Milk Price: ನಂದಿನಿ ಹಾಲಿನ ಬೆಲೆ ಹೆಚ್ಚಳ: ಸಭೆ ಬಳಿಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ

ಕೊನೆಗೂ ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ಬೆಲೆ ಹೆಚ್ಚಳ ಮಾಡಿದೆ. ಈ ಬಗ್ಗೆ ಸಭೆ ಬಳಿಕ ಕೆಎಂಎಫ್ ಅಧ್ಯಕ್ಷ ಬಾಲಾಚಂದ್ರ ಜಾರಕಿಗೊಳಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Milk Price: ನಂದಿನಿ ಹಾಲಿನ ಬೆಲೆ ಹೆಚ್ಚಳ: ಸಭೆ ಬಳಿಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ
Nandini Milk
TV9kannada Web Team

| Edited By: Ramesh B Jawalagera

Nov 23, 2022 | 5:59 PM

ಬೆಂಗಳೂರು: ಕೆಎಂಎಫ್(KMF) ನಂದಿನಿ ಹಾಲಿನ( Nandini Milk) ಬೆಲೆ ಹೆಚ್ಚಳ ಮಾಡಿದೆ. ಪ್ರತಿ ಲೀಟರ್​ ಹಾಲಿನ ಬೆಲೆ 2 ರೂ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಬಾಲಚಂದ್ರ ಜಾರಕಿಹೊಳಿ (balachandra jarkiholi) ಘೋಷಣೆ ಮಾಡಿದ್ದಾರೆ. ಕೆಎಂಎಫ್ ನಂದಿನಿ ಹಾಲು ಲೀಟರ್ ಗೆ 2 ರೂಪಾಯಿ ಹೆಚ್ಚಿಸಿದ್ದು, ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆಯಾಗಿದೆ. ನಂದಿನಿ ಹಾಗೂ ಮೊಸರಿನ ಪರಿಸ್ಕೃತ ದರ ನಾಳೆಯಿಂದಲೇ (ನವೆಂಬರ್ 24) ಜಾರಿಗೆ ಬರಲಿದೆ.

ಇಂದು(ನವೆಂಬರ್ 23) ಬೆಂಗಳೂರಿನಲ್ಲಿ ನಡೆದ ಕೆಎಂಎಫ್​ ನಿರ್ದೇಶಕರ ಸಭೆಯಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದು,  ನಂದಿನಿ ಹಾಲಿನ ದರ ಏರಿಕೆ ನಾಳೆಯಿಂದಲೇ (ನವೆಂಬರ್ 24) ಜಾರಿಗೆ ಬರಲಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಹೆಚ್ಚಳ ಮಾಡಿರುವ ದರದಲ್ಲಿ ಪೂರ್ತಿ ಹಣ ಹಾಲು ಉತ್ಪಾದಕರಿಗೆ ನೀಡಲು ಕೆಎಂಎಫ್​ ನಿರ್ಧರಿಸಿದೆ. ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಸರಾಸರಿ 31ರಿಂದ 32 ರೂಪಾಯಿ ಸಿಗಲಿದೆ ಎಂದು ತಿಳಿಸಿದರು.

ಹಾಲಿನ ದರ ಸಂಬಂಧ ಕಳೆದ 15 ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್​ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಮೊನ್ನೇ ಅಷ್ಟೇ ಕೆಎಂಎಫ್​ ಹಾಲಿನ ದರ ಹೆಚ್ಚಿಸಿತ್ತು. ಆದ್ರೆ, ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ಆದ್ರೆ, ಇದೀಗ ಮತ್ತೆ ಕೆಎಂಎಫ್​ ಸಭೆ ಸೇರಿ ಅಂತಿಮವಾಗಿ ನಂದಿನಿ ಹಲು ಹಾಗೂ ಮೊಸರಿನ ದರ ಹೆಚ್ಚಿಸಿದೆ.

  • ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37ರಿಂದ 39 ರೂಪಾಯಿಗೆ ಏರಿಕೆ* ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರಿಂದ 40 ರೂಪಾಯಿಗೆ ಹೆಚ್ಚಳ

    * ಹೋಮೋಜಿನೈಸ್ಡ್ ಹಸುವಿನ ಹಾಲು 42ರಿಂದ 44 ರೂಪಾಯಿಗೆ ಹೆಚ್ಚಳ,

  •  ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43ರಿಂದ 45 ರೂಪಾಯಿಗೆ ಏರಿಕೆ* ಹೋಮೋಜಿನೈಸ್ಡೇ ಸ್ಟ್ಯಾಂಡರ್ಡ್ ಹಾಲು 44ರಿಂದ 46 ರೂಪಾಯಿಗೆ ಏರಿಕೆ* ನಂದಿನಿ ಸಮೃದ್ಧಿ ಹಾಲು 48ರಿಂದ 50 ರೂಪಾಯಿಗೆ ಏರಿಕೆ* ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50ರಿಂದ 52 ರೂಪಾಯಿಗೆ ಏರಿಕೆ
  • ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆ ರೂಪಾಯಿ ಏರಿಕೆಯಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada