ಟಿಪ್ಪು ಸುಲ್ತಾನ್​​ ಬಂದಾಗಲೇ ಕೊಡವರು ಹೆದರಲಿಲ್ಲ: ಸಿದ್ದು ಸುಲ್ತಾನ್ ಬಂದರೆ ಹೆದರ್​ತೀವಾ: ಪ್ರತಾಪ್ ಸಿಂಹ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2022 | 10:41 AM

ಸಿದ್ದರಾಮಯ್ಯ ವಿರುದ್ದ ಕೊಡಗಿನ ಜನರಿಗೆ ಆಕ್ರೋಶವಿದೆ. ಸಿದ್ದರಾಮಯ್ಯ ಪದೇ ಪದೇ ಕೊಡಗಿನ ಜನರಿಗೆ ನೋವು ನೀಡಿದ್ದಾರೆ.ಕೊಡಗಿನಲ್ಲಿ ಶಾಂತಿ ಕದಡಿದರೆ ಅದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಟಿಪ್ಪು ಸುಲ್ತಾನ್​​ ಬಂದಾಗಲೇ ಕೊಡವರು ಹೆದರಲಿಲ್ಲ: ಸಿದ್ದು ಸುಲ್ತಾನ್ ಬಂದರೆ ಹೆದರ್​ತೀವಾ: ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
Follow us on

ಮೈಸೂರು: ಕೊಡಗಿಗೆ ಟಿಪ್ಪು ಸುಲ್ತಾನ್ (Tipu Sultan) ​​ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದರೆ ಹೆದರುತ್ತೀವಾ? ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ. ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದು, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ. ಹಂದಿ ಮಾಂಸ ಕೂಡ ಒಂದು ಆಹಾರ ಪದ್ಧತಿ. ಹಂದಿ ಮಾಂಸ ತಿನ್ನಬೇಡಿ ಎಂದು ಯಾವ ದೇವರು ಹೇಳಿಲ್ಲ. ಹಂದಿ ಮಾಂಸ ತಿನ್ನಲು ನಿಮ್ಮ ಜಮೀರ್​, ಬೆಂಬಲಿಗರಿಗೆ ಹೇಳಿ. ಅದನ್ನ ಹೇಳುವುದಕ್ಕೆ ನಿಮಗೆ ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ: ಉದ್ಯಮಿ ಕಮ್ ಬಿಜೆಪಿ ಮುಖಂಡನ ಹನಿ ಟ್ರ್ಯಾಪ್ ಪ್ರಕರಣ: ಚುರುಕುಗೊಂಡ ವಿಚಾರಣೆ

ಮೊನ್ನೆ ಸಿದ್ದರಾಮೇಶ್ವರ ಜಾತ್ರೆಗೆ ಏಕೆ ಸಿಹಿ ಊಟ ಹಾಕಿಸಿದಿರಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಪದೇ ಪದೇ ಈ ರೀತಿ ಮಾಡುತ್ತಾರೆ. 2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ.

ನೂಲಿನಂತೆ ಸೀರೆ ಅಪ್ಪನಂತೆ ಮಗ

ಸಂಪತ್ ಬಿಜೆಪಿ ಕಾರ್ಯಕರ್ತ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಪೋಟೋ ಇದ್ದ ಮಾತ್ರಕ್ಕೆ ಆತ ಬಿಜೆಪಿ ಕಾರ್ಯಕರ್ತ ಆಗಲ್ಲ. ಆತ ನನ್ನ ಚುನಾವಣೆಯಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾನೆ. ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯರಿಂದ ಸಾವರ್ಕರ್ ಟೀಕೆ ವಿಚಾರವಾಗಿ ಮಾತನಾಡಿದ್ದು, ನೂಲಿನಂತೆ ಸೀರೆ ಅಪ್ಪನಂತೆ ಮಗ. ಇವರಿಂದ ಸಾವರ್ಕರ್‌ಗೆ ಸರ್ಟಿಫಿಕೇಟ್ ಬೇಡ ಎಂದು ಹೇಳಿದರು.

ಕೊಡಗಿನಲ್ಲಿ ಶಾಂತಿ ಕದಡಿದರೆ ಅದಕ್ಕೆ ಸಿದ್ದರಾಮಯ್ಯ ನೇರ ಹೊಣೆ

ಸಿದ್ದರಾಮಯ್ಯ ವಿರುದ್ದ ಕೊಡಗಿನ ಜನರಿಗೆ ಆಕ್ರೋಶವಿದೆ. ಸಿದ್ದರಾಮಯ್ಯ ಪದೇ ಪದೇ ಕೊಡಗಿನ ಜನರಿಗೆ ನೋವು ನೀಡಿದ್ದಾರೆ. ಕೊಡವರನ್ನು ಕೊಂದ ಟಿಪ್ಪು ಜಯಂತಿ ಮಾಡಿದ್ದಾರೆ. ಕೊಡಗಿನಲ್ಲಿ ಶಾಂತಿ ಕದಡಿದ್ದು ಸಿದ್ದರಾಮಯ್ಯ. ಈಗ ಮತ್ತೆ ಕೊಡಗಿಗೆ ದಂಡೆತ್ತಿ ಬರುತ್ತಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಶಾಂತಿ ಕದಡಿದರೆ ಅದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದು ಟಿವಿ9ಗೆ ಸಂಸದ ಪ್ರತಾಪಸಿಂಹ ಹೇಳಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:38 am, Mon, 22 August 22