ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆಯರು; 10 ಜನರ ಬಾಳಿಗೆ ಬೆಳಕಾದರು

ಮೈಸೂರು ನಗರದ ಬೆಲವತ್ತದ ನಿವಾಸಿ ಸುಧಾ(48) ಹಾಗೂ ಜೆಪಿ ನಗರದ ಗಂಗಾಂಬಿಕೆ ಸಾವಿನಲ್ಲೂ ಸಾರ್ಥಕತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು ತಮ್ಮ ಈ ಇಬ್ಬರು ಅಂಗಾಂಗಳನ್ನು ದಾನ ಮಾಡುವ ಮೂಲಕ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಜನರ ಬಾಳಿಗೆ ಬೆಳಕಾಗಿದ್ದಾರೆ.

ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆಯರು; 10 ಜನರ ಬಾಳಿಗೆ ಬೆಳಕಾದರು
ಗಂಗಾಂಬಿಕೆ(73), ಸುಧಾ(48)
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2023 | 2:11 PM

ಮೈಸೂರು, ಜು.19: ನಗರದ ಬೆಲವತ್ತದ ನಿವಾಸಿ ಸುಧಾ(48) ಅವರು ಜುಲೈ.15ರಂದು ಅಪಘಾತ(Accident)ದಿಂದ ಗಾಯಗೊಂಡಿದ್ದರು. ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು ಮೆದುಳು‌ ನಿಷ್ಕ್ರಿಯವಾಗಿತ್ತು. ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಸುಧಾ ಅವರು ಮತ್ತೆ ಮೊದಲಿನಂತಾಗುವ ಸಾಧ್ಯತೆಯಿರಲಿಲ್ಲ. ಈ ವೇಳೆ ಸುಧಾ ಮನೆಯವರು ಮಹತ್ವದ ನಿರ್ಧಾರ ಕೈಗೊಂಡು, ಅದರಂತೆ ಸುಧಾ ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಅದರಂತೆ ಸುಧಾ ಅವರ ಯಕೃತ್ತು ಮೂತ್ರಪಿಂಡ ಕವಾಟು, ಕಾರ್ನಿಯಾ, ಶ್ವಾಸಕೋಶವನ್ನ 6 ಜನರಿಗೆ ದಾನ‌ ಮಾಡಲಾಯಿತು.

ಪುನೀತ್ ರಾಜಕುಮಾರ್ ಅವರ ಪ್ರೇರಣೆಯಿಂದ 73 ವರ್ಷದ ಗಂಗಾಂಬಿಕೆ ಅಂಗಾಂಗ ದಾನ

ಇನ್ನು ಮೈಸೂರಿನ ಜೆಪಿ ನಗರದ 73 ವರ್ಷದ ಗಂಗಾಂಬಿಕೆ ಎನ್ನುವವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರಿಗೂ ಚಿಕಿತ್ಸೆ ನೀಡಿದರು ಪ್ರಯೋಜನವಾಗಲಿಲ್ಲ. ಈ ಕಾರಣಕ್ಕೆ ಗಂಗಾಂಬಿಕೆ‌ ಮನೆಯವರು ಸಮಾಜಕ್ಕೆ ಪ್ರೇರಣೆಯಾಗುವ ದೃಷ್ಟಿಯಿಂದ ಅವರ ಯಕೃತ್, ಎರಡು ಮೂತ್ರಪಿಂಡಗಳನ್ನು ದಾನ ಮಾಡುವ ಮುಖಾಂತರ ನಾಲ್ಕು ಜನರ ಬದುಕಿಗೆ ಬೆಳಕಾಗಿದ್ದಾರೆ. ಇದಕ್ಕೆ ನಟ ಪುನೀತ್ ರಾಜಕುಮಾರ್ ಅವರ ಪ್ರೇರಣೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.

ಇದನ್ನೂ ಓದಿ:Karnataka Budget 2023: ದೇಶದಲ್ಲೇ ಮೊದಲ ಅಂಗಾಂಗ ಜೋಡಣೆ ಆಸ್ಪತ್ರೆ ಸ್ಥಾಪನೆ, ಸಿದ್ದರಾಮಯ್ಯ ಘೋಷಣೆ

ಸಾವಿನಲ್ಲೂ ಸಾರ್ಥಕತೆ ಮೆರದ ಸುಧಾ ಹಾಗೂ ಗಂಗಾಂಬಿಕೆ ಅವರ ಮೃತದೇಹಕ್ಕೆ ಸಕಲ ಗೌರವ

ಹೌದು ಸಾವಿನಲ್ಲೂ ಸಾರ್ಥಕತೆ ಮೆರೆದ ಸುಧಾ ಹಾಗೂ ಗಂಗಾಂಬಿಕೆ ಅವರ ಮೃತದೇಹಕ್ಕೆ ಸಕಲ ಗೌರವವನ್ನು ಸಲ್ಲಿಸಲಾಯ್ತು. ಆಸ್ಪತ್ರೆ ಸಿಬ್ಬಂದಿ ಸರತಿ ಸಾಲಿನಲ್ಲಿ ನಿಂತು ಅಂತಿಮ ಗೌರವ ಸಮರ್ಪಣೆ ಮಾಡಿದರು. ದೀಪದಿಂದ ದೀಪವ ಹಚ್ಚಬೇಕು ಎನ್ನುವ ಮಾತಿನಂತೆ ಸಾವಿನ ನೋವಿನಲ್ಲೂ ಮನೆಯವರ ಸಮಯಪ್ರಜ್ಞೆಯಿಂದ ಹಾಗೂ ಅವರ ಧೃಡ ನಿರ್ಧಾರದಿಂದ ಹಲವರ ಬಾಳು ಬೆಳಗಿದೆ. ಇದು ಎಲ್ಲರಿಗೂ ಮಾದರಿಯಾಗಲಿ ಎನ್ನುವುದೇ ಎಲ್ಲರ ಆಶಯ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Wed, 19 July 23

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us