ಮೈಸೂರು: ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಜ್ಯೋತಿನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ನಿರ್ಗಮನ ಪಥಸಂಚಲನ ಆರಂಭವಾಗಿದ್ದು, 242 ಅಭ್ಯರ್ಥಿಗಳಲ್ಲಿ 21 ಅಭ್ಯರ್ಥಿಗಳು ಪಿಯುಸಿ ಮತ್ತು ಉಳಿದ ಎಲ್ಲರೂ ಪದವಿ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಪೂರೈಸಿದವರಾಗಿದ್ದಾರೆ.
ಮೈಸೂರಿನಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ನಿರ್ಗಮನ ಪಥಸಂಚಲನ ಭಾಗಿಯಾದ ಅಭ್ಯರ್ಥಿಗಳು :
ಎಂಎ 13
ಎಂಎಸ್‌ಸಿ 11
ಎಂಕಾಂ 11
ಎಂಎ ಬಿಎಎಡ್ 02
ಎಂಎಸ್‌ಸಿ ಬಿಎಡ್ 01
ಬಿಇ 14
ಬಿಎಸ್ಸಿ 23
ಪೊಲೀಸರ ಮೇಲೂ ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಪೊಲೀಸರ ಕಡೆಯಿಂದಲೂ ಇತ್ತೀಚೆಗೆ ಅಪರಾಧ ಹೆಚ್ಚುತ್ತಿವೆ. ಹೀಗಾಗಿ ಪೊಲೀಸರ ವಿರುದ್ಧವೂ ಎಸ್‌ಪಿ, ಡಿಜಿ ಕಚೇರಿಗಳಲ್ಲಿ ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಂದ ಅಪರಾಧಕ್ಕೊಳಗಾದವರು ದೂರು ನೀಡಬೇಕು. ಅದಕ್ಕಾಗಿ ಅಗತ್ಯ ವಾತಾವರಣ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಬಳಿಕ ಮಹಿಳಾ ಪೊಲೀಸ್ ವ್ಯವಸ್ಥೆ ಕುರಿತು ಮಾತನಾಡಿದ ಅವರು, ಮಹಿಳೆ ಅಬಲೆ ಅಂತಾ ಏಕೆ ಹೇಳಿದರು ಗೊತ್ತಿಲ್ಲ. ನಾನು ಅಬಲೆ ಅಲ್ಲ ಸಬಲೆ. ನನ್ನನ್ನು ಮಾತ್ರವಲ್ಲ ಸಮಾಜವನ್ನು ರಕ್ಷಣೆ ಮಾಡುತ್ತೇನೆ ಎನ್ನುವುದನ್ನು ಮಹಿಳೆಯರು ತೋರಿಸಿದ್ದಾರೆ ಎಂದು ಹೇಳಿದರು.
ವಿದೇಶದಿಂದ ಬರುವ ಶತೃಗಳನ್ನು ಎದುರಿಸಲು ಸೈನಿಕರಿದ್ದಾರೆ. ನಮಗೆ ಸವಾಲಾಗಿರುವುದು 125 ಕೋಟಿಯ ಈ ದೇಶದ ಆತಂರಿಕ ರಕ್ಷಣೆ. ಇದನ್ನು ಸೈನಿಕರು ಮಾಡಲು ಸಾಧ್ಯವಿಲ್ಲ. ಇದನ್ನು ಮಾಡುತ್ತಿರುವುದು ಪೊಲೀಸರು. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಉತ್ತಮವಾಗಿ ನಿರ್ವಹಿಸುತ್ತಿದೆ. ಪೊಲೀಸರು ಅಂದರೆ ಗಂಡಸರು ಎನ್ನುವ ಪರಿಕಲ್ಪನೆ ಇತ್ತು. ನೂರಕ್ಕೆ 25 ಭಾಗ ಮಹಿಳೆಯರು ಇರಬೇಕು. ಈಗ ಅದು ಬದಲಾಗಿದೆ ರಾಜ್ಯದಲ್ಲಿ ಶೇ. 10 ರಷ್ಟು ಇದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ವಿದ್ಯಾರ್ಹತೆ ಪಿಯುಸಿ. ಆದರೆ ನಿಮ್ಮ ವಿದ್ಯಾರ್ಹತೆ ಪದವಿ ಸ್ನಾತಕೋತ್ತರ ಪದವಿ ಇದೆ. 242 ಜನರಲ್ಲಿ ಹೆಚ್ಚು ಅಭ್ಯರ್ಥಿಗಳು ಪದವಿ ಪಡೆದಿದ್ದೀರಿ. ಇದರಿಂದ ಪೊಲೀಸ್ ಇಲಾಖೆಯ ಶಿಸ್ತು ಸಂಯಮ ಇರಬೇಕು. ಪೊಲೀಸರ ಬಗ್ಗೆ ಜನರಿಗೆ ಭಯ ಇರಬಾರದು. ಅಪರಾಧಿಗಳಿಗೆ ದರೋಡೆಕೋರರ ಕ್ರಿಮಿನಲ್‌ಗಳಿಗೆ ಟೆರರ್ ಆಗಿರಬೇಕು. ಪೊಲೀಸ್ ಠಾಣೆಗೆ ಬರುವವರನ್ನು ಗೌರವಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯ ಗುರಿ
ಇತ್ತೀಚಿಗಿನ ಪ್ರಕರಣದ ಶೇ. 35 ರಷ್ಟು ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ. ಮಹಿಳೆ ಎಲ್ಲವನ್ನು ಪುರುಷ ಅಧಿಕಾರಿ ಬಳಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಮೂವರು ಮಹಿಳಾ ಪೇದೆಯರು ಬೇಕು. ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯ ಗುರಿ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಪತ್ತೆ ಹಚ್ಚಲು ಅತ್ಯಾಧುನಿಕ ತರಬೇತಿ ಪೊಲೀಸ್ ಇಲಾಖೆ ಬಲಪಡಿಸಲು ಎಲ್ಲಾ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಫ್‌ಎಸ್‌ಎಲ್ ಲ್ಯಾಬ್ ಅವಶ್ಯಕತೆ ಇದೆ. ಎಫ್‌ಎಸ್‌ಎಲ್ ಲ್ಯಾಬ್‌ಗಳನ್ನು ಹೆಚ್ಚು ಬಲ ಪಡಿಸುತ್ತಿದ್ದೇವೆ ಎಂದು ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮೈಸೂರು: ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿ
ಮೈಸೂರು ನಗರದ ಶಾಲಾ -ಕಾಲೇಜು ಹೆಣ್ಣು ಮಕ್ಕಳಿಗೆ ಆಯೋಜಿಸಿರುವ ಸ್ವಯಂ ರಕ್ಷಣಾ ತರಬೇತಿ ತರಬೇತಿ ಕಾರ್ಯಕ್ರಮವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದ್ದಾರೆ. ನಗರದ ಕೆಎಸ್ಆರ್ಪಿ ಮೈದಾನದಲ್ಲಿ ನಡೆಯುತ್ತಿದೆ. ಪೋಲಿಸ್ ಇಲಾಖೆಯ ಕೆಎಸ್ಆರ್ಪಿ ಐದನೇ ತಂಡದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸ್ವಯಂ ರಕ್ಷಣಾ ಕುರಿತು ಗೃಹ ಸಚಿವರಿಗೆ ಪ್ರದರ್ಶನ ಮಾಡಿದ ಹೆಣ್ಣು ಮಕ್ಕಳು, ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್‌ಪಿ ಚೇತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ:
ಈ ಮೊದಲು ಜೈಲಿನಲ್ಲಿದ್ದವರು ಯಾರೂ ಗೃಹ ಸಚಿವರಾಗಿಲ್ಲ; ಬಂಧಿಖಾನೆ ಮಂಡಳಿ ವಿಧೇಯಕ ಚರ್ಚೆ ವೇಳೆ ಆರಗ ಜ್ಞಾನೇಂದ್ರ
ಈ ಮೊದಲು ಜೈಲಿನಲ್ಲಿದ್ದವರು ಯಾರೂ ಗೃಹ ಸಚಿವರಾಗಿಲ್ಲ; ಬಂಧಿಖಾನೆ ಮಂಡಳಿ ವಿಧೇಯಕ ಚರ್ಚೆ ವೇಳೆ ಆರಗ ಜ್ಞಾನೇಂದ್ರ
Published On - 10:25 am, Tue, 28 September 21