17 ಚಾಕ್​ಪೀಸ್​ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯುವಕನ ಸಾಧನೆ

| Updated By: ಆಯೇಷಾ ಬಾನು

Updated on: Jul 04, 2021 | 8:19 AM

ಕೊರೊನಾದಿಂದ ಕಾಲೇಜ್ಗಳು ಬಂದ್ ಆಗಿದ್ರಿಂದ ಆತನಿಗೆ ಮನೆಯಲ್ಲಿ ಇದ್ದೂ ಇದ್ದೂ ಬೋರ್‌ ಆಗಿತ್ತು. ಹೊಸದೆನೋ ಕಲಿಯುವ ಹಂಬಲ ಮೂಡಿತ್ತು. ಏನಾದ್ರೂ ಸಾಧನೆ ಮಾಡ್ಬೇಕು ಎಂಬ ಸಂಕಲ್ಪ ಮಾಡಿದ್ದ. ಆತನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರನ್ನ ದಾಖಲಿಸಿದ್ದಾನೆ.

17 ಚಾಕ್​ಪೀಸ್​ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯುವಕನ ಸಾಧನೆ
ಚಾಕ್ಪೀಸ್ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ
Follow us on

ಕಾರವಾರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಬಸಾಕುಳಿ ಗ್ರಾಮದ ಯುವಕ ಪ್ರದೀಪ ನಾಯ್ಕ್ ಚಾಕ್ಪೀಸ್‌ನಲ್ಲಿ ತನ್ನ ಕಲೆಯನ್ನ ಪ್ರದರ್ಶಿಸಿ ಕಲೆಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ.

ಸತತ 2 ವರ್ಷಗಳಿಂದ ಚಾಕ್ಪೀಸ್‌ನಲ್ಲಿ ಕೆತ್ತನೆಯನ್ನು ಹವ್ಯಾಸವಾಗಿಸಿಕೊಂಡ ಪ್ರದೀಪ್ ಮೊದ ಮೊದಲು ಇಂಗ್ಲಿಷ್ ಅಕ್ಷರಗಳನ್ನು ಕೆತ್ತುವ ಅಭ್ಯಾಸ ಮಾಡುತ್ತಿದ್ದರು. ಬಳಿಕ ತನ್ನ ಗೆಳೆಯರ ಹೆಸರು ಹಾಗೇ ಭಗತ್ ಸಿಂಗ್, ಬುದ್ಧ, ಗಾಂಧೀಜಿ ಸೇರಿ ಹಲವು ಮಹಾನ್ ವ್ಯಕ್ತಿಗಳ ಹೆಸರುಗಳನ್ನ ಕೆತ್ತಿ ಗಮನ ಸೆಳೆದಿದ್ರು. ಈಗ 17 ಚಾಕ್ಪೀಸ್ಗಳ ಮೇಲೆ 18 ಗಂಟೆಯಲ್ಲಿ ರಾಷ್ಟ್ರಗೀತೆಯನ್ನ ಕೆತ್ತುವ ಮೂಲಕ, ತಮ್ಮ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗುವಂತೆ ಮಾಡಿದ್ದಾರೆ.

ಚಾಕ್ಪೀಸ್ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ

ಇನ್ನು ಪ್ರದೀಪ್‌ ಸಂಗೀತ, ತಬಲಾ, ಚಿತ್ರಕಲೆಯಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಈಗ ಚಾಕ್ಪೀಸ್ ಆರ್ಟ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಸೇರುವಂತೆ ಮಾಡಿದ್ದಾರೆ. ಈ ಸಾಧನೆಗೆ ತಂದೆ ಮಂಜುನಾಥ ನಾಯ್ಕ್, ತಾಯಿ ಚಂದ್ರಕಲಾ, ಗುರುಗಳು, ಸ್ನೆಹಿತರ ಬಳಗದಿಂದ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

ಒಟ್ಟಾರೇ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ಯುವಕ ಪ್ರದೀಪ ತೋರಿಸಿಕೊಟ್ಟಿದ್ದಾರೆ. ಇವರ ಈ ಸಾಧನೆ ಯುವಸಮುದಾಯಕ್ಕೆ ಪ್ರೇರಣೆಯಾಗಿದ್ದು, ಪ್ರದೀಪ್ ಮತ್ತಷ್ಟು ಸಾಧನೆ ಮಾಡಲಿ ಅಂತಾ ಹಾರೈಸೋಣ.

ಚಾಕ್ಪೀಸ್ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ

ಪ್ರದೀಪ ನಾಯ್ಕ್

ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಹಾವೇರಿಯ ಬಾಲಕಿ ಹೆಸರು ಸೇರ್ಪಡೆ

Published On - 8:17 am, Sun, 4 July 21