ಕಾಮುಕರು ತಮಿಳುನಾಡು, ಕೇರಳದ 4 ಎಂಜಿನಿಯರಿಂಗ್ ವಿದ್ಯಾರ್ಥಿಗಳು? ಸುಳಿವು ಪತ್ತೆ, ಕೇರಳಕ್ಕೆ ಹೊರಟ ಪೊಲೀಸರು

| Updated By: shivaprasad.hs

Updated on: Aug 27, 2021 | 1:20 PM

ಬೆಂಗಳೂರು ಹಾಗೂ ಮೈಸೂರಿನ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವ ಮೈಸೂರು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಲಭ್ಯವಾಗಿದೆ. ಈ ಕುರಿತು ಟಿವಿ9ಗೆ ಮಾಹಿತಿ ಲಭ್ಯವಾಗಿದ್ದು, ಅದರ ವಿವರ ಇಲ್ಲಿದೆ.

ಕಾಮುಕರು ತಮಿಳುನಾಡು, ಕೇರಳದ 4 ಎಂಜಿನಿಯರಿಂಗ್ ವಿದ್ಯಾರ್ಥಿಗಳು? ಸುಳಿವು ಪತ್ತೆ, ಕೇರಳಕ್ಕೆ ಹೊರಟ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us on

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿವಿ9ಗೆ ಪೊಲೀಸ್ ತಂಡದಿಂದ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಪತ್ತೆಗಾಗಿ ರಚನೆ ಮಾಡಿರುವ ಬೆಂಗಳೂರು, ಮೈಸೂರಿನ ಪೊಲೀಸರ ಜಂಟಿ ತಂಡಕ್ಕೆ ಸುಳಿವು ಲಭಿಸಿದೆ. ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದ್ದು, ಅತ್ಯಾಚಾರದ ಬಳಿಕ ಅವರು ಪರಾರಿಯಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದ್ದು, ತಮಿಳುನಾಡು ಮೂಲದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ಅನುಮಾನ ಮೂಡಿದೆ. ಆಗಸ್ಟ್ 24ರಂದು ರಾತ್ರಿ 7 ಗಂಟೆ ಸುಮಾರಿಗೆ ಗ್ಯಾಂಗ್‌ರೇಪ್ ಪ್ರಕರಣ ನಡೆದಿದ್ದು, ಅಂದು ಆರೋಪಿಗಳು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

ಆರೋಪಿಗಳ ಪತ್ತೆಗಾಗಿ ಕೇರಳಕ್ಕೆ ಹೊರಟಿರುವ ಪೊಲೀಸರು:

ಪೊಲೀಸ್ ಅಧಿಕಾರಿಗಳು ಒಂದೇ ಒಂದು ಖಚಿತ ಸುಳಿವಿನಿಂದ ಆರೋಪಿಗಳ ಡೀಟೇಲ್ಸ್ ಪತ್ತೆ ಹಚ್ಚಿದ್ದಾರೆ. ಮಂಗಳವಾರ ಗ್ಯಾಂಗ್‌ ರೇಪ್ ನಡೆಸಿದ್ದ ಆರೋಪಿ ವಿದ್ಯಾರ್ಥಿಗಳು ಬುಧವಾರ ಪರೀಕ್ಷೆಗೆ ಆಬ್ಸೆಂಟ್ ಆಗಿದ್ದಾರೆ. ಮೈಸೂರು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ನಾಲ್ವರು ಆರೋಪಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಆರೋಪಿಗಳ ಜಾಡು ಹಿಡಿದ ಪೊಲೀಸರ ತಂಡಕ್ಕೆ ಇವರೇ ಗ್ಯಾಂಗ್‌ ರೇಪ್ ಆರೋಪಿಗಳೆಂದು ಸುಳಿವು ಸಿಕ್ಕಿದೆ. ಇಂಜಿನಿಯರಿಂಗ್ ವ್ಯಾಸಂಗಕ್ಕೆಂದು ಮೈಸೂರಿಗೆ ಬಂದು ರಾಕ್ಷಸಿ ಕೃತ್ಯ ನಡೆಸಿದ ಕಾಮುಕರಿಗಾಗಿ ಶೋಧ ನಡೆದಿದ್ದು, ಗ್ಯಾಂಗ್ ರೇಪ್ ಆರೋಪಿಗಳ ಪಕ್ಕಾ ಸುಳಿವು ಪತ್ತೆ ಹಚ್ಚಿ, ಪೊಲೀಸ್ ಅಧಿಕಾರಿಗಳು ಕೇರಳಕ್ಕೆ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಂತಹ ಘಟನೆ ಮುಂದೆಂದೂ ನಡೆಯಬಾರದು: ಎಡಿಜಿಪಿ ಪ್ರತಾಪ್ ರೆಡ್ಡಿ

ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ -ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತು

(Police got the Clue of four accused in Mysuru gang rape case)