ಮೈಸೂರಿನ ರಾಜಮನೆತನದ ಜೊತೆ ನಾಳೆ ಬೆಳಿಗ್ಗೆ ಉಪಹಾರ ಸೇವಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

| Updated By: sandhya thejappa

Updated on: Jun 20, 2022 | 11:35 AM

ಉಪಹಾರದಲ್ಲಿ ಮೈಸೂರು ಪಾಕ್ ಇರುತ್ತದೆ. ರಾಜಮಾತೆ ಪ್ರಮೋದದೇವಿ ಒಡೆಯರ್ ಅವರು ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಆಹ್ವಾನ ನೀಡಿದ್ದರು.

ಮೈಸೂರಿನ ರಾಜಮನೆತನದ ಜೊತೆ ನಾಳೆ ಬೆಳಿಗ್ಗೆ ಉಪಹಾರ ಸೇವಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ಮೈಸೂರು: ಇಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೈಸೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (International Yoga Day) ಭಾಗಿಯಾಗುತ್ತಾರೆ. ನಾಳೆ ಬೆಳಿಗ್ಗೆ 8.30ಕ್ಕೆ ಅರಮನೆಯ ನಿವಾಸದಲ್ಲಿ ಮೋದಿ ರಾಜಮನೆತನದವರ ಜೊತೆ ಬೆಳಗಿನ ಉಪಹಾರ ಸೇವಿಸುತ್ತಾರೆ. ಮೋದಿ ಸವಿಯುವ ಬೆಳಗಿನ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಪಹಾರದಲ್ಲಿ ಮೈಸೂರು ಪಾಕ್ ಇರುತ್ತದೆ. ರಾಜಮಾತೆ ಪ್ರಮೋದದೇವಿ ಒಡೆಯರ್ ಅವರು ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಆಹ್ವಾನ ನೀಡಿದ್ದರು.

ಪ್ರಧಾನಿ ಮೋದಿಗೆ ಶ್ರೀಮತಿ ಪ್ರಮೋದದೇವಿ ಒಡೆಯರ್ ಸ್ವಾಗತ ಕೋರುತ್ತಾರೆ. ನಂತರ ರಾಜರ ನಿವಾಸದಲ್ಲಿ ಶ್ರೀಮತಿ ಪ್ರಮೋದದೇವಿ ಒಡೆಯರ್ ಜೊತೆ ಉಪಹಾರ ಸವಿಯಲಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿರುತ್ತಾರೆ.

ಇದನ್ನೂ ಓದಿ: ರಾಯಚೂರಿನ ಕವಿತಾಳ ಗ್ರಾಮದಲ್ಲಿ ಸತ್ತ ಮಂಗವೊಂದಕ್ಕೆ ಮನುಷ್ಯರ ರೀತಿಯಲ್ಲಿ ಅಂತಿಮ ಸಂಸ್ಕಾರ

ಇದನ್ನೂ ಓದಿ
ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯನವರ ನಾಲ್ಕು ಪ್ರಶ್ನೆ; ಟ್ವೀಟ್​ನಲ್ಲಿ ಏನಿದೆ?
Viral Photo: ಸಂಗಾತಿಯ ಬದಲು ಡೇಟಿಂಗ್ ಆ್ಯಪ್​ನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿ! ವಿ ಆರ್ ನಾಟ್ ಸೇಮ್ ಬ್ರೊ
PM Modi in Karnataka: ಪ್ರಧಾನಿ ಮೋದಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿರುವ ಭಾರತದ ಮೊದಲ ಪ್ರಧಾನಿಯಾಗಲಿದ್ದಾರೆ
ಅಪ್ಪ ಎಂದರೆ ನೆನಪಾಗುವ ಮೊದಲನೆಯ ಪದ ಧೈರ್ಯ

ಮೋದಿಗೆ ಮೈಸೂರು ಪಾಕ್:
ಮೈಸೂರಿನ ಸ್ಪೆಷಲ್ ಮೈಸೂರು ಪಾಕ್​ ಮೋದಿಗಾಗಿ ಸಿದ್ಧವಾಗಿದೆ. ರಾಜರ ಕಾಲದಲ್ಲಿ ಮೈಸೂರು ಪಾಕ್ ಸಿದ್ಧವಾಗುತ್ತಿತ್ತು. ರಾಜರ ಬಾಣಸಿಗ ಕಾಕಾಸುರ ಮಾದಪ್ಪರಿಂದ ಈ ಸಿಹಿ ತಿಂಡಿ ತಯಾರಾಗುತ್ತಿತ್ತು. ಅಂದು ಕಾಕಾಸುರ ಮಾದಪ್ಪ ಪಾಕದಿಂದ ಸಿಹಿ ತಿನಿಸು ಮಾಡಿದ್ದರು. ಅದಕ್ಕೆ ಕೃಷ್ಣರಾಜ ಒಡೆಯರ್ ಮೈಸೂರು ಪಾಕ್ ಅಂತಾ ಹೆಸರು ನೀಡಿದ್ದಾರೆ. ಇಂದಿಗೂ ಅದೇ ಕಾಕಾಸುರ ಮಾದಪ್ಪ ಕುಟುಂಬ ಮೈಸೂರು ಪಾಕ್ ತಯಾರಿಸುತ್ತಿದೆ. ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಕಾಕಾಸುರ ಮಾದಪ್ಪ ಕುಟುಂಬದವರು, ಪ್ರಧಾನಿ ನರೇಂದ್ರ ಮೋದಿಗಾಗಿ ಮೈಸೂರು ಪಾಕ್ ತಯಾರಿಸುತ್ತಿದ್ದಾರೆ.

ಮೋದಿಗಾಗಿ ಆಕರ್ಷಕ ಪೇಟ ಸಿದ್ಧ:
ಮೈಸೂರಿನ ಕಲಾವಿದ ನಂದನ್ ಮೋದಿಗೆಂದು ಮೈಸೂರು ಪೇಟ ತಯಾರಿಸಿದ್ದಾರೆ. ರೇಷ್ಮೆ ನೂಲುಗಳಿಂದ ಕಲಾವಿದ ಕೈನಲ್ಲೇ ಪೇಟ ಸಿದ್ಧಪಡಿಸಿದ್ದಾರೆ.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿ ಪೇಟವನ್ನು ನಾಳೆ ಮೋದಿ ಧರಿಸುತ್ತಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Mon, 20 June 22