ಮಾಂಸದ ಅಡುಗೆ ಮಾಡಿದ್ದು ನಿಜ, ಆದರೆ ಸಿದ್ಧರಾಮಯ್ಯ ಮಾಂಸಾಹಾರ ಸೇವಿಸಿರಲಿಲ್ಲ: ವೀಣಾ ಅಚ್ಚಯ್ಯ
ರಿಷತ್ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮನೆಗೆ ಬಂದಿದ್ದಾಗ ಸಿದ್ದರಾಮಯ್ಯ ಮಾಂಸ ಸೇವಿಸಿರಲಿಲ್ಲ. ಸಿದ್ದರಾಮಯ್ಯನವರು ಅಕ್ಕಿ ರೊಟ್ಟಿ, ಕಾಳುಪಲ್ಯ ಸೇವಿಸಿದ್ದರು ಎಂದು ಹೇಳಿದ್ದಾರೆ.
ಮೈಸೂರು: ಅವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಾಂಸಹಾರ ಸೇವಿಸಲಿಲ್ಲ. ಅಕ್ಕಿ ರೊಟ್ಟಿ, ಬಿದಿರು ಪಲ್ಯ ಊಟವನ್ನು ಸಿದ್ದರಾಮಯ್ಯ ಮಾಡಿದರು. ಅವತ್ತು ಅಲ್ಲಿ ಮಾಂಸಹಾರ ಇತ್ತು ಆದರೂ ಸಿದ್ದರಾಮಯ್ಯ ಸಸ್ಯಹಾರ ಸೇವಿಸಿದರು ಎಂದು ಮೈಸೂರಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟನೆ ನೀಡಿದರು. ಈಗ ವೈರಲ್ ಆಗುತ್ತಿರುವ ಪೋಟೋ ನಮ್ಮ ಪಕ್ಷದ ಮುಖಂಡರಾದ ಚಂದ್ರಕಲಾ ಅವರ ಮನೆಯ ಫೋಟೋ. ಅಲ್ಲೂ ಕೂಡ ಮಾಂಸಹಾರ ಇರಲಿಲ್ಲ. ಇದ್ದದ್ದು ಸಸ್ಯಹಾರ ಮಾತ್ರ. ಅಲ್ಲದೆ ಶಾಸಕ ಅಪ್ಪಚ್ ರಂಜನ್ ಒಬ್ಬ ಮೂರ್ಖ. ಆ ಮೂರ್ಖ ಇಂಥದೆಲ್ಲಾ ಸೃಷ್ಟಿಗಳನ್ನು ಮಾಡುತ್ತಿದ್ದಾನೆ ಎಂದು ಹರಿಹಾಯ್ದರು.
ಇದನ್ನೂ ಓದಿ: Siddaramiah: ಕೋಳಿ ಸಾರು ತಿಂದು ದೇಗುಲಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ ಆರೋಪ: ವಿಡಿಯೊ ವೈರಲ್
ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ: ವೀಣಾ ಅಚ್ಚಯ್ಯ
ಈ ಕುರಿತಾಗಿ ಪರಿಷತ್ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮನೆಗೆ ಬಂದಿದ್ದಾಗ ಸಿದ್ದರಾಮಯ್ಯ ಮಾಂಸ ಸೇವಿಸಿರಲಿಲ್ಲ. ಸಿದ್ದರಾಮಯ್ಯನವರು ಅಕ್ಕಿ ರೊಟ್ಟಿ, ಕಾಳುಪಲ್ಯ ಸೇವಿಸಿದ್ದರು. ಸಿದ್ದರಾಮಯ್ಯನವರು ದೇಗುಲಕ್ಕೆ ಹೋಗುವ ವಿಚಾರ ಗೊತ್ತಿರಲಿಲ್ಲ. ಆದರೆ ಸಿದ್ದರಾಮಯ್ಯ ನಮ್ಮ ಮನೆಯಲ್ಲಿ ಮಾಂಸ ಸೇವಿಸಿರಲಿಲ್ಲ. ಸಿದ್ದರಾಮಯ್ಯ ಜೊತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಬಂದಿದ್ದರು. ಎಂ.ಲಕ್ಷ್ಮಣನವರು ಅಕ್ಕಿರೊಟ್ಟಿ, ಅನ್ನ ಸಾಂಬಾರ್ ಸೇವಿಸಿದ್ದರು. ಚಪಾತಿ, ಮಟನ್, ನಾಳಿ ಕೋಳಿ ಸಾರು ಮಾಡಿದ್ದು ನಿಜಾ. ಮಡಿಕೇರಿ ಅಂದರೆ ಅತಿಥಿ ಸತ್ಕಾರಕ್ಕೆ ಹೆಸರುವಾಸಿ.
ಇದನ್ನೂ ಓದಿ: ಹಿಂದೂಗಳ ಬಗ್ಗೆ ಸಿದ್ದರಾಮಯ್ಯ ಕೊಟ್ಟಿದ್ದ ಹೇಳಿಕೆಗಳಿಗೆ ಬೇಸತ್ತು ಮೊಟ್ಟೆ ಎಸೆದೆ: ಸಂಪತ್
ಮಾಜಿ ಸಿಎಂ ಸಿದ್ದರಾಮಯ್ಯನವರಿಗಾಗಿ ನಾಟಿ ಕೋಟಿ ಸಾಂಬಾರ್ ಮಾಡಿದ್ದೆವು, ನಾನೇ ಊಟಕ್ಕೆ ಬಡಿಸಿದ್ದೆ. ಆದರೆ ಸಿದ್ದರಾಮಯ್ಯನವರು ಮಾಂಸಾಹಾರ ಸೇವಿಸಲಿಲ್ಲ. ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಟಿವಿ9ಗೆ ಪರಿಷತ್ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಪ್ರತಿಕ್ರಿಯೆ ನೀಡಿದರು.
ಕೋಳಿ ಸಾರು ತಿಂದು ದೇಗುಲಕ್ಕೆ ಸಿದ್ದರಾಮಯ್ಯ ಭೇಟಿ ಆರೋಪ:
ನಾಟಿ ಕೋಳಿ ಸಾರು ತಿಂದು ದೇಗುಲಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ ಎನ್ನಲಾಗುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಡಿಕೇರಿಯ ಅತಿಥಿ ಗೃಹದಲ್ಲಿ ಮಧ್ಯಾಹ್ನ ಕೋಳಿ ಸಾರು ಸವಿದಿದ್ದ ಸಿದ್ದರಾಮಯ್ಯ, ಮಧ್ಯಾಹ್ನದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಮಾಂಸ ತಿಂದು ದೇಗುಲಕ್ಕೆ ತೆರಳಿದ್ದಾರೆ ಎನ್ನಲಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:53 pm, Sun, 21 August 22