ಮೈಸೂರು: ಪಾರ್ಕ್​ನಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಬುದ್ಧಿ ಹೇಳಿದ ಕಾನ್ಸ್​ಟೇಬಲ್​ ಮೇಲೆ ಹಲ್ಲೆ

ಪಾರ್ಕ್​ನಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಪೊಲೀಸ್ ಕಾನ್ಸ್​​ಟೇಬಲ್​ಗೆ ಬುದ್ಧಿ ಹೇಳುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ತಪ್ಪು ಅಂತ ಹೇಳುತ್ತಾರೆ.

ಮೈಸೂರು: ಪಾರ್ಕ್​ನಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಬುದ್ಧಿ ಹೇಳಿದ ಕಾನ್ಸ್​ಟೇಬಲ್​ ಮೇಲೆ ಹಲ್ಲೆ
ಹಲ್ಲೆಗೊಳಗಾದ ಪೊಲೀಸ್ ಕಾನ್ಸ್​ಟೇಬಲ್
Follow us
TV9 Web
| Updated By: sandhya thejappa

Updated on:Sep 27, 2021 | 4:24 PM

ಮೈಸೂರು: ಪಾರ್ಕ್​ನಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಬುದ್ಧಿ ಹೇಳಿದ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಮಾಡಿದ ಘಟನೆ ಮೈಸೂರಿನ ಸಿದ್ದಾರ್ಥ ನಗರದ ಪಾರ್ಕ್​ವೊಂದರಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ತಪ್ಪು ಎಂದು ಕಾನ್ಸ್​​ಟೇಬಲ್​ ಮುರುಳಿಧರ ಹೇಳುತ್ತಾರೆ. ಈ ವೇಳೆ ಕಾನ್ಸ್​​ಟೇಬಲ್​ ಮುರುಳಿಧರನನ್ನು ಇಬ್ಬರು ಯುವಕರು ಗುರಾಯಿಸಿಕೊಂಡು ಹೋಗುತ್ತಾರೆ. ನಂತರ ಬೈಕ್​ನಲ್ಲಿ ವೇಗವಾಗಿ ಬಂದು ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ ಯುವಕರು ಪರಾರಿಯಾಗಿದ್ದಾರೆ. 

ಗಾಯಗೊಂಡ ಮುರುಳೀಧರ್ ಮೈಸೂರಿನ ನಜರ್ ಬಾದ್ ಠಾಣೆಯ ಪೊಲೀಸ್ ಕಾನ್ಸ್​​ಟೇಬಲ್​ಗೆ ಆಗಿದ್ದಾರೆ. ಸರಗಳ್ಳತನ ಹೆಚ್ಚಾಗಿದ್ದರಿಂದ ಪೊಲೀಸರು ಗಸ್ತಿನಲ್ಲಿದ್ದರು. ಕ್ರೈಂ ಪ್ರಕರಣಗಳು ಕೂಡಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಚ್ಚಾಗುತ್ತಿದ್ದು, ಇದೀಗಾ ಪೊಲೀಸರ ಮೇಲೆಯೇ ಹಲ್ಲೆ ನಡೆದಿದೆ.

ಆರೋಪಿಗೆ ಗುಂಡು ಹಾರಿಸಿದ ಪೊಲೀಸ್ ಸ್ಥಳ ಮಹಜರು ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಗುಂಡು ಹಾರಿಸಿ ಆರೋಪಿ ಸ್ಟಾಲಿನ್​ನನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರವಿಂದ್ ಅಲಿಯಾಸ್ ಲೀ ಕೊಲೆ ಆರೋಪಿ ಸ್ಟಾಲಿನ್‌ನನ್ನು ಸ್ಥಳ ಮಹಜರಿಗಾಗಿ ಪೊಲೀಸರು ಕರೆದೊಯ್ದಿದ್ದರು ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಇದನ್ನೂ ಓದಿ

Bharat Bandh: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು; ಪೋಸ್ಟ್​ಮಾರ್ಟಮ್​ ನಂತರ ಮಾಹಿತಿ ನೀಡುತ್ತೇವೆಂದ ಪೊಲೀಸರು

ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಗುಂಡು, ಆರೋಪಿ ಮತ್ತು ಮುಖ್ಯಪೇದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

(Youth attack on police Constable in siddharth nagar mysuru)

Published On - 2:44 pm, Mon, 27 September 21