ಜಾತಿ ಗಣತಿ ವಿಚಾರ ಪ್ರಸ್ತಾಪಿಸಿದ ವಿ. ಸೋಮಣ್ಣಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟ ಸಂಸದ ಶ್ರೀನಿವಾಸ್​ ಪ್ರಸಾದ್​

| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2023 | 8:25 PM

ಜಾತಿ ಗಣತಿ ಯಾಕೆ ವಿರೋಧ ಮಾಡುತ್ತಿರಾ. ವಿಶಾಲ ದೃಷ್ಟಿಕೋನ ಇರಬೇಕು. ಗಣತಿಯಿಂದ ಸಮಾಜಕ್ಕೆ ಒಳ್ಳೆಯದಾದರೆ ಆಗಲಿ ಬಿಡಿ ಎಂದು ಜಾತಿ ಗಣತಿ ವಿಚಾರ ಪ್ರಸ್ತಾಪಿಸಿದ ಮಾಜಿ ಸಚಿವ ವಿ. ಸೋಮಣ್ಣ ವಿರುದ್ಧ ವೇದಿಕೆಯಲ್ಲೇ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.​​

ಜಾತಿ ಗಣತಿ ವಿಚಾರ ಪ್ರಸ್ತಾಪಿಸಿದ ವಿ. ಸೋಮಣ್ಣಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟ ಸಂಸದ ಶ್ರೀನಿವಾಸ್​ ಪ್ರಸಾದ್​
ಸಂಸದ ಶ್ರೀನಿವಾಸ್ ಪ್ರಸಾದ್, ಮಾಜಿ ಸಚಿವ ವಿ ಸೋಮಣ್ಣ
Follow us on

ಮೈಸೂರು, ಅಕ್ಟೋಬರ್​​ 08: ಜಾತಿ ಗಣತಿ ಯಾಕೆ ವಿರೋಧ ಮಾಡುತ್ತಿರಾ. ವಿಶಾಲ ದೃಷ್ಟಿಕೋನ ಇರಬೇಕು. ಗಣತಿಯಿಂದ ಸಮಾಜಕ್ಕೆ ಒಳ್ಳೆಯದಾದರೆ ಆಗಲಿ ಬಿಡಿ. ಜಾತಿ ಗಣತಿ ಬಗ್ಗೆ ನೊಂದುವರು ಮಾತನಾಡಿದ್ದಾರೆ. ಯಾರು ಏನು ಹೇಳಿದರೂ ಅಂತಿಮ ಅಲ್ಲ ಎಂದು ಜಾತಿ ಗಣತಿ ವಿಚಾರ ಪ್ರಸ್ತಾಪಿಸಿದ ಮಾಜಿ ಸಚಿವ ವಿ. ಸೋಮಣ್ಣ ವಿರುದ್ಧ ವೇದಿಕೆಯಲ್ಲೇ ಸಂಸದ ವಿ. ಶ್ರೀನಿವಾಸ್ ಪ್ರಸಾದ್ (srinivas prasad) ತಿರುಗೇಟು ನೀಡಿದ್ದಾರೆ.​​ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಹಿಂದೆ ಆಯೋಗದ ವರದಿಗಳನ್ನೆ ಕತ್ತೆ ಮೇಲೆ ಇಟ್ಟು ಮೆರವಣಿಗೆ ಮಾಡಿದ್ದೇವೆ. ಕೆಲವರು ಆನೆ ಮೇಲೆ ಇಟ್ಟು ಮೆರವಣಿಗೆ ಮಾಡಿದ್ದಾರೆ‌. ಸರಿಯಾವುದು ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಜಾತಿ ಗಣತಿ ವಿರೋಧಿಸುವವರಿಗೆ ಟಾಂಗ್​ ನೀಡಿದ್ದಾರೆ.

ಇದನ್ನೂ ಓದಿ: ಕಾವೇರಿ ಕಿಚ್ಚು: ಗಡಿ ಬಂದ್ ನಿರ್ಧಾರದಿಂದ ಹಿಂದೆ ಸರಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್

ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಶಾಮನೂರು ಅವರು ಅಖಿಲ ಭಾರತ ವೀರಶೈವ ಮಹಾಸಭದ ಅಧ್ಯಕ್ಷರು. ಅವರ ಬಗ್ಗೆ ಅಪಾರ ಗೌರವ ಇದೆ. ರಾಜ್ಯಕ್ಕೆ ದೊಡ್ಡ ಶ್ರೀಮಂತರು ಅವರು. 90 ವರ್ಷದಲ್ಲು ಶಾಸಕರಾಗಿದ್ದಾರೆ. ನಿಮ್ಮ ಮಗ ಸಚಿವರಾಗಿದ್ದಾರೆ. ನೀವು ಮಾರ್ಗದರ್ಶನ ಮಾಡಬೇಕು. ಈ ರೀತಿ ಹೇಳಿಕೆ‌ ಕೊಡುವುದು ಸರಿಯಲ್ಲ ಎಂದಿದ್ದಾರೆ.

ಪಂಚಮಸಾಲಿ ಮೀಸಲಾತಿ ಬೇಡಿಕೆ ಖಂಡಿಸಿದ ಸಂಸದ ವಿ.ಶ್ರೀನಿವಾಸ ಪ್ರಸಾದ್

ವೀರಶೈವ ಧರ್ಮ ಜಾಗತಿಕ ಧರ್ಮ. ಪಂಚಮಸಾಲಿಗಳು ಕೋರ್ಟ್ ಮೆಟ್ಟಿಲು ಹತ್ತಿದ್ದು ನೋಡಿದ್ರೆ ನಾಚಿಕೆ ಆಗುತ್ತೆ. ಇಂತಹ ಧರ್ಮದಲ್ಲಿ ಹುಟ್ಟಿ ಮೀಸಲಾತಿಗಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಜಾತಿ ತೊಡೆದುಹಾಕಲು ಬಂದ ಧರ್ಮವೇ ಕೋರ್ಟ್ ಮೆಟ್ಟಿಲೇರಿದ್ರೆ ಹೇಗೆ ಎಂದು ಪಂಚಮಸಾಲಿ ಮೀಸಲಾತಿ ಬೇಡಿಕೆ ಖಂಡಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಸೋಲಿನಿಂದ ಹೊರಬಾರದ ಸೋಮಣ್ಣ: ಬಸವ ಜಯಂತಿ ಕಾರ್ಯಕ್ರಮದಲ್ಲಿ ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ

ವೈದಿಕ ಜಾತಿಯಲ್ಲಿ ಹುಟ್ಟಿದ್ರೆ ಪೂರ್ವಜನ್ಮದ ಪುಣ್ಯ ಎಂದು ಹೇಳುತ್ತಾರೆ. ಬಸವಣ್ಣನವರು ಅಂತ ಶ್ರೇಷ್ಠ ಜಾತಿಯಲ್ಲಿ ಹುಟ್ಟಿ ಹೆಮ್ಮೆ ಪಡಬಹುದಿತ್ತು. ಆದರೆ ತಾರತಮ್ಯ ಬೇಡ ಎಂದು ಸಿಡಿದೆದ್ದು ಹೊಸ ಸಮಾಜ ಕಟ್ಟಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸಿದರು. ನಮ್ಮ ಸಮಾಜದಲ್ಲಿರುವ ಪಿಡುಗುಗಳ ವಿರುದ್ಧ ಹೋರಾಟ ಮಾಡಿದರು ಎಂದರು.

ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿದ್ದರು ಅಂತ ಭಾಷಣ ಮಾಡುತ್ತಾರೆ. ನೂರಾರು ಕೋಟಿ ನುಂಗಿ ನೀರು ಕುಡಿದಿದ್ದೀರಿ. ಅಧಿಕಾರ ಕಳೆದುಕೊಂಡು ಈಗ ಜಿಲ್ಲಾ ಮಂತ್ರಿಯಾಗಿದ್ದೀರಿ. ಈಗ ನೀವು ಬಸವಣ್ಣರ ಬಗ್ಗೆ ಮಾತನಾಡುತ್ತೀರಿ ಎಂದು ಸಚಿವ ಮಹದೇವಪ್ಪ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನೀವುಗಳು ಮಂತ್ರಿಯಾದಾಗ ಬಸವಣ್ಣರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿಸಬೇಕು. ಬಸವಣ್ಣರು ರಾಜ್ಯದ ಬೊಕ್ಕಸ ತೆಗೆದು ಜನರಿಗೆ ಕೊಡುತ್ತಿದ್ದರು. ನೀವು ಬೊಕ್ಕಸ ಲೂಟಿ ಮಾಡ್ತಿದ್ದೀರಿ. ಬಾಯಿಗೆ ಬಂತು ಅಂತ ಬಸವಣ್ಣರ ಬಗ್ಗೆ ಹೇಳೋದಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.