ಅ.16 ರಿಂದ 22ರ ವರೆಗೆ ದಸರಾ ಚಲನಚಿತ್ರೋತ್ಸವ, ಟಿಕೆಟ್ ದರ ಎಷ್ಟು? ಇಲ್ಲಿದೆ ವಿವರ
ಅಕ್ಟೋಬರ್ 15 ರಂದು ಮೈಸೂರಿನ ಕಲಾಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದೆ. ಅಕ್ಟೋಬರ್ 16 ರಿಂದ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಏಳು ದಿನಗಳ ಕಾಲ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಈ ಬಾರಿ ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳ ಪ್ರದರ್ಶನ ಇರಲಿದೆ.
ಮೈಸೂರು, ಅ.09: ವಿಶ್ವವಿಖ್ಯಾತ ಮೈಸೂರು ದಸರೆಗೆ (Mysuru Dasara 2023) ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆ ಮತ್ತೊಂದೆಡೆ ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಸುದ್ದಿಗೋಷ್ಠಿ ನಡೆಸಿದ್ದು ಅಕ್ಟೋಬರ್ 15 ರಂದು ಮೈಸೂರಿನ ಕಲಾಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದೆ. ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ (HC Mahadevappa) ಅವರು ಚಲನಚಿತ್ರೋತ್ಸವ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಡಾರ್ಲಿಂಗ್ ಕೃಷ್ಣ ದಂಪತಿ, ಮಾನ್ವಿತಾ, ಮಯೂರಿ, ವೈಭವಿ ಭಾಗಿಯಾಗಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಸಾಧುಕೋಕಿಲ ತಂಡದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಹಾಸ್ಯಚಕ್ರವರ್ತಿ ನರಸಿಂಹರಾಜುರ 100 ನೇ ಜನ್ಮದಿನದ ಹಂಗವಾಗಿ ಅವರ ಮಗಳಾದ ಸುಧಾರವರಿಗೆ ಗೌರವ ಸಲ್ಲಿಸಲಾಗುತ್ತೆ. ಅಕ್ಟೋಬರ್ 16 ರಿಂದ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಏಳು ದಿನಗಳ ಕಾಲ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಈ ಬಾರಿ ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳ ಪ್ರದರ್ಶನ ಇರಲಿದೆ. ಸಿನಿಪ್ರಿಯರಿಗೆ ಆನ್ ಲೈನ್ ಮೂಲಕ ಪಾಸ್ ವಿತರಣೆ ಮಾಡಲಾಗುತ್ತೆ. ಸಾರ್ವಜನಿಕರಿಗೆ 500 ರೂ, ವಿದ್ಯಾರ್ಥಿಗಳಿಗೆ 300 ರೂ ನಿಗದಿ. ಮಾಡಲಾಗಿದೆ. Inox ಹಾಗೂ DRC ಥಿಯೇಟರ್ ನಲ್ಲಿ ಕನ್ನಡ ಹಾಗೂ ವಿಶ್ವದ ಅತ್ಯುತ್ತಮ ಚಿತ್ರಗಳ ಪ್ರದರ್ಶನವಾಗಲಿದೆ ಎಂದು ದಸರಾ ಚಲಚಿತ್ರ ಉಪಸಮಿತಿ ವಿಶೇಷ ಅಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾಹಿತಿ ನೀಡಿದರು.
ಅ.9ರ ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ನಗರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸಿನಿಮಾ ಪ್ರಿಯರಿಗೆ ಚಲನಚಿತ್ರೋತ್ಸವ ಪ್ರದರ್ಶನದ ಪಾಸ್ ವಿತರಿಸಲಾಗುತ್ತಿದೆ.
ಇದನ್ನೂ ಓದಿ: ಸಿಎಂ-ಡಿಸಿಎಂ ಶುಭ ಸಂದೇಶವಿರುವ ಮೈಸೂರು ದಸರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ
ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದು
ಮೈಸೂರು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. 2023ರ ದಸರಾ ಮಹೋತ್ಸವದ ಪೂರ್ವಬಾವಿ ಕೆಲಸ ಹಿನ್ನೆಲೆ ದಿ. 09/10/2023 ರಿಂದ 31/10/2023 ರವರೆಗೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಕಾರಣ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ದಸರಾ ಜಂಬೂಸವಾರಿಯಲ್ಲಿ 36 ಸ್ತಬ್ಧಚಿತ್ರಗಳ ಪ್ರದರ್ಶನ
ಈ ಬಾರಿ ದಸರಾ ಜಂಬೂಸವಾರಿಯಲ್ಲಿ 36 ಸ್ತಬ್ಧಚಿತ್ರಗಳ ಪ್ರದರ್ಶವಾಗಲಿದೆ. ವಿವಿಧ ಜಿಲ್ಲೆಗಳ 31 ಸ್ತಬ್ಧಚಿತ್ರ, 5 ವಿವಿಧ ಇಲಾಖೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ತಯಾರಿ ನಡೆದಿದೆ. ಮೈಸೂರು ನಂಜನಗೂಡು ರಸ್ತೆಯ ಬಂಡಿಪಾಳ್ಯದಲ್ಲಿ ನಾಳೆಯಿಂದ (ಅ.10) ಸ್ತಬ್ಧಚಿತ್ರ ತಯಾರಿಸುವ ಕಾರ್ಯ ಆರಂಭವಾಗಲಿದೆ. ಮೈಸೂರು ಜಿ.ಪಂಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಬಿಂಬಿಸುವ ಸ್ತಬ್ಧಚಿತ್ರ, ಮಂಡ್ಯ, ಬಾಗಲಕೋಟೆ, ರಾಮನಗರ, ರಾಯಚೂರು, ಬೀದರ್, ಬೆಂಗಳೂರು ಸೇರಿ ವಿವಿಧ ಜಿಲ್ಲೆಯ ಸ್ತಬ್ಧಚಿತ್ರ ಹಾಗೂ ಜಿಲ್ಲೆಯ ಪರಂಪರೆ ಪ್ರವಾಸಿತಾಣಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ರೆಡಿಯಾಗುತ್ತಿವೆ.
ಮೈಸೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:28 pm, Mon, 9 October 23