Organ Donation; ಸಾವಿನಲ್ಲೂ ಸಾರ್ಥಕತೆ, ಇಬ್ಬರು ಮಹಾ ದಾನಿಗಳ ಅಂಗಾಂಗ ದಾನದಿಂದ 14 ಮಂದಿಗೆ ಮರುಜೀವ

| Updated By: ಆಯೇಷಾ ಬಾನು

Updated on: Aug 20, 2021 | 8:50 AM

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು ಇದರಿಂದ 14 ಮಂದಿಯ ಜೀವ ಉಳಿಯಲಿದೆ.

Organ Donation; ಸಾವಿನಲ್ಲೂ ಸಾರ್ಥಕತೆ, ಇಬ್ಬರು ಮಹಾ ದಾನಿಗಳ ಅಂಗಾಂಗ ದಾನದಿಂದ 14 ಮಂದಿಗೆ ಮರುಜೀವ
ಲಾರೆನ್ಸ್ ಮತ್ತು ಶೋಭಾ
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಬ್ಬರು ಮಹಾನೀಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರಿಬ್ಬರು 14 ಮಂದಿಗೆ ಮರುಜೀವ ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು ಇದರಿಂದ 14 ಮಂದಿಯ ಜೀವ ಉಳಿಯಲಿದೆ.

ಹುಣಸೂರು ಮೂಲದ ಲಾರೆನ್ಸ್ (40) ಮತ್ತು ಕುಶಾಲನಗರದ ಶೋಭಾ(48) ಎಂಬುವವರು ತಮ್ಮ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಆಗಸ್ಟ್ 16 ರಂದು ರಸ್ತೆ ಅಪಘಾತದಲ್ಲಿ ಲಾರೆನ್ಸ್ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ. ಹಾಗೂ ಶೋಭಾ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದು ಇವರ ಕುಟುಂಬ ಕೂಡ ಅಂಗಾಂಗ ದಾನಕ್ಕೆ ಮುಂದಾಗಿದೆ. ಇದರಿಂದ ಇಬ್ಬರು ದಾನಿಗಳಿಂದ 4 ಮೂತ್ರಪಿಂಡಗಳು, 2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳು ದಾನ ಮಾಡಲಾಗಿದೆ. ಇಬ್ಬರು ದಾನಿಗಳಿಂದ ಹದಿನಾಲ್ಕು ಮಂದಿಗೆ ಜೀವದಾನ ಸಿಕ್ಕಿದೆ.

ಇದನ್ನೂ ಓದಿ: Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್​ ಅಂಗಾಂಗಗಳು ಯಾರಿಗೆಲ್ಲ ಜೀವ ತುಂಬಿದೆ ಗೊತ್ತಾ? 

World Organ Donation Day 2021: ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ, ನೀವೂ ಹಾಕಿ – ಸಿಎಂ ಬೊಮ್ಮಾಯಿ