TV9 ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ರೌಡಿ ಶೀಟರ್​ಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿ ವಾಪಸ್

ಕಾಂಗ್ರೆಸ್ ಮುಖಂಡ, ಸಿಎಂ ಹಾಗೂ ಡಿಸಿಎಂ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ಸಾಮಾಜ ಸೇವೆ ಹೆಸರಲ್ಲಿ ಮೈಸೂರು ಜಿಲ್ಲಾಡಳಿತ ರೌಡಿಶೀಟರ್​ ಅಶೋಕ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಅಶೋಕ್ ರೌಡಿಶೀಟರ್​ ಎಂದು ಟಿವಿ9 ವರದಿ ಬಳಿಕ ಪ್ರಶಸ್ತಿ ಹಿಂಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

TV9 ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ರೌಡಿ ಶೀಟರ್​ಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿ ವಾಪಸ್
ಕಾಂಗ್ರೆಸ್ ಮುಖಂಡ, ರೌಡಿ ಶೀಟರ್ ಅಶೋಕ್
Follow us
ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು

Updated on:Nov 22, 2023 | 8:04 AM

ಮೈಸೂರು, ನ.22: ರೌಡಿ ಶೀಟರ್​ಗೆ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ನೀಡಿರುವ ವಿಚಾರಕ್ಕೆ ಸಂಬಂಧಿಸಿ ಇದೀಗಾ ಪ್ರಶಸ್ತಿಯನ್ನು ವಾಪಸ್ಸು ಪಡೆಯಲು ಮೈಸೂರು ಜಿಲ್ಲಾಡಳಿತ‌ (Mysuru District Administration) ಮುಂದಾಗಿದೆ. ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ಅವರು ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ನವೆಂಬರ್1 ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಬಗ್ಗೆ ಟಿವಿ9 ವರದಿ ಮಾಡುತ್ತಿದ್ದಂತೆ ಇದೀಗಾ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪ್ರಶಸ್ತಿಯನ್ನ ವಾಪಸ್ಸು ಪಡೆಯಲು ಮುಂದಾಗಿದೆ.

ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂಪಡೆಯಲಾಗುತ್ತೆ ಎಂದು ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಪ್ರಶಸ್ತಿಗೆ ಹೆಸರು ಸೇರ್ಪಡೆಯಾಗಿತ್ತು‌. ಪೊಲೀಸರಿಂದ ಆತನ ಹಿನ್ನೆಲೆ, ಮಾಹಿತಿ ಪಡೆಯಲು ತಡವಾಯಿತು. ಇದೀಗಾ ಆತ ರೌಡಿ ಶೀಟರ್ ಎಂಬುದು ತಿಳಿದು ಬಂದಿದೆ. ಈ ಕಾರಣದಿಂದ ರೌಡಿ ಶೀಟರ್ ಅಶೋಕ್​ಗೆ ನೀಡಲಾಗಿದ್ದ ಪ್ರಶಸ್ತಿಯನ್ನ ವಾಪಸ್ಸು ಪಡೆಯಲಾಗುತ್ತೆ‌ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೌಡಿ‌ ಶೀಟರ್​ಗೆ ಸಿಕ್ತು ರಾಜ್ಯೋತ್ಸವ ಪ್ರಶಸ್ತಿ; ಕುತೂಹಲ ಸೃಷ್ಟಿಸಿದ ಮೈಸೂರು ಜಿಲ್ಲಾಡಳಿತದ ನಿರ್ಧಾರ

ಘಟನೆ ಹಿನ್ನೆಲೆ

ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ನೇವಲ್​ಗೆ ನವೆಂಬರ್1 ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿಕೊಟ್ಟು ಗೌರವಿಸಿತ್ತು. ಆದರೆ ಇತ್ತೀಚೆಗೆ ನಡೆದ ಮಗನ ಪುಂಡಾಟದಿಂದಾಗಿ ಅಶೋಕ್ ಅವರ ಹಿನ್ನೆಲೆ ಬಹಿರಂಗವಾಗಿತ್ತು. ಅಶೋಕ್ ಸಿಎಂ ಹಾಗೂ ಡಿಸಿಎಂ ಹಿಂಬಾಲಕರಾಗಿದ್ದಾರೆ. ಸಿಎಂ, ಡಿಸಿಎಂ ಮೈಸೂರಿಗೆ ಬಂದ್ರೆ ಸಾಕು ಅಶೋಕ್ ಹಿಂದೆ ಓಡಾಡುತ್ತಿರುತ್ತಾನೆ.‌ ಮೊನ್ನೆ ಕೂಡ ಸಿಎಂ ಮೈಸೂರಿಗೆ ಬಂದಿದ್ದ ವೇಳೆ ಪೊಲೀಸರು ಕೊಡುವ ಗೌರವ ವಂದನ ಸ್ಥಳದಲ್ಲೂ ಸಿಎಂ ಪಕ್ಕದಲ್ಲೆ‌ ನಿಂತಿದ್ದರು. ಅಲ್ಲದೆ ಕಾಂಗ್ರೆಸ್​ನ ಮುಖಂಡಾರು ಆಗಿದ್ದಾರೆ. ಇವರ ಮಗ ನೇವಲ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.ಇತ್ತೀಚೆಗೆ ನಡೆದ ನೇವಲ್ ಪುಂಡಾಡದಿಂದಾಗಿ ತಂದೆಯ ಅನೇಕ ವಿಚಾರಗಳು ಬಹಿರಂಗವಾಗಿದೆ.

ಇನ್ನು ಅಶೋಕ್ ಗೆ ಮೈಸೂರು ಜಿಲ್ಲಾಡಳಿತ ಕೊಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನ ಹೇಗೆ ಕೊಟ್ಟರು ಅನ್ನೋ ಪ್ರಶ್ನೆ ಹಲವರನ್ನು ಕಾಡಿತ್ತು. ಸಣ್ಣಪುಟ್ಟ ಪ್ರಕರಣ ಇದ್ದರು ಅಂತವರಿಗೆ ಪ್ರಶಸ್ತಿಗಳನ್ನ ನಿರಾಕರಣೆ ಮಾಡಲಾಗಿದೆ. ಆದ್ರೆ ರೌಡಿ ಶೀಟರ್ ಆಗಿದ್ರು ಜಿಲ್ಲಾಡಳಿತ ಹೇಗೆ ಪ್ರಶಸ್ತಿ ಕೊಟ್ಟಿದೆ, ಕಾಂಗ್ರೆಸ್ ಮುಖಂಡ, ಸಿಎಂ, ಡಿಸಿಎಂ ಪರಿಚಯಸ್ಥ ಅನ್ನೋ ಕಾರಣಕ್ಕೆ ಕೊಡಲಾಯಿತ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಸದ್ಯ ಈಗ ಇದೆಲ್ಲದನ್ನೂ ತೆರೆ ಬಿದ್ದಿದ್ದು, ಪ್ರಶಸ್ತಿಯನ್ನು ಹಿಂಪಡೆಯುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:02 am, Wed, 22 November 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್