ಗ್ರಾ.ಪಂಚಾಯಿತಿ ಅಧ್ಯಕ್ಷ ಚುನಾವಣೆ: ಪ್ರವಾಸಕ್ಕೆ ಕಳುಹಿಸಿದ್ದ ಅಭ್ಯರ್ಥಿಗೆ ಕೈ ಕೊಟ್ಟ ಸದಸ್ಯರು, ಮೋಜು-ಮಸ್ತಿ ಮಾಡಿಬಂದು ಎದುರಾಳಿ ಅಭ್ಯರ್ಥಿಗೆ ಮತ
ಮತ ಹಾಕಲು ಪ್ರವಾಸಕ್ಕೆ ಕಳುಹಿಸಿದ್ದ ಅಭ್ಯರ್ಥಿಗೆ ಸದಸ್ಯರು ಕೈ ಕೊಟ್ಟಿದ್ದಾರೆ. ಪ್ರವಾಸಕ್ಕೆ ಹೋಗಿ ಮೋಜು-ಮಸ್ತಿ ಮಾಡಿ ಬಂದು ಎದುರಾಳಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರೊಂದಿಗೆ ಪ್ರವಾಸ ಭಾಗ್ಯ ಕಲ್ಪಿಸಿದ್ದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ನಿರಾಸೆಯಾಗಿದೆ.
ಮೈಸೂರು, (ಆಗಸ್ಟ್ 02): ರಾಜ್ಯದೆಲ್ಲೆಡೆ ಎರಡನೇ ಅವಧಿಗೆ ಗ್ರಾಮ ಪಂಚಾಯಿತಿ(Grama Panchayat )ಅಧ್ಯಕ್ಷ ಉಪಧ್ಯಾಕ್ಷ ಆಯ್ಕೆ ಪ್ರಕ್ರಿಯೆಗಳು ನಡೆದಿವೆ. ಕೆಲವು ಕಡೆ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಇನ್ನೂ ಕೆಲವೆಡೆ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಗೆ ಮತ ಹಾಕುವಂತೆ ಸದಸ್ಯರಿಗೆ ಹಣದ ಆಮೀಷ ಜೊತೆಗೆ ಆಣೆ ಪ್ರಮಾಣಗಳು ಮಾಡಿಸಿಕೊಳ್ಳುತ್ತಿದ್ದಾರೆ. ಅದರಂತೆ ಮೈಸೂರಿನಲ್ಲಿ ಮತ ಹಾಕುವುದಾಗಿ ಆಣೆ ಪ್ರಮಾಣ ಮಾಡಿದ್ದ ಗ್ರಾಮ ಪಂಚಾಯತಿ ಸದಸ್ಯರು ಮತ ಹಾಕದೆ ಕೈ ಕೊಟ್ಟಿರುವ ಘಟನೆ ನಡೆದಿದೆ. ಹೌದು.. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಮತ ಹಾಕಲು ಪ್ರವಾಸಕ್ಕೆ ಕಳುಹಿಸಿದ್ದ ಅಭ್ಯರ್ಥಿಗೆ ಸದಸ್ಯರು ಕೈ ಕೊಟ್ಟಿದ್ದಾರೆ. ಪ್ರವಾಸಕ್ಕೆ ಹೋಗಿ ಬಂದು ಎದುರಾಳಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರಿಂದ ರಾಮಕೃಷ್ಣೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು 9 ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದ ಭಾರತಿ ವಿಶ್ವನಾಥ್ ಅವರಿಗೆ ನಿರಾಸೆಯಾಗಿದೆ. ಸದಸ್ಯರಿಗೆ ಪ್ರವಾಸ ಭಾಗ್ಯ ಕಲ್ಪಿಸಿಕೊಟ್ಟರು ಭಾರತಿ ವಿಶ್ವನಾಥ್ ಅವರಿಗೆ ನಿರಾಸೆಯಾಗಿದೆ.
ಒಟ್ಟು 15 ಸದಸ್ಯರನ್ನು ಒಳಗೊಂಡಿರುವ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಲು 9 ಮತಗಳ ಅವಶ್ಯಕತೆ ಇದ್ದು, ಭಾರತಿ ವಿಶ್ವನಾಥ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ 9 ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದರು. ಪ್ರವಾಸಕ್ಕೂ ಮುನ್ನ ನಿಮಗೆ ಮತ ಹಾಕುವುದಾಗಿ ಮೇಲೂರು ಗ್ರಾಮದ ಶಂಭುಲಿಂಗೇಶ್ವರ ದೇಗುಲದಲ್ಲಿ ಆಣೆ ಮಾಡಿದ್ದರು. ಆದರೆ ಮೂವರು ಸದಸ್ಯರು ಅಡ್ಡಮತದಾನ ಮಾಡಿದ್ದಾರೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾರತಿ ವಿಶ್ವನಾಥ್ ಅವರು ಕೇವಲ 6 ಮತ ಪಡೆದು ಸೋಲುಕಂಡಿದ್ದಾರೆ. ಮತದಾನ ಬಳಿಕವೂ ಸಹ 9 ಸದಸ್ಯರಿಂದ ಮತ್ತೆ ಆಣೆ ಪ್ರಮಾಣ ಮಾಡಿಸಲಾಗಿದ್ದು, ಈ ವೇಳೆ ಎಲ್ಲರೂ ಭಾರತಿ ವಿಶ್ವನಾಥ್‌ಗೆ ಮತ ಹಾಕಿರುವುದಾಗಿ ಆಣೆ ಮಾಡಿದ್ದಾರೆ ಅಚ್ಚರಿಗೆ ಕಾರಣವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ