ಮೈಸೂರು: ರೆಡ್ ಬುಲ್ ಪಕ್ಷಿ ತನ್ನ ಮರಿಗಳಿಗೆ ಆಹಾರ ನೀಡುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಾಣಿ ಪ್ರಿಯರಿಗೆ ಮುದ ನೀಡುತ್ತಿದೆ. ಹಿರಿಯ ಛಾಯಾಗ್ರಾಹಕರಾದ ಶ್ರೀ ರಾಮ್ ಕ್ಯಾಮೆರಾದಲ್ಲಿ ತನ್ನ ಮರಿಗಳಿಗೆ ಆಹಾರ ತಂದು ತಿನ್ನಿಸುತ್ತಿರುವ ರೆಡ್ ಬುಲ್ (red-whiskered bulbul) ಪಕ್ಷಿಯ ತಾಯಿ ಪ್ರೀತಿ ಸೆರೆಯಾಗಿದೆ.
ಶ್ರೀರಾಮ್ ಅವರ ಸರಸ್ವತಿಪುರಂ ನಿವಾಸದ ಬಳಿ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಮೂರು ಮರಿಗಳಿಗೆ ಜನ್ಮ ನೀಡಿರುವ ರೆಡ್ ಬುಲ್, ಸುಂದರ ಗೂಡು ನಿರ್ಮಿಸಿದೆ. ಅತ್ಯಂತ ಪ್ರೀತಿ ಕಾಳಜಿಯಿಂದ ತನ್ನ ಮರಿಗಳನ್ನು ನೋಡಿಕೊಳ್ಳುತ್ತಿರುವ ರೆಡ್ ಬುಲ್, ಹುಳುಗಳನ್ನು ಹೆಕ್ಕಿ ತಂದು ತಿನ್ನಿಸುತ್ತಿದೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಮಂಡ್ಯ: ಪುರ ಗ್ರಾಮದ ಬಳಿ ಒಂಟಿ ಸಲಗ ಪ್ರತ್ಯಕ್ಷ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರ ಗ್ರಾಮದ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿರುವ ಕಾಡಾನೆಯನ್ನು ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಯಾವ ಭಾಗದಿಂದ ಆನೆ ಬಂದಿದೆ ಎಂದು ಈವರೆಗೂ ತಿಳಿದು ಬಂದಿಲ್ಲ. ಸದ್ಯ ಪುರ ಗ್ರಾಮದ ಸುತ್ತಮುತ್ತಲ ಜಮೀನಿನಲ್ಲಿ ಕಾಡಾನೆ ಬೀಡು ಬಿಟ್ಟಿದೆ.
ಹುಬ್ಬಳ್ಳಿ: ಚಿರತೆ ಮತ್ತೆ ಪ್ರತ್ಯಕ್ಷ ವದಂತಿ
ಮೊನ್ನೆಯಷ್ಟೆ ನೃಪತುಂಗ ಬಳಿ ಕಾಣಿಕೊಂಡಿದ್ದ ಚಿರತೆ ಇಂದು ಕೂಡ ಮತ್ತೆ ಕಾಣಿಸಿಕೊಂಡಿದೆ ಎಂಬ ವದಂತಿ ಕೇಳಿ ಬಂದಿದೆ. ವಾಯು ವಿಹಾರಿಯೊಬ್ಬರಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನ ಮರೆಯಾಗಿದ್ದ ಚಿರತೆ ನಿನ್ನೆ ರಾತ್ರಿ ಮತ್ತೆ ಪ್ರತ್ಯಕ್ಷವಾಗಿದೆ. ಈ ಹಿಂದೆ ನೃಪತುಂಗ ಬೆಟ್ಟದ ಸಮೀಪದ ರಾಜ ನಗರದ ಕೇಂದ್ರಿಯ ವಿದ್ಯಾಲಯದ ಮೈದಾನದಲ್ಲಿ ಕಾಣಿಸಿಕೊಂಡಿತ್ತು. ಆಗ ಅಲ್ಲಿನ ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು.
ಇದನ್ನೂ ಓದಿ:
ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು; ಕಾಡೆಮ್ಮೆ, ಜಿಂಕೆ, ಕರಡಿಗಳನ್ನು ಕಂಡು ಪುಳಕಿತರಾದ ಜನ
ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಕಕಾಲಕ್ಕೆ ತಾಯಿ-ಮಕ್ಕಳ ದರ್ಶನ, ಸಫಾರಿಗೆ ಬಂದವರು ಫುಲ್ ಖುಷ್
(Red Bull bird caught on camera for feeding cubs video got viral in mysuru)
Published On - 10:08 am, Sun, 19 September 21