ಮೈಸೂರು ಜಿಲ್ಲೆಯಲ್ಲಿ ಸರಣಿ ಅಪಘಾತ; 6 ಕಾರುಗಳು ಜಖಂ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 23, 2024 | 6:23 PM

ಹುಣಸೂರು(Hunsur) ತಾಲೂಕಿನ ಕೊಳಘಟ್ಟ ಗ್ರಾಮದ ಬಳಿ ಸರಣಿ ಅಪಘಾತ (Serial accident) ಸಂಭವಿಸಿದ್ದು, 6 ಕಾರುಗಳು ಜಖಂ ಆಗಿವೆ. ಒಂದರ ಹಿಂದೆ ಒಂದರಂತೆ ಬಂದ ಆರು ಕಾರುಗಳು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಸರಣಿ ಅಪಘಾತ; 6 ಕಾರುಗಳು ಜಖಂ
ಮೈಸೂರು ಜಿಲ್ಲೆಯಲ್ಲಿ ಸರಣಿ ಅಪಘಾತ
Follow us on

ಮೈಸೂರು, ಜೂ.23: ಜಿಲ್ಲೆಯ ಹುಣಸೂರು(Hunsur) ತಾಲೂಕಿನ ಕೊಳಘಟ್ಟ ಗ್ರಾಮದ ಬಳಿ ಸರಣಿ ಅಪಘಾತ (Serial accident) ಸಂಭವಿಸಿದ್ದು, 6 ಕಾರುಗಳು ಜಖಂ ಆಗಿವೆ. ಒಂದರ ಹಿಂದೆ ಒಂದರಂತೆ ಬಂದ ಆರು ಕಾರುಗಳು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಇದ್ದ ಕಾರು ಚಾಲಕನೊಬ್ಬ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬರುತ್ತಿದ್ದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಜಖಂ ಆಗಿದೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಇಂದ್ರಾಣಿ ನದಿಗೆ ಉರುಳಿಬಿದ್ದ ಆಟೋ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬಳಿಯ ಕಲ್ಸಂಕ ರಸ್ತೆಯಲ್ಲಿರುವ ಇಂದ್ರಾಣಿ ನದಿಗೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಉರುಳಿಬಿದ್ದ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಆಟೋದಲ್ಲಿದ್ದ 6 ಪ್ರಯಾಣಿಕರು ಪಾರಾಗಿದ್ದು, ತಡೆಗೋಡೆ ಇಲ್ಲದಿರುವುದರಿಂದ ಆಟೋ ನದಿಗೆ ಉರುಳಿಬಿದ್ದಿದೆ. ಇನ್ನು ಆಟೋ ಚಾಲಕ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿದ್ದ ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಉಡುಪಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಸಂಚು, ಅಪಘಾತದಲ್ಲೂ ಸಾಯ್ಲಿಲ್ಲ ಕೊನೆಗೆ ಗುಂಡು ಹಾರಿಸಿ ಕೊಂದ ಪತ್ನಿ

ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಮೈಸೂರು: ನಗರದ ಗೋಕುಲಂ ಬಡಾವಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಲ್ಲಿಕಾ(47) ಎಂಬುವವರು ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಡನಿಂದ ವಿಚ್ಛೇದನ ಪಡೆದು ಮೃತ ಮಲ್ಲಿಕಾ ಅವರು ಒಂಟಿಯಾಗಿ ವಾಸ ಮಾಡುತ್ತಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sun, 23 June 24