Sumangala Mummigatti: ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮಂಗಳಾ ಮುಮ್ಮಿಗಟ್ಟಿ ನಿಧನ
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮಂಗಳಾ.ಎಸ್ ಮುಮ್ಮಿಗಟ್ಟಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ಬೆಂಗಳೂರು: ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತೆ ಸುಮಂಗಳಾ.ಎಸ್ ಮುಮ್ಮಿಗಟ್ಟಿ (Sumangala S Mummigatti) (59) ಇಂದು ಮುಂಜಾನೆ (ಮಾ.12) ನಿಧನರಾಗಿದ್ದಾರೆ. ಸುಮಂಗಳಾ ಅವರು ಪತಿ ಮತ್ತು ಪುತ್ರನನ್ನು ಅಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚಾಮರಾಜ ಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಸುಮಂಗಳಾ ಅವರು 40ಕ್ಕೂ ಹೆಚ್ಚು ವಿಜ್ಞಾನದ ಕೃತಿಗಳು, ಸಾವಿರಾರು ಲೇಖನಗಳನ್ನು, ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸಿದ್ದರು. ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಸುಮಂಗಳಾ 40ಕ್ಕೂ ಹೆಚ್ಚು ವಿಜ್ಞಾನದ ಕೃತಿಗಳು, ಸಾವಿರಾರು ಲೇಖನಗಳನ್ನು, ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸಿದ್ದರು.
ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅವುಗಳಲ್ಲಿ, ಪರಿಸರ ಪ್ರಶಸ್ತಿ ರೇಡಿಯೋ ಅಸ್ಕರ್ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಮುಖವಾಗಿದೆ. ಇತ್ತಿಚೆಗೆ ಪ್ರಕಟವಾದ ವಿಜ್ಞಾನ ತಂತ್ರಜ್ಞಾನ ದರ್ಶನ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ಅದ್ಭುತ ಆವಾಸ ಅಂಡಮಾನ್, ಅಲ್ಲಮ ಪ್ರಭು, ಮತ್ತಿತರ ಕೃತಿಗಳು ಅವರ ಬರವಣಿಗೆಯ ವಿಷಯ ವಿಸ್ತಾರಕ್ಕೆ ಉದಾಹರಣೆಯಾಗಿವೆ. ಹಲವಾರು ವಿಜ್ಞಾನ ಸಂವಹನಕಾರರನ್ನು ಹುರಿದುಂಬಿಸಿ ವಿಜ್ಞಾನ ಸಂವಹನಕಾರರ ಒಂದು ಪಡೆಯನ್ನು ಕಟ್ಟಿ ಬೆಳಸಿದ ಕೀರ್ತಿ ಸುಮಂಗಳಾ ಅವರದ್ದಾಗಿದೆ.
Published On - 8:53 am, Sun, 12 March 23