ಹಾವೇರಿ: ಉಕ್ರೇನ್ ಮತ್ತು ರಷ್ಯಾ (Russia Ukraine War) ನಡುವೆ ಭೀಕರ ಸಮರ ನಡೆಯುತ್ತಿದೆ. ನಿನ್ನೆ ಭಾರತೀಯರೆಲ್ಲರೂ ಮಹಾ ಶಿವನ ಧ್ಯಾನ ಮಾಡಬೇಡುವಾಗ ಕಿವಿಗೆ ಅಪ್ಪಳಿಸಿದ್ದು, ಆ ವಿದ್ಯಾರ್ಥಿಯ ಸಾವಿನ ಸುದ್ಧಿ. ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ನಿನ್ನೆ ಸಾವನ್ನಪಿದ್ದಾನೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಮನೆ ಮಗ ನವೀನ್ ಸಾವಿಗೆ ಇಡೀ ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ. ಇಡೀ ಚಳಗೇರಿ ಗ್ರಾಮ ಶೋಕ ಸಾಗರದಲ್ಲಿ ಮುಳಗಿದೆ. ನವೀನ್ ಪೋಷಕರಿಗೆ 2 ಬಾರಿ ಸಿಎಂ ಕರೆ ಮಾಡಿ, ಸಾಂತ್ವನ ಹೇಳಿದ್ದಾರೆ. ನವೀನ್ ಮೃತದೇಹ ಸ್ವಗ್ರಾಮ ಚಳಗೇರಿಗೆ ತರಲು ತಂದೆ ಶೇಖರ್‌ಗೌಡ ಸಿಎಂಗೆ ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಅರುಣ್ ಕುಮಾರ್‌ಗೆ ನವೀನ್ ಪಾರ್ಥಿವ ಶರೀರ ಗ್ರಾಮಕ್ಕೆ ತರುವಂತೆ ಗ್ರಾಮಸ್ಥರಿಂದ ಒತ್ತಡ ಹೇರಲಾಗುತ್ತಿದೆ. ಚಳಗೇರಿಗೆ ಜನಪ್ರತಿನಿಧಿಗಳು, ಗಣ್ಯರ ಆಗಮನ ಹಿನ್ನೆಲೆ ಚಳಗೇರಿ ಗ್ರಾಮದಲ್ಲಿ ಭದ್ರತೆಗಾಗಿ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ.
ಮಗನ ಸಾವಿನಿಂದ ಕುಗ್ಗಿ ಮಾನಸಿಕ ಒತ್ತಡಕ್ಕೆ ಶೇಖರಗೌಡ ಗುರಿಯಾಗಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಗನನ್ನ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ಕಳುಹಿಸಲಾಗಿತ್ತು. ಮಗನ ಪರಿಸ್ಥಿತಿ ಇತರರಿಗೆ ಬರಬಾರದು, ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಂತೆ ನವೀನ ತಂದೆ ಕೈಮುಗಿದು ಬೇಡುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಇತರ ವಿದ್ಯಾರ್ಥಿಗಳ ಬಗ್ಗೆ ಚಿಂತೆ ಮಾಡಿರುವ ಶೇಖರಗೌಡ ಸಾಮಾಜಿಕ ಕಳಕಳಿ ಕಂಡು ಗಣ್ಯರು ಕಣ್ಣೀರು ಹಾಕಿದ್ದಾರೆ. ನವೀನ್ ಕುಟುಂಬ ಮೈಸೂರು ಜಿಲ್ಲೆ ನಂಜನಗೂಡಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಾಗಿದ್ದರು. ನಿವೀನ್ ತನ್ನ ವಿದ್ಯಾಬ್ಯಾಸವನ್ನು ಮೈಸೂರು ಜಿಲ್ಲೆ ನಂಜನಗೂಡಿನ ದೇಬೂರು ಗ್ರಾಮದ ಆದರ್ಶ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೂ ವಿದ್ಯಾಭ್ಯಾಸ ಪೂರೈಸಿದ್ದಾನೆ. ಎಸ್ ಎಸ್ ಎಲ್ ಸಿಯಲ್ಲಿ 625ಕ್ಕೆ 606 ಅಂಕ ಪಡೆದಿದ್ದ ನವೀನ್, ಆದರ್ಶ ಶಾಲೆಯ ಇತಿಹಾಸದಲ್ಲಿ ವೈದ್ಯನಾಗುತ್ತಿದ್ದ ಏಕೈಕ ವಿದ್ಯಾರ್ಥಿಯಾಗಿದ್ದ. ಶಾಲೆ ತೊರೆದಿದ್ದರು ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಗಳಿಗೆ ಬುದ್ದಿ ಹೇಳಲು ನವೀನ್ ಉದಾಹರಣೆಯನ್ನು ಶಿಕ್ಷಕರು ನೀಡುತ್ತಿದ್ದರು.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ಆಪರೇಷನ್ ಗಂಗಾ ಹೆಸರಿನಲ್ಲಿ ಏರ್‌ಲಿಫ್ಟ್ ಕಾರ್ಯಾಚರಣೆ ಆರಂಭವಾಗಿದ್ದು, ಈಗಾಗಲೇ ಸಾಕಷ್ಟು ವಿಮಾನಗಳು ಉಕ್ರೇನ್ನಿಂದ ಭಾರತಕ್ಕೆ ಬಂದಿವೆ. ರಾಯಭಾರ ಕಚೇರಿ ಅಧಿಕಾರಿಗಳ ಜತೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತುಕತೆ ನಡೆಸಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯು ರೊಮೇನಿಯಾ, ಮೊಲ್ಡೊವಾ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಮಲ್ಡೋವಾ ಗಡಿಗೆ ತುರ್ತಾಗಿ ಬರಲು ಪ್ರಯತ್ನಿಸಬೇಕು. ಅಲ್ಲಿ ವಸತಿ, ಆಹಾರ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಬಂದವರಿಗೆ ಏರ್‌ಲಿಫ್ಟ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾರತೀಯರಿಗೆ ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿಯು ತುರ್ತು ಸಂದೇಶ ರವಾನಿಸಿದ್ದು, ಬುಡೋಮಿಯರ್ಜ್ ಗಡಿಗೆ ಬರಲು ಸೂಚನೆ ನೀಡಿದೆ. ಉಕ್ರೇನ್, ಪೋಲೆಂಡ್ ಗಡಿಯಲ್ಲಿರುವ ಬುಡೋಮಿಯರ್ಜ್ನಲ್ಲಿ ಭಾರತೀಯರಿಗೆ ಆಹಾರ ವಸತಿ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಶೆಹೈನಿ-ಮೆಡಿಕಾ ಗಡಿಗೆ ಬರಬೇಡಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:
Phalguna Amavasya 2022: ಫಾಲ್ಗುಣ ಅಮಾವಾಸ್ಯೆಯಂದು ಈ ರೀತಿ ಮಾಡಿದರೆ ಸುಖ, ಶಾಂತಿ ಅದೃಷ್ಟ ನಿಮ್ಮದಾಗುತ್ತೆ