳಿಯುತ್ತಿದ್ದ ವೇಳೆ ಅಫ್ತಾಬ್ ಸರಿ ಸುಮಾರು 20-25 ಅಡಿ ಇರುವ ಗೋಪುರದಿಂದ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅಫ್ತಾಬ್ಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ಗೋಪುರದಿಂದ ಬಿದ್ದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದಿದೆ. ಸದ್ಯ ಅಫ್ತಾಬ್ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: Mysuru Dasara 2021: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ, ಗಜಪಡೆಗೆ ತೂಕ ಹೊರಿಸಿ ತಾಲೀಮು

Published On - 2:09 pm, Wed, 22 September 21