ಮೈಸೂರು: ವಿಷ ಸೇವಿಸಿ ವಾಟರ್‌ಮ್ಯಾನ್ ಆತ್ಮಹತ್ಯೆಗೆ ಯತ್ನಿಸಿದ್ದು ಆತ ಅಸ್ವಸ್ಥಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಡೆದಿದೆ. ನೇರಳೆ ಗ್ರಾಮ ಪಂಚಾಯಿತಿ ಮುಂದೆ ವಾಟರ್‌ಮ್ಯಾನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಂಪಾಪುರ ಗ್ರಾಮದ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ವಾಟರ್‌ಮ್ಯಾನ್.
ನೇರಳೆ ಗ್ರಾಮ ಪಂಚಾಯಿತಿ ಹಂಪಾಪುರ ಗ್ರಾಮದಲ್ಲಿ ಕುಮಾರಸ್ವಾಮಿ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಎಂಟು ವರ್ಷದಿಂದ ವಾಟರ್ ಮ್ಯಾನ್ ಆಗಿದ್ದರು. ಆದ್ರೆ 2016ರಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರು ಕುಮಾರಸ್ವಾಮಿಯನ್ನು ಕೆಲಸದಿಂದ ವಜಾ ಮಾಡಿದ್ದರು.¬ ಬಳಿಕ ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಕೋರ್ಟ್ ಮೊರೆ ಹೋಗಿದ್ದರು.
ಕುಮಾರಸ್ವಾಮಿಯನ್ನ ಕೆಲಸದಲ್ಲಿ ಮುಂದುವರಿಸಲು ಕೋರ್ಟ್ ಆದೇಶ ಮಾಡ್ತು. ಆದ್ರೆ ಕೋಟ್ ಆದೇಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸಕ್ಕೆ ನೇಮಿಸಿಕೊಳ್ಳದ ಹಿನ್ನೆಲೆಯಲ್ಲಿ ಬೇಸತ್ತು ಕಚೇರಿ ಮುಂದೆಯೇ ಕುಮಾರಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಕುಮಾರಸ್ವಾಮಿಯನ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಸಾವುಬದುಕಿನ ಮಧ್ಯೆ ವಾಟರ್‌ಮ್ಯಾನ್ ಕುಮಾರಸ್ವಾಮಿ ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕೊರೆದು 13 ತಿಂಗಳ ನಂತರ ಹೊರಬಂದ ಊರ್ಜಾ ಯಂತ್ರ
ಬಾಗಲಕೋಟೆ: ಹದಿನೆಂಟು ತಿಂಗಳ ಹೋರಿಗೆ 3.25 ಲಕ್ಷ ರೂಪಾಯಿ; ಕಿಲಾರಿ ತಳಿಯ ವಿಶೇಷತೆ ಏನು ಗೊತ್ತಾ?