AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರದಲ್ಲಿ ಚೌಕಾಸಿ; ಕತ್ತರಿಯಿಂದ ಗ್ರಾಹಕನಿಗೆ ಚುಚ್ಚಿದ ಮಾಲೀಕ

ತಮ್ಮ ವಾಹನಕ್ಕೆ ಮ್ಯಾಟ್ ಖರೀದಿಸಲು ಮುರುಗೇಶ್ ರವರ ಅಂಗಡಿಗೆ ನಂದೀಶ್​ ಅವರು ಹೋಗಿದ್ದರು. ಆಗ ಮ್ಯಾಟ್​ಗೆ 2,300 ರೂ ಬೆಲೆ ಹೇಳಿದಾಗ ನಂದೀಶ್ 2000ಕ್ಕೆ ಕೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ. ನಂತರ ಗೂಡ್ಸ್ ವಾಹನದಿಂದ ಅಲ್ಲಿಂದ ಹೊರಡುತ್ತಿದ್ದಾಗ ನಂದೀಶ್ ಮೇಲೆ ಕತ್ತರಿ ಎಸೆದಿದ್ದಾರೆ. ಅಷ್ಟೇ ಅಲ್ಲದೆ ಬೈಕ್​ನಲ್ಲಿ ಹಿಂಬಾಲಿಸಿ ಜಗಳ ಮಾಡಿದ್ದಾರೆ.

ವ್ಯಾಪಾರದಲ್ಲಿ ಚೌಕಾಸಿ; ಕತ್ತರಿಯಿಂದ ಗ್ರಾಹಕನಿಗೆ ಚುಚ್ಚಿದ ಮಾಲೀಕ
ಹಲ್ಲೆಗೊಳಗಾದ ನಂದೀಶ್
ರಾಮ್​, ಮೈಸೂರು
| Updated By: ಆಯೇಷಾ ಬಾನು|

Updated on: Sep 23, 2024 | 10:27 AM

Share

ಮೈಸೂರು, ಸೆ.23: ವ್ಯಾಪಾರದಲ್ಲಿ ಚೌಕಾಸಿ ಮಾಡಿದ್ದಕ್ಕೆ ಕಿರಿಕ್ ಆಗಿದ್ದು ಕತ್ತರಿಯಿಂದ ಗ್ರಾಹಕನಿಗೆ ಅಂಗಡಿ ಮಾಲೀಕ ಚುಚ್ಚಿ ಗಾಯಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ಬೈಪಾಸ್ ರಸ್ತೆ ಬಳಿ ನಡೆದಿದೆ. ಘಟನೆ ಸಂಬಂಧ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಕುಶಾಲ್ ನಗರದ ಬೈಚನಹಳ್ಳಿ ಗ್ರಾಮದ ನಂದೀಶ್‌ ಎಂಬುವವರಿಗೆ ಮುರುಗೇಶ್ ಜೋಗಿ ಮಾರ್ಕೆಟಿಂಗ್​ನ ಮಾಲೀಕ ಮುರುಗೇಶ್ ಜೋಗಿ ಕತ್ತರಿಯಿಂದ ಚುಚ್ಚಿದ್ದಾರೆ.

ಹಲ್ಲೆಗೊಳಗಾದ ನಂದೀಶ್ ಅವರು ತಮ್ಮ ದೊಡ್ಡಮ್ಮನ ಮಗ ರಮೇಶ್ ಜೊತೆ ವ್ಯಾಪರದ ನಿಮಿತ್ತ ಕುಶಾಲನಗರದಿಂದ ಹುಣಸೂರಿನ ವೀರನಹೊಸಹಳ್ಳಿಗೆ ಗೂಡ್ಸ್ ವಾಹನದಲ್ಲಿ ಬಂದಿದ್ದರು. ಈ ವೇಳೆ ತಮ್ಮ ವಾಹನಕ್ಕೆ ಮ್ಯಾಟ್ ಖರೀದಿಸಲು ಮುರುಗೇಶ್ ರವರ ಅಂಗಡಿಗೆ ಹೋಗಿದ್ದರು. ಆಗ ಮ್ಯಾಟ್​ಗೆ 2,300 ರೂ ಬೆಲೆ ಹೇಳಿದಾಗ ನಂದೀಶ್ 2000ಕ್ಕೆ ಕೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ.

ನಂತರ ಗೂಡ್ಸ್ ವಾಹನದಿಂದ ಅಲ್ಲಿಂದ ಹೊರಡುತ್ತಿದ್ದಾಗ ಮುರುಗೇಶ್ ಅವರು ಅಂಗಡಿಯಿಂದಲೇ ನಂದೀಶ್ ಮೇಲೆ ಕತ್ತರಿ ಎಸೆದಿದ್ದಾರೆ. ಬಳಿಕ ಬೈಕ್ ನಲ್ಲಿ ಕೆಲವರ ಜೊತೆ ಹಿಂಬಾಲಿಸಿ ಅಡ್ಡಗಟ್ಟಿ ಮತ್ತೆ ಕಿರಿಕ್ ಮಾಡಿದ್ದಾರೆ. ಈ ವೇಳೆ ಸಹಾಯಕ್ಕೆ ಬಂದ ರಮೇಶ್ ಮೇಲೂ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಸದ್ಯ ಗಾಯಗೊಂಡ ನಂದೀಶ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮುರುಗೇಶ್ ಜೋಗಿ ಸೇರಿದಂತೆ ಮೂವರ ವಿರುದ್ದ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: FSL​ ತಜ್ಞರಿಗೆ ತಲೆನೋವಾದ ಬೆಂಗಳೂರು ಮಹಾಲಕ್ಷ್ಮೀ ಕೊಲೆ, ಪತ್ತೆಯಾಗದ ರಕ್ತದ ಕಲೆ!

ಕಾರಿನ ಹಿಂಭಾಗದ ಸೀಟಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾರೊಂದು ಪತ್ತೆಯಾಗಿದೆ. ಈ ಕಾರಿನ ಹಿಂಭಾಗದ ಸೀಟ್ ನಲ್ಲಿ ಮಲಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನದಿಂದ ಒಂದೇ ಸ್ಥಳದಲ್ಲಿ ನಿಂತಿದ್ದ ಕಾರಿನಿಂದ ವಾಸನೆ ಬರುವುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆ ನಿವಾಸಿ ರಘು (40) ಮೃತ ವ್ಯಕ್ತಿ ಎಂದು ಪತ್ತೆಯಾಗಿದೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ