Kalaburagi News: ಗ್ರಾ. ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ; ಸಿನಿಮೀಯ ರೀತಿಯಲ್ಲಿ ಸದಸ್ಯೆಯ ಅಪಹರಣಕ್ಕೆ ಯತ್ನ
ಕಲಬುರಗಿ ತಾಲೂಕಿನ ಸಿಂದಗಿ(ಬಿ) ಗ್ರಾಮದ ಸಾವಳಗಿ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಿರುವ ಹಿನ್ನಲೆ ಕ್ರೂಸರ್ ವಾಹನದಲ್ಲಿ ಬಂದಿದ್ದ ನಾಲ್ವರಿಂದ ಗ್ರಾಮ ಪಂಚಾಯತಿ ಸದಸ್ಯೆಯನ್ನ ಸಿನಿಮೀಯಮ ರೀತಿಯಲ್ಲಿ ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಕಲಬುರಗಿ, ಆ.3: ಕಲಬುರಗಿ(Kalaburagi) ತಾಲೂಕಿನ ಸಿಂದಗಿ(ಬಿ) ಗ್ರಾಮದ ಸಾವಳಗಿ ಗ್ರಾಮ ಪಂಚಾಯತಿ(Grama Panchayt)ಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ(Election)ಯಿರುವ ಹಿನ್ನಲೆ ನಿನ್ನೆ(ಆ.2) ಸಂಜೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯೆಯನ್ನ ಸಿನಿಮೀಯಮ ರೀತಿಯಲ್ಲಿ ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿದೆ. ಹೌದು ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ್ ಅವರ ಬಳಿ ಪೊಲೀಸರು ಎಂದು ಹೇಳಿಕೊಂಡು ಬಂದು ಅಪಹರಣಕ್ಕೆ ಯತ್ನಿಸಿದ್ದು, ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಅಪಹರಿಸಲು ಬಂದಿದ್ದವರಲ್ಲಿ ಓರ್ವನನ್ನ ಹಿಡಿದು ಥಳಿಸಿದ್ದಾರೆ.
ಕ್ರೂಸರ್ ವಾಹನದಲ್ಲಿ ಬಂದಿದ್ದ ನಾಲ್ವರಿಂದ ಅಪಹರಣಕ್ಕೆ ಯತ್ನ
ಇನ್ನು ಇವರು ನಾಲ್ಕು ಜನರಿದ್ದು ಕ್ರೂಸರ್ ವಾಹನದಲ್ಲಿ ಬಂದಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸದಸ್ಯೆ ನಾಗಮ್ಮನವರ ಬಳಿ ಬಂದು ನಾವು ಪೊಲೀಸರೆಂದು ಹೇಳಿ ಏಕಾಎಕಿ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ನಾಗಮ್ಮ ಪುತ್ರ ಮತ್ತು ಗ್ರಾಮಸ್ಥರು ಅಪಹರಣಕಾರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ನಾಲ್ವರು ಪರಾರಿಯಾಗಿದ್ದು, ಓರ್ವ ಆರೋಪಿ ಶಿವಕುಮಾರ್‌ನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಗ್ರಾಮಸ್ಥರು ಥಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಶಶಿಕುಮಾರ್, ಮಲ್ಲು ಕಡಗಂಚಿ ಸೇರಿದಂತೆ ಹಲವರಿಂದ ಅಪಹರಣಕ್ಕೆ ಯತ್ನ ಆರೋಪ
ಇನ್ನು ಸಾವಳಗಿ ಗ್ರಾ.ಪಂಚಾಯತಿ ಅಧ್ಯಕ್ಷರಾಗಲು ಓರ್ವ ಸದಸ್ಯರ ಬೆಂಬಲ ಅಗತ್ಯ ಹಿನ್ನೆಲೆ ಕಾಂಗ್ರೆಸ್ ಬೆಂಬಲಿತ ಶಶಿಕುಮಾರ್, ಮಲ್ಲು ಕಡಗಂಚಿ ಸೇರಿದಂತೆ ಹಲವರು ಸೇರಿ ಸದಸ್ಯೆ ನಾಗಮ್ಮ ಅಪಹರಣಕ್ಕೆ ಬಂದಿದ್ದರು ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗ್ರಾ.ಪಂಚಾಯತಿ ಸದಸ್ಯೆ ನಾಗಮ್ಮ ಹಾಗೂ ಪುತ್ರ ಮಲ್ಲಿಕಾರ್ಜುನನಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕಲಬುರಗಿ ಸಬ್ಅರ್ಬನ್ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ