AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Santro Ravi: ವೈಟ್‌ ಕಾಲರ್ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್ ಕುಮಾರ್​ ಹೇಳಿದ್ದಿಷ್ಟು ​

ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ನಿತ್ಯ ಜಾಗ, ಸಿಮ್ ಸಹ ಬದಲಿಸ್ತಿದ್ದ. ಈ ಎಲ್ಲಾ ಕಾರಣಗಳಿಂದ ಆತನ ಬಂಧನ ವಿಳಂಬವಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್​ ಹೇಳಿದರು.

Santro Ravi: ವೈಟ್‌ ಕಾಲರ್ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್ ಕುಮಾರ್​ ಹೇಳಿದ್ದಿಷ್ಟು ​
ಸ್ಯಾಂಟ್ರೋ ರವಿ, ಎಡಿಜಿಪಿ ಅಲೋಕ್ ಕುಮಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 13, 2023 | 6:14 PM

ಮೈಸೂರು: ಕೆ.ಎಸ್.ಮಂಜುನಾಥ್ ಅಲಿಯಾಸ್​ ಸ್ಯಾಂಟ್ರೋ ರವಿ (Santro Ravi) ವೈಟ್‌ ಕಾಲರ್ ಕ್ರಿಮಿನಲ್‌. ಈ ಹಿಂದೆ ಸ್ಯಾಂಟ್ರೋ ರವಿ 11 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದ. ಸ್ಯಾಂಟ್ರೋ ರವಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ರಾಮ್​ಜಿ, ಸತೀಶ್​, ಮಧುಸೂದನ್‌ ಬಂಧಿತರು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Alok Kumar) ​ ಹೇಳಿದರು. ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಅವರು ಮಾತನಾಡಿ, ಸ್ಯಾಂಟ್ರೋ ರವಿ ರಾಜ್ಯದ ಹಲವೆಡೆ ಕಾರಿನಲ್ಲಿ ಸುತ್ತಾಡಿದ್ದ. ನಿನ್ನೆ ಮಂತ್ರಾಲಯದಲ್ಲಿ ಸ್ಯಾಂಟೋ ರವಿ ಆಪ್ತನನ್ನು ಬಂಧಿಸಲಾಗಿತ್ತು. ನಾವು ತೀವ್ರ ಹುಡುಕಾಟ ನಡೆಸಿದ ಬಳಿಕ ಹೊರ ರಾಜ್ಯಕ್ಕೆ ಹೋಗಿದ್ದ. ಗುಜರಾತ್‌ ಪೊಲೀಸರ ಸಹಾಯದಿಂದ ಅಹಮದಾಬಾದ್‌ನಲ್ಲಿ ಇಂದು(ಜ. 13) ಮಧ್ಯಾಹ್ನ ಸ್ಯಾಂಟ್ರೋ ರವಿ ಬಂಧನ ಮಾಡಲಾಗಿದೆ. ಆದಷ್ಟು ಬೇಗ ಬಂಧಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಅಹಮದಾಬಾದ್‌ನಿಂದ ಬೇಗ ಕರೆತರಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಪೊಲೀಸರ ಮರ್ಯಾದೆ ಉಳಿಸುವ ಕೆಲಸ ಸಿಬ್ಬಂದಿಗಳು ಮಾಡಿದ್ದಾರೆ 

ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ನಿತ್ಯ ಜಾಗ, ಸಿಮ್ ಸಹ ಬದಲಿಸ್ತಿದ್ದ. ಈ ಎಲ್ಲಾ ಕಾರಣಗಳಿಂದ ಸ್ಯಾಂಟ್ರೋ ರವಿ ಬಂಧಿಸುವುದು ವಿಳಂಬವಾಗಿತ್ತು. ಮಂಡ್ಯ, ಮೈಸೂರು, ರಾಮನಗರ ಎಸ್‌ಪಿ ನೇತೃತ್ವದ ತಂಡದಿಂದ ಸದ್ಯ ಸೆರೆ ಹಿಡಿಯಲಾಗಿದೆ. ರಾಯಚೂರು ಎಸ್ಪಿ, ಮಂಡ್ಯ ಎಸ್ಪಿ, ರಾಮನಗರ ಎಸ್ಪಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸರ ಮರ್ಯಾದೆ ಉಳಿಸುವ ಕೆಲಸ ಸಿಬ್ಬಂದಿಗಳು ಮಾಡಿದ್ದಾರೆ. 1500 ಕಿ.ಮೀ ದೂರದಲ್ಲಿ ಹೋಗಿ ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಮೀಸೆ‌, ವಿಗ್ ತೆಗೆದಿದ್ದಾ‌ನೆ. ಮಧುಸೂದನ್, ರಾಮ್ ಜೀ, ಸತೀಶ್ ದಸ್ತಗಿರಿ ಮಾಡಿದ್ದರು. 28 ಕೇಸ್​ಗಳು ಆತನ ಮೇಲಿವೆ ಎಂದು ಹೇಳಿದರು.

ಇದನ್ನೂ ಓದಿ: Santro Ravi Arrested: ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಕೊನೆಗೂ ಬಂಧನ, ಗುಜರಾತ್​ನಲ್ಲಿ ಪೊಲೀಸ್ ಬಲೆಗೆ

ಸರ್ಕಾರದ ವತಿಯಿಂದ ಬಹುಮಾನ ಘೋಷಣೆ

ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಬಹಳ ಹಳೆಯ ಕ್ರಿಮಿನಲ್. 2005ರಲ್ಲಿ ಗೂಂಡಾಕಾಯ್ದೆಯಡಿ ಸ್ಯಾಂಟ್ರೋ ರವಿ ಬಂಧಿಸಲಾಗಿತ್ತು. ಆವಾಗ 11 ತಿಂಗಳು ಕಾಲ ಜೈಲಿನಲ್ಲಿದ್ದು ಹೊರಬಂದಿದ್ದ. ಸ್ಯಾಂಟ್ರೋ ರವಿ ಬಂಧಿಸಿದ್ದಕ್ಕೆ ಸಿಎಂ ಬೊಮ್ಮಾಯಿ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ&ಐಜಿಪಿ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಸರ್ಕಾರದ ವತಿಯಿಂದ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್​ ತಿಳಿಸಿದರು.

ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತದೆ: ಆರಗ ಜ್ಞಾನೇಂದ್ರ 

ಇನ್ನು​ ಸ್ಯಾಂಟ್ರೋ ರವಿ ಬಂಧನ ಕುರಿತಾಗಿ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ವಡೋದರಾದಿಂದ ಇಂದು ರಾತ್ರಿ ಅಥವಾ ನಾಳೆ ಕರೆತರುತ್ತಾರೆ. ಬಂಧನದ ಪ್ರಕ್ರಿಯೆಗಳನ್ನು ಮುಗಿಸಿ ಪೊಲೀಸರು ಕರೆತರುತ್ತಾರೆ. 11 ದಿನಗಳ ನಂತರ ವಿಶೇಷ ಪೊಲೀಸರ ತಂಡದಿಂದ ಬಂಧನ ಮಾಡಲಾಗಿದೆ. ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು. ಯಾವ ರಾಜಕಾರಣಿ, ಅಧಿಕಾರಿ ಭಾಗಿಯಾಗಿದ್ರೂ ತನಿಖೆ ನಡೆಯುತ್ತೆ ಎಂದು ಹೇಳಿದರು.

ಸ್ಯಾಂಟ್ರೋ ರವಿ ಬಂಧನ ಸಮಾಧಾನ ತಂದಿದೆ ಎಂದ ಪತ್ನಿ

ಟಿವಿ9ಗೆ ಕೆ.ಎಸ್.ಮಂಜುನಾಥ್ ಅಲಿಯಾಸ್​ ಸ್ಯಾಂಟ್ರೋ ರವಿ ಪತ್ನಿ ಹೇಳಿಕೆ ನೀಡಿದ್ದು, ಸ್ಯಾಂಟ್ರೋ ರವಿ ಬಂಧನ ಸಮಾಧಾನ ತಂದಿದೆ. ರಾಜ್ಯ ಪೊಲೀಸರು ಹಾಗೂ ಮಾಧ್ಯಮಕ್ಕೆ ಧನ್ಯವಾದ ತಿಳಿಸುತ್ತೇನೆ. ಸ್ಯಾಂಟ್ರೋ ರವಿಗೆ ಕಠಿಣ ಶಿಕ್ಷೆಯಾಗಬೇಕು. ನಾನು ಬಂಧನದಲ್ಲಿದ್ದಾಗ ಪರಪ್ಪನ ಅಗ್ರಹಾರ ಜೈಲಿನಲ್ಲೇ ಧಮ್ಕಿ ಹಾಕಿದ್ದ. ದರೋಡೆ ಕೇಸ್‌ನಲ್ಲಿ ಬಿಡುಗಡೆಯಾದ್ರೂ ಮತ್ತೆ ಕೇಸ್ ಹಾಕಿಸ್ತೇನೆಂದಿದ್ದ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.