ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿಯಮ ಉಲ್ಲಂಘಿಸಿ ಸಂಚಾರ; ನೆಟ್ಟಿಗರು ಗರಂ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಅನೇಕರು ನಿಯಮ ಉಲ್ಲಂಘಿಸಿ ಹೆದ್ದಾರಿ ಮೇಲೆ ಸಂಚರಿಸುತ್ತಿದ್ದು, ಪ್ರಯಾಣಿಕರು ದೃಶ್ಯ ಸೆರೆ ಹಿಡಿದು ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತದ್ದಾರೆ.

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru-Mysore Expressway) ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ (Karnataka Government) ಅನೇಕ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ AI ಕ್ಯಾಮೆರಾ (AI Camera) ಅಳವಡಿಸುವ ಮೂಲಕ ಮಿತಿಗಿಂತ ಅತಿಯಾಗಿ ವೇಗದಲ್ಲಿ ವಾಹನ ಚಲಾಯಿಸಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇಂದಿನಿಂದ ಬೈಕ್, ಆಟೋ, ತ್ರಿಚಕ್ರ ವಾಹನ, ಟ್ಯಾಕ್ಟರ್ ಮತ್ತು ಮೋಟಾರ್ ರಹಿತ ವಾಹನಗಳನ್ನು ನಿಷೇಧಿಸಲಾಗಿದೆ. ಆದರೂ ಕೂಡ ನಿಯಮಗಳನ್ನು ಉಲ್ಲಂಘಿಸಿ ಜನರು ಎಕ್ಸಪ್ರೆಸ್ವೇ ನಲ್ಲಿ ಸಂಚರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು ವೋಸ್ ಎಂಬ ಟ್ವಿಟರ್ ಬಳಕೆದಾರರು ವಿಡಿಯೋವೊಂದನ್ನು ಟ್ವಿಟ್ ಮಾಡಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೂಬಿನಕೆರೆ ಬಳಿ “ವಯಸ್ಸಾದ ವ್ಯಕ್ತಿಯೊಬ್ಬರು ದನಗಳೊಂದಿಗೆ ಎಕ್ಸ್‌ಪ್ರೆಸ್‌ವೇ ದಾಟುತ್ತಿರುವುದನ್ನು” ಕಾಣಬಹುದಾಗಿದೆ. ಒಂದು ವೇಳೆ ವೇಗವಾಗಿ ವಾಹನ ಬಂದು ಗುದ್ದಿದರೆ ಯಾರು ಹೊಣೆ? ನಿಯಮ ಬಾಹಿರವಾಗಿ ಏಕೆ ಹೆದ್ದಾರಿ ಮೇಲೆ ಸಂಚರಿಸುತ್ತಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
Went through the #bengalurumysuruexpressway and found many funny incidents. 1. An old guy walking his cows as if he is walking through his field#Bengaluru #RoadSafety @alokkumar6994 @tdkarnataka pic.twitter.com/JAXB7e0T0y
— Bengaluru Woes (@BengaluruWoes) July 31, 2023
ಇದನ್ನೂ ಓದಿ: ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್, ರಿಕ್ಷಾ ಸಂಚಾರ ಬಂದ್, ನಿಯಮ ಮೀರಿದ್ರೆ ದಂಡ
ಮತೊಬ್ಬ ಟ್ವಿಟರ್ ಬಳಕೆದಾರರಾದ ನರ್ಶಿಮಾ ಉಪಾಧ್ಯಾಯ ಅವರು ಕೂಡ ಇದೇ ರೀತಿಯಾಗಿ ವಿಡಿಯೋ ಟ್ವಿಟ್ ಮಾಡಿದ್ದು “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಎಕ್ಸ್‌ಪ್ರೆಸ್‌ವೇಯಲ್ಲಿ ಯು-ಟರ್ನ್ ತೆಗೆದುಕೊಳ್ಳುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರು “ಕೆಎಸ್ಆರ್ಟಿಸಿ ಚಾಲಕ ಜು.31ರಂದು ಬೆಳಗ್ಗೆ 8 ಗಂಟೆಗೆ ಬಿಡದಿ ಬಳಿ ರಿವರ್ಸ್ ತೆಗೆದುಕೊಂಡು ರಾಂಗ್ ಸೈಡ್‌ನಲ್ಲಿ ಹೋಗಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸಿದರೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸುವ ಅನೇಕ ಅಪಘಾತಗಳಿಗೆ ಯಾರು ಹೊಣೆ? ಎನ್ಹೆಚ್ಎಐ ಅಥವಾ ತಿಳುವಳಿಕೆ ಇಲ್ಲಿದ ಚಾಲಕನೆ?” ಎಂದು ಕೆಎಸ್ಆರ್ಟಿಸಿ, ಎನ್ಹೆಚ್ಎಐ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
Who is responsible for many accidents on #BengaluruMysoreExpressway? Is it @NHAI_Official or senseless drivers? This @KSRTC_Journeys driver taking reverse turn and going on wrong side at 8 am today near Bidadi. @nitin_gadkari pic.twitter.com/HMmDfRUPXd
— Narshima Upadhyaya (@NarshimaU) July 29, 2023
ಇದಕ್ಕೆ ಪ್ರತಿಕ್ರಿಯಿಸಿದ KSRTC “ನಿಮ್ಮ ಟ್ವಿಟರ್ ದೂರನ್ನು ಪರಿಶೀಲಿಸಲು ಸಂಬಂಧಿಸಿದ ವಿಭಾಗಕ್ಕೆ ರವಾನಿಸಲಾಗಿದೆ.” ಅಲ್ಲದೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ