ಇಂದು ಈ ಮಾರ್ಗದಲ್ಲಿ ಪ್ರಯಾಣಿಕರಿಗಿಲ್ಲ ಮೆಟ್ರೋ ಸೇವೆ!

ಬೆಂಗಳೂರು: 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಹಿನ್ನೆಲೆ ಇಂದು ಹಸಿರು ಮಾರ್ಗ ಮೆಟ್ರೋ ಸ್ಥಗಿತಗೊಳ್ಳಲಿದೆ. ಆರ್.ವಿ.ರಸ್ತೆ-ಯಲಚೇನಹಳ್ಳಿ ಮಾರ್ಗದಲ್ಲಿ ಸಾಗುವ ಮೆಟ್ರೋ ಇಂದು ಅಂದರೆ ಒಂದು ದಿನದ ಮಟ್ಟಿಗೆ ತನ್ನ ಸಂಚಾರವನ್ನು ನಿಲ್ಲಿಸಲಿದೆ. ರೀಚ್-4ಮಾರ್ಗಕ್ಕೆ ವಿದ್ಯುತ್ ಸ್ವೀಕರಿಸುವ ಉಪಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅದಕ್ಕಿಂತ ಮುಂದುವೆರೆದು ಅಂಜನಾಪುರದ ನಿಲ್ದಾಣದ ವರೆಗೆ 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಹೀಗಾಗಿ ಮೆಟ್ರೋ ಸಂಚಾರ ಇರುವುದಿಲ್ಲ. ಇನ್ನು ಇದೇ ಹಸಿರು ಮಾರ್ಗದ ಮೆಟ್ರೋ ನಾಗಸಂದ್ರ-ಆರ್.ವಿ.ರಸ್ತೆ ನಡುವೆ […]

ಇಂದು ಈ ಮಾರ್ಗದಲ್ಲಿ ಪ್ರಯಾಣಿಕರಿಗಿಲ್ಲ ಮೆಟ್ರೋ ಸೇವೆ!
ಸಾಧು ಶ್ರೀನಾಥ್​

Updated on: Feb 16, 2020 | 11:25 AM

ಬೆಂಗಳೂರು: 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಹಿನ್ನೆಲೆ ಇಂದು ಹಸಿರು ಮಾರ್ಗ ಮೆಟ್ರೋ ಸ್ಥಗಿತಗೊಳ್ಳಲಿದೆ. ಆರ್.ವಿ.ರಸ್ತೆ-ಯಲಚೇನಹಳ್ಳಿ ಮಾರ್ಗದಲ್ಲಿ ಸಾಗುವ ಮೆಟ್ರೋ ಇಂದು ಅಂದರೆ ಒಂದು ದಿನದ ಮಟ್ಟಿಗೆ ತನ್ನ ಸಂಚಾರವನ್ನು ನಿಲ್ಲಿಸಲಿದೆ.

ರೀಚ್-4ಮಾರ್ಗಕ್ಕೆ ವಿದ್ಯುತ್ ಸ್ವೀಕರಿಸುವ ಉಪಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅದಕ್ಕಿಂತ ಮುಂದುವೆರೆದು ಅಂಜನಾಪುರದ ನಿಲ್ದಾಣದ ವರೆಗೆ 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಹೀಗಾಗಿ ಮೆಟ್ರೋ ಸಂಚಾರ ಇರುವುದಿಲ್ಲ.

ಇನ್ನು ಇದೇ ಹಸಿರು ಮಾರ್ಗದ ಮೆಟ್ರೋ ನಾಗಸಂದ್ರ-ಆರ್.ವಿ.ರಸ್ತೆ ನಡುವೆ ಎಂದಿನಂತೆ ಮೆಟ್ರೋ ಸೇವೆ ಲಭ್ಯವಿರಲಿದೆ. ಹಾಗೂ ಬೈಯಪ್ಪನಹಳ್ಳಿ-ಮೈಸೂರುವರೆಗಿನ ನೇರಳೆ ಮಾರ್ಗದ ರೈಲು ಸಂಚಾರದಲ್ಲೂ ಬದಲಾವಣೆ ಇಲ್ಲ. ನಾಗಸಂದ್ರ ಮತ್ತು ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಫೆಬ್ರವರಿ 17ರಂದು ಬೆಳಗ್ಗೆ 5ರಿಂದ ಎಂದಿನಂತೆ ಸೇವೆ ಪುನರಾಂಭವಾಗಲಿದೆ ಎಂದು ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us