ಪಿಹೆಚ್ ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಕೇಸ್; ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದಂಪತಿಗೆ ನೋಟಿಸ್

| Updated By: sandhya thejappa

Updated on: Aug 08, 2021 | 1:03 PM

ವಿದ್ಯಾರ್ಥಿನಿಯನ್ನು ಮನೆಗೆ ಮನೆಗೆ ಪ್ರೊ.ರಾಮಚಂದ್ರ ಕರೆಸಿಕೊಂಡಿದ್ದ. ಈ ವೇಳೆ ಸಂತ್ರಸ್ತೆ ಕೂಗಾಟ, ಚೀರಾಟ ನಡೆಸಿದ್ದಳು. ಇದೇ ಸಂದರ್ಭಕ್ಕೆ ಮನೆಗೆ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಲೋಲಾಕ್ಷಿ ಆಗಮಿಸಿದ್ದರು.

ಪಿಹೆಚ್ ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಕೇಸ್; ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದಂಪತಿಗೆ ನೋಟಿಸ್
ಪ್ರೊ.ಜಿ.ಟಿ.ರಾಮಚಂದ್ರಪ್ಪ , ಡಾ.ಎನ್.ಕೆ.ಲೋಲಾಕ್ಷಿ
Follow us on

ಮೈಸೂರು: ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದಂಪತಿಗೆ ನೋಟಿಸ್ ಜಾರಿಯಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ನೋಟಿಸ್ನ ಜಾರಿಗೊಳಿಸಲಾಗಿದೆ. ವಿಸಿ ಪ್ರೊ.ಹೇಮಂತ್ ಕುಮಾರ್ ನಿರ್ದೇಶನದಂತೆ ಕುಲಸಚಿವ ಪ್ರೊ.ಶಿವಪ್ಪರಿಂದ ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಜಿ.ಟಿ.ರಾಮಚಂದ್ರಪ್ಪ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿಗೆ ನೋಟಿಸ್ (Notice) ನೀಡಲಾಗಿದೆ.

ಪ್ರಕರಣವೇನು?
ಪ್ರಖ್ಯಾತ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದ ಆರೋಪ ಕೇಳಿಬಂದಿತ್ತು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ.ರಾಮಚಂದ್ರ ವಿರುದ್ಧ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಸಂಶೋಧನಾ ವಿದ್ಯಾರ್ಥಿನಿ ಜಯಲಕ್ಷ್ಮಿ ಪುರಂ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಸಂತ್ರಸ್ತೆ ರಾಮಚಂದ್ರ ಬಳಿ ಪಿಎಚ್ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ಮನೆಗೆ ಪ್ರೊ.ರಾಮಚಂದ್ರ ಕರೆಸಿಕೊಂಡಿದ್ದ. ಈ ವೇಳೆ ಸಂತ್ರಸ್ತೆ ಕೂಗಾಟ, ಚೀರಾಟ ನಡೆಸಿದ್ದಳು. ಇದೇ ಸಂದರ್ಭಕ್ಕೆ ಮನೆಗೆ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಲೋಲಾಕ್ಷಿ ಆಗಮಿಸಿದ್ದರು. ಲೋಲಾಕ್ಷಿ ಅವರು ಸಹ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ನಂತರ ಅವರು ಸಂತ್ರಸ್ತೆ ಯುವತಿಯನ್ನು ಹಾಗೂ ತನ್ನ ಪತಿಯನ್ನು ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದರು.

ಆದರೆ ಮಾರನೇ ದಿನ ವಿದ್ಯಾರ್ಥಿನಿ ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೇಳಿಕೆ ಕೊಟ್ಟಿದ್ದಳು. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿನ ಪ್ರತಿಗೆ ಸಹಿ, ಹೆಬ್ಬೆಟ್ಟು ಹಾಕಿದ್ದ ಸದರಿ ವಿದ್ಯಾರ್ಥಿನಿ ತನ್ನ ಮೇಲೆ ಅತ್ಯಾಚಾರ ಆಗಿಲ್ಲವೆಂದು ಹೇಳಿಕೆ ಕೊಟ್ಟಿದ್ದಳು. ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೊಡೆದ ವಿದ್ಯಾರ್ಥಿನಿ ಅಂತಹ ಯಾವ ಘಟನೆಯೂ ನಡೆದಿಲ್ಲ. ಪ್ರೊ.ರಾಮಚಂದ್ರ ನನ್ನ ಪಿಹೆಚ್.ಡಿ ಮಾರ್ಗದರ್ಶಕರು. ಸಂಶೋಧನೆಯ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಅವರ ಪತ್ನಿ ಲೋಲಾಕ್ಷಿ ನನ್ನನ್ನ ಹೆದರಿಸಿ ದೂರು ಬರೆಸಿದರು ಎಂದು ಲೋಲಾಕ್ಷಿ ವಿರುದ್ಧವೇ ವಿದ್ಯಾರ್ಥಿನಿಯು ದೂರು ನೀಡಿದ್ದಳು.

ಇದನ್ನೂ ಓದಿ

ದೆಹಲಿ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಡಿಲೀಟ್​ ಮಾಡಿದ ರಾಹುಲ್​ ಗಾಂಧಿ..

ವೈವಾಹಿಕ ಅತ್ಯಾಚಾರವು ವಿಚ್ಛೇದನಕ್ಕೆ ಸೂಕ್ತ ಕಾರಣ: ಕೇರಳ ಹೈಕೋರ್ಟ್

(Rape Attempt case University of Mysore has issued a notice to  professor couple)

Published On - 12:57 pm, Sun, 8 August 21