ನಟ ಶಂಕರ್ ನಾಗ್ ಅಂದು ಕೊಟ್ಟಿದ್ದ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯಾಗಿ ಈಗ ನನಸು ಮಾಡುವೆ: ಸಿಎಂ ಬೊಮ್ಮಾಯಿ
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಲೆ ರೋಪ್ ವೇ ಮಾಡಲು ಹೇಳಿದ್ದರು. ದಿ.ನಟ ಶಂಕರ್ ನಾಗ್ ನನಗೆ ಹೇಳಿ ಪ್ರಸ್ತಾವನೆ ಕೊಟ್ಟಿದ್ರು. ನಾನು ಮುಖ್ಯಮಂತ್ರಿ ಆದ ಮೇಲೆ ಶಂಕರ್ ನಾಗ್ ಕನಸ್ಸು ನನಸ್ಸು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ: ನಂದಿಯ ಶಿವೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj bommai) ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವನನ್ನು(Shiva) ನೆನೆಯುತ್ತಾ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಿ ಮಾನವ ಕುಲ ಬೆಳಗಿನ ಕಡೆಗೆ ಹೋಗಲು ಶಿವರಾತ್ರಿ(Shivaratri 2022) ಜಾಗರಣೆ ಮಾಡುತ್ತೇವೆ. ನಮ್ಮ ಬದುಕು ಶಿವನ ರೀತಿಯಲ್ಲಿ ಇರಬೇಕು. ಕಣ್ಣು ಮುಚ್ಚಿಕೊಂಡಿರುವ ಶಿವ ಎಲ್ಲವನ್ನು ಅರಿತುಕೊಂಡಿರುತ್ತಾನೆ. ಆತ್ಮ ಲಿಂಗದ ಸತ್ಯವನ್ನು ಅರಿಕೊಂಡರೆ ಶಿವ ಅಂಗೈಯಲ್ಲಿ ಕಾಣುತ್ತಾನೆ. ದೈವಕ್ಕಿಂತ ಭಕ್ತಿಯ ಶಕ್ತಿ ಹೆಚ್ಚು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಐತಿಹಾಸ ಪ್ರಸಿದ್ಧ ಶ್ರೀಭೋಗನಂದೀಶ್ವರ ದೇವಸ್ಥಾನ ಅಭಿವೃದ್ದಿಯಾಗಬೇಕಿದೆ. ನಂದಿ ಬೆಟ್ಟಕ್ಕೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ನಂದಿಗಿರಿಧಾಮ ಸಮಗ್ರ ಅಭಿವೃದ್ದಿಯಾಗಬೇಕು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಲೆ ರೋಪ್ ವೇ ಮಾಡಲು ಹೇಳಿದ್ದರು. ದಿ.ನಟ ಶಂಕರ್ ನಾಗ್ ನನಗೆ ಹೇಳಿ ಪ್ರಸ್ತಾವನೆ ಕೊಟ್ಟಿದ್ರು. ನಾನು ಮುಖ್ಯಮಂತ್ರಿ ಆದ ಮೇಲೆ ಶಂಕರ್ ನಾಗ್ ಕನಸ್ಸು ನನಸ್ಸು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಜೃಂಭಣೆಯಿಂದ ನಡೆದ ಶಿವೋತ್ಸವ ಕಾರ್ಯಕ್ರಮ
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಇಂದು ಶಿವೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ಗ್ರಾಮದ ಶ್ರೀ ಭೋಗನಂದೀಶ್ವರ ದೇವಸ್ಥಾನ ಆವರಣದಲ್ಲಿ ಶಿವೋತ್ಸವ ನಡೆದಿದೆ. ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯರಾದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ನಡೆಯುತ್ತಿರುವ ಶಿವೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ನಂದಿಯಲ್ಲಿ ನಡೆಯುತ್ತಿರುವ ಶಿವೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್, ಸಿರಿಗೇರೆ ಶ್ರೀಗಳು, ಮುದ್ದೇನಹಳ್ಳಿಯ ಮಧುಸೂದನ ನಾಯ್ಡು ಆಗಮಿಸಿದ್ದರು.
ಇದನ್ನೂ ಓದಿ: Shivaratri: ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?
Basavaraj Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಕನಿಷ್ಠ 20 ಕೋಮು ಉದ್ವಿಘ್ನ ಪ್ರಕರಣಗಳು ಘಟಿಸಿವೆ
Published On - 9:17 pm, Tue, 1 March 22