ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (Bengaluru-Mysore Expressway) ಸಂಭವಿಸುತ್ತಿರುವ ಅಪಘಾತಗಳನ್ನು (Accident) ನಿಯಂತ್ರಿಸಲು ದ್ವಿಚಕ್ರ, ತ್ರಿಚಕ್ರ, ಟ್ಯಾಕ್ಟರ್ ಮತ್ತು ಮೋಟಾರು ರಹಿತ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವವರಿಂದ 500 ರೂ. ದಂಡ ವಸೂಲಿ ಮಾಡಲಾಗುತ್ತಿದೆ. ಹೀಗೆ ಮೊದಲ ದಿನ 137 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 68,500 ರೂ. ದಂಡ ವಸೂಲಿ ಮಾಡಲಾಗಿದೆ.
ಈ ಬಗ್ಗೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಾರ್ತಿಕ್ ರೆಡ್ಡಿ ಟ್ವಿಟ್ ಮಾಡಿ “ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪ್ರವೇಶ ಮತ್ತು ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘನೆಗಾಗಿ 137 ಪ್ರಕರಣಗಳು ದಾಖಲಾಗಿವೆ. 68,500 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. ಪ್ರವೇಶ ನಿರ್ಬಂಧವಿರುವುದರಿಂದ ಸದರಿ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬೇಕು” ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: Bengaluru-Mysore Expressway: ವಾಹನಗಳ ವೇಗಕ್ಕೆ ಬ್ರೇಕ್: ನಿಯಮ ಮುರಿದರೆ ದಂಡ ಅಷ್ಟೇ ಅಲ್ಲ, ಡ್ರೈವಿಂಗ್ ಲೈಸೆನ್ಸ್ ರದ್ದು
ಮೊದಲ ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ರಾಮನಗರ, ಮೈಸೂರು ಮತ್ತು ಮಂಡ್ಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು, ಆಟೋಗಳು ಮತ್ತು ಮೋಟಾರು ರಹಿತ ವಾಹನಗಳು ಎಕ್ಸ್‌ಪ್ರೆಸ್‌ವೇನಲ್ಲಿ ಪ್ರವೇಶಿಸುವವರಿಗೆ ಎಚ್ಚರಿಕೆ ನೀಡಿ, ಸರ್ವೀಸ್ ರಸ್ತೆಯಲ್ಲಿ ಕಳುಹಿಸುತ್ತಿದ್ದರು. ಅದನ್ನು ಮೀರಿಯೂ ಕೆಲವರು ಹೆದ್ದಾರಿ ಪ್ರವೇಶಿಸಿದರೆ ಅಂತವರಿಗೆ ನಿರ್ಗಮನ ಸ್ಥಳಗಳಲ್ಲಿ 500 ರೂ.ದಂಡ ಹಾಕಲಾಯಿತು.
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇಂದಿನಿಂದ ದ್ವಿಚಕ್ರ & ತ್ರಿಚಕ್ರ ವಾಹನಗಳ ಪ್ರವೇಶ & ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಇಂದು 137 ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 68,500/- ರೂ ದಂಡ ವಿಧಿಸಲಾಗಿರುತ್ತದೆ.
ವಿಸೂ: ಪ್ರವೇಶ ನಿರ್ಬಂಧವಿರುವ ಕಾರಣ ಸದರಿ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿ ವಿನಂತಿ
— Ramanagara District Police (@spramanagara) August 1, 2023
ನ್ನು ಎರಡನೇ ದಿನವೂ ನಿಯಮ ಕಟ್ಟುನಿಟ್ಟಾಗಿ ಪಾಲನೆಗೆ ಮೈಸೂರಿನ ಕಳಸ್ತವಾಡಿ ಬಳಿ ಹೆದ್ದಾರಿ ಪ್ರವೇಶ ಹಾಗೂ ನಿರ್ಗಮ ಸ್ಥಳದಲ್ಲಿ ಸಬ್ ಇನ್ಸಪೆಕ್ಟರ್ ನಟರಾಜ್ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ವಿಸ್ ರಸ್ತೆಯಿಂದ ಮುಖ್ಯರಸ್ತೆಗೆ ಬಾರದಂತೆ ಎಚ್ಚರ ವಹಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.