ಕೋಲಾರ: ಬೆಸ್ಕಾಂ ಸಬ್ ಸ್ಟೇಷನ್​ನಲ್ಲಿ ಭಾರಿ ಅಗ್ನಿ ಅವಘಡ; ಎರಡು ದಿನ ವಿದ್ಯುತ್ ವ್ಯತ್ಯಯ

ಇಡೀ ಕೋಲಾರ ಜಿಲ್ಲೆಗೆ ವಿದ್ಯುತ್ ಪೂರೈಸುವ ಬೆಸ್ಕಾಂ ಸಬ್ ಸ್ಟೇಷನ್, ಕೊರೊನಾ‌ ಲಾಕ್​ಡೌನ್​ನಿಂದಾಗಿ ಸರಿಯಾದ ನಿರ್ವಹಣೆ ಇಲ್ಲದ ವಿದ್ಯುತ್ ಪರಿವರ್ತಕವೊಂದು ಹೊತ್ತಿ ಉರಿದಿದೆ.

ಕೋಲಾರ: ಬೆಸ್ಕಾಂ ಸಬ್ ಸ್ಟೇಷನ್​ನಲ್ಲಿ ಭಾರಿ ಅಗ್ನಿ ಅವಘಡ; ಎರಡು ದಿನ ವಿದ್ಯುತ್ ವ್ಯತ್ಯಯ
ಕೋಲಾರ ಅಗ್ನಿ ಅವಘಡ
Follow us
TV9 Web
| Updated By: ಆಯೇಷಾ ಬಾನು

Updated on: Jul 04, 2021 | 6:55 AM

ಕೋಲಾರ: ಕೋಲಾರದ ಬೆಸ್ಕಾಂ ಸಬ್ ಸ್ಟೇಷನ್‌ನಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿದೆ. ಮಹಾಲಕ್ಷ್ಮೀ ಬಡಾವಣೆ ಬಳಿಯಿರುವ ಸಬ್ ಸ್ಟೇಷನ್​ನಲ್ಲಿ ಟ್ರಾನ್ಸ್‌ಫಾರ್ಮರ್, ಎಲೆಕ್ಟ್ರಾನಿಕ್ ಉಪಕರಣ ಸುಟ್ಟು ಭಸ್ಮವಾಗಿದೆ. ಕೋಲಾರ ಬೆಸ್ಕಾಂ ಸಬ್ ಸ್ಟೇಷನ್‌ನಲ್ಲಿ ಅಗ್ನಿ ಅವಘಡ ಪ್ರಕರಣದಿಂದ ಕೋಲಾರ ನಗರದಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. 7 ಕೋಟಿ ಮೌಲ್ಯದ ವಿದ್ಯುತ್ ಪರಿವರ್ತಕ ಬೆಂಕಿಗಾಹುತಿ ಆಗಿದ್ದು, ಈ ಸಮಸ್ಯೆ ತಲೆದೋರಿದೆ.

ಇಡೀ ಕೋಲಾರ ಜಿಲ್ಲೆಗೆ ವಿದ್ಯುತ್ ಪೂರೈಸುವ ಬೆಸ್ಕಾಂ ಸಬ್ ಸ್ಟೇಷನ್, ಕೊರೊನಾ‌ ಲಾಕ್​ಡೌನ್​ನಿಂದಾಗಿ ಸರಿಯಾದ ನಿರ್ವಹಣೆ ಇಲ್ಲದ ವಿದ್ಯುತ್ ಪರಿವರ್ತಕವೊಂದು ಹೊತ್ತಿ ಉರಿದಿದೆ. ಪರಿಣಾಮ ಬೆಂಕಿಯ ತೀವ್ರತೆಗೆ, ದಟ್ಟವಾದ ಹೊಗೆ ಆವರಿಸಿದ ಹಿನ್ನೆಲೆ ಇಡೀ ಕೋಲಾರ ನಗರದ ಜನರಲ್ಲಿ ಆತಂಕ ಮನೆ ಮಾಡಿದ್ದು, ಇದೀಗ ವಿದ್ಯುತ್ ವ್ಯತ್ಯಯ ಸಮಸ್ಯೆಯೂ ಕಂಡುಬಂದಿದೆ.

ಮತ್ತೊಂದೆಡೆ, ಸತತ ಎರಡೂವರೆ ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಿ, ಮುಂದೆ ಉಂಟಾಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ತಪ್ಪಿಸಿದ್ದಾರೆ. ಮದ್ಯಾಹ್ನ 2.30 ಗಂಟೆ ಸುಮಾರಿಗೆ ನಿರ್ವಹಣೆ ಇಲ್ಲದೆ ಕಾರಣ ಸುಮಾರು 5 ಲಕ್ಷ ಮೌಲ್ಯದ 100 ಎಂ.ವಿ. ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೃಹತ್ ಪ್ರಮಾಣದ ಬೆಂಕಿ ಹಾಗೂ ಹೊಗೆ ಕೋಲಾರ ನಗರವನ್ನು ಆವರಿಸಿದೆ.

ಟ್ರಾನ್ಸಫಾರ್ಮರ್ ನಲ್ಲಿದ್ದ ಆಯಿಲ್ ಹೊತ್ತಿ ಉರಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಇಡೀ ಸಬ್ ಸ್ಟೇಷನ್ ಆಹುತಿಯಾಗುವ ಆತಂಕ ಎದುರಾಗಿತ್ತು. ಮಾತ್ರವಲ್ಲದೆ ಆಕಾಶದೆತ್ತರಕ್ಕೆ ಹೊಗೆ ಆವರಸಿದ ಹಿನ್ನೆಲೆ ಕೋಲಾರ ಜನರು ಬೆಂಕಿ ಅವಘಡಕ್ಕೆ ಬೆಚ್ಚಿ ಬಿದ್ದಿದ್ದರು. ಜೊತೆಗೆ, ಸುಮಾರು 5 ಕೋಟಿ ಮೌಲ್ಯದ ವಿದ್ಯುತ್ ಪರಿವರ್ತಕ ಕೊರೊನಾದಿಂದ ನಿರ್ವಹಣೆ ಇಲ್ಲದೆ ಬೆಂಕಿ ಹೊತ್ತಿಕೊಂಡು ಇಷ್ಟೆಲ್ಲಾ ಅವಘಡ ಸಂಭವಿಸಿದೆ. ಪರಿಣಾಮ ಜಿಲ್ಲೆಯ ಹಲವು ಸಬ್ ಸ್ಟೇಷನ್‌ಗಳಿಗೆ ವಿದ್ಯುತ್ ಇಲ್ಲದ ಹಿನ್ನೆಲೆ ಇನ್ನೇರೆಡು ದಿನ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಂಜಿನಿಯರ್ ತಿಖಿಸಿದ್ದಾರೆ.

Kolar Fire Accident

ಕೋಲಾರ ಅಗ್ನಿ ಅವಘಡದ ದೃಶ್ಯ

ಇಡೀ ಸಬ್ ಸ್ಟೇಷನ್‌ನಲ್ಲಿದ್ದ ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗುವ ಭಯವೂ ಇಲಾಖೆ ಅಧಿಕಾರಿಗಳಲ್ಲಿ ಎದುರಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ 5 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಸಮೇತ ಸುಮಾರು 20 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡುವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನ ಸಂಪೂರ್ಣವಾಗಿ ನಂದಿಸಿದ್ದಾರೆ. ಸದ್ಯ ಒಟ್ಟು 20 ಕೋಟಿಯಷ್ಟು ಮೊತ್ತದ ಉಪಕರಣಗಳು ಅಗ್ನಿ ಅವಘಡದಲ್ಲಿ ನಷ್ಟವಾಗಿರುವ ಅಂದಾಜು ಮಾಡಲಾಗಿದ್ದು, ಬೆಸ್ಕಾಂ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: CM BSY on Kissan Rail : ಕಿಸಾನ್‌ ರೈಲಿನಿಂದಾಗಿ ಕೋಲಾರ ಭಾಗದ ರೈತರ ಬೆಳೆಗೆ ಬಂಪರ್‌ ಲಾಭ ಸಿಗಲಿದೆ: ಸಿಎಂ ಬಿಎಸ್‌ವೈ

Chescom: ವಿದ್ಯುತ್ ಸ್ಪರ್ಶಿಸಿ ಕಂಬದಲ್ಲಿಯೇ ನರಳಾಟ; ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಬದುಕುಳಿದ ಲೈನ್‌ಮನ್

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್