ಹುಣಸೂರು: ನನ್ನ ಮರ್ಯಾದೆ ಪ್ರಶ್ನೆ ಇದು, ಯಾರಾದರೂ ಕಾಂಗ್ರೆಸ್‌ಗೆ ಮತ ನೀಡಿದರೆ ಓಡಿಸಿಬಿಡುತ್ತೇನೆ ಎಂದು ಮಾಜಿ ಎಂಎಲ್ಸಿ ರಘು ಆಚಾರ್ (Raghu Achar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವರಾಜ ಅರಸು ಕರ್ಮ ಭೂಮಿಯಲ್ಲಿ ನಿಂತು ಸಮುದಾಯಕ್ಕೆ ಕೆಲಸ ಮಾಡುತ್ತೇನೆ ಎಂದು ರಘು ಆಚಾರ್ ಹುಣಸೂರಿಗೆ ಹೇಳಿಕೆ ನೀಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಜತೆ ಹುಣಸೂರಿಗೆ ಭೇಟಿ ನೀಡಿದ್ದ ರಘು ಆಚಾರ್, ಡಿ.ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಅರಸು ಹುಟ್ಟೂರು ಕಳ್ಳಹಳ್ಳಿಗೂ ಭೇಟಿ ನೀಡಿ ಡಿ.ದೇವರಾಜ ಅರಸು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಡಿ.ದೇವರಾಜ ಅರಸು ಧೀಮಂತ ನಾಯಕರು, ಅವರು ಹಿಂದುಳಿದ ವರ್ಗಗಳ ನಿಜವಾದ ನಾಯಕ, ಹಾಗಾಗಿ ನಾನು ರಾಜಕೀಯ ಶುರು ಮಾಡುವಾಗ ಡಿ.ದೇವರಾಜ ಅರಸುಗೆ ಪೂಜೆ ಸಲ್ಲಿಸಿದ್ದೇನೆ, ಜೆಡಿಎಸ್ಗೆ ಸೇರ್ಪಡೆ ಬಳಿಕವೂ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ: ತಪ್ಪಿದ ಕಾಂಗ್ರೆಸ್ ಟಿಕೆಟ್, ರಘು ಆಚಾರ್ ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡಿರುವ ಯಾರು ಹಿಂದುಳಿದ ಸಮುದಾಯಗಳಿಗೆ ಏನು ಮಾಡಿಲ್ಲ, ಅಹಿಂದ ಏನೂ ನಡೆಯಲ್ಲ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹುಣಸೂರಿನಲ್ಲಿ ರಘು ಆಚಾರ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ ರಘು ಆಚಾರ್ ಅರಸು ಅವರಿಂದ ಮಾತ್ರ ಹಿಂದುಳಿದ ವರ್ಗದ ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ. ಅದಕ್ಕಾಗಿ ಹಿಂದಿನಿಂದಲೂ ನಾನು ಇಲ್ಲಿಗೆ ಬಂದು ಹೋಗುತ್ತೇನೆ ಎಂದು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿರುವ ಮಾಜಿ ಎಂಎಲ್ಸಿ ರಘು ಆಚಾರ್, ಜೆಡಿಎಸ್ ಸೇರ್ಪಡೆಗೊಂಡು ಕಾಂಗ್ರೆಸ್ ವಿರುದ್ಧ ತೊಡೆತಟ್ಟಲು ಸಜ್ಜಾಗುತ್ತಿದ್ದಾರೆ.
Published On - 4:52 pm, Tue, 11 April 23