ಉತ್ತರ ಕರ್ನಾಟಕದಲ್ಲಿ NDRF ಕಾರ್ಯಾಚರಣೆ: ಜನ, ಜಾನುವಾರುಗಳ ರಕ್ಷಣೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉತ್ತರ ಕರ್ನಾಟಕದ ನದಿಗಳು ಉಕ್ಕಿಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ, ಜನಜೀವನ ಅಸ್ತವ್ಯಸ್ತವಾಗಿದ್ದ್ದು ಇಲ್ಲಿನ ಮಂದಿಯ ಬಾಳು ದುಸ್ತರವಾಗಿದೆ. ಇತ್ತ, ಜನ ಮತ್ತು ಜಾನವಾರುಗಳ ರಕ್ಷಣೆಗೆ ಮುಂದಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಇಂದು ನಡೆಸಿರುವ ರಕ್ಷಣಾ ಕಾರ್ಯಾಚರಣೆಯ ವಿವರವನ್ನು ಬಿಡುಗಡೆ ಮಾಡಿದೆ. 1. 41 ಕಾಳಜಿ ಕೇಂದ್ರಗಳ ಸ್ಥಾಪನೆ (ಕಲಬುರಗಿಯಲ್ಲಿ 36, ಬೀದರ್​ನಲ್ಲಿ 4, ವಿಜಯಪುರದಲ್ಲಿ 1) 2. ಒಟ್ಟು 4,864 ಜನರಿಗೆ ಕಾಳಜಿ […]

ಉತ್ತರ ಕರ್ನಾಟಕದಲ್ಲಿ NDRF ಕಾರ್ಯಾಚರಣೆ: ಜನ, ಜಾನುವಾರುಗಳ ರಕ್ಷಣೆ
Edited By:

Updated on: Oct 16, 2020 | 2:29 PM

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉತ್ತರ ಕರ್ನಾಟಕದ ನದಿಗಳು ಉಕ್ಕಿಹರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ, ಜನಜೀವನ ಅಸ್ತವ್ಯಸ್ತವಾಗಿದ್ದ್ದು ಇಲ್ಲಿನ ಮಂದಿಯ ಬಾಳು ದುಸ್ತರವಾಗಿದೆ. ಇತ್ತ, ಜನ ಮತ್ತು ಜಾನವಾರುಗಳ ರಕ್ಷಣೆಗೆ ಮುಂದಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಇಂದು ನಡೆಸಿರುವ ರಕ್ಷಣಾ ಕಾರ್ಯಾಚರಣೆಯ ವಿವರವನ್ನು ಬಿಡುಗಡೆ ಮಾಡಿದೆ.

1. 41 ಕಾಳಜಿ ಕೇಂದ್ರಗಳ ಸ್ಥಾಪನೆ (ಕಲಬುರಗಿಯಲ್ಲಿ 36, ಬೀದರ್​ನಲ್ಲಿ 4, ವಿಜಯಪುರದಲ್ಲಿ 1)
2. ಒಟ್ಟು 4,864 ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ
3. ಮುಳ್ಳಮಾರಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಗರಂಪಲ್ಲಿಯ 19 ಗ್ರಾಮಸ್ಥರ ರಕ್ಷಣೆ
4. ಬೀದರ್​ನ ಮಂಜೀರಾ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಮನ್ನಳ್ಳಿ ಮತ್ತು ಮುದ್ಗಲ್​ ಗ್ರಾಮದ 3 ನಿವಾಸಿಗಳ ರಕ್ಷಣೆ
5. ಕಲಬುರಗಿಯ ಮಳಖೇಡ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಿಲುಕಿಕೊಂಡಿದ್ದ 7 ಜನರ ರಕ್ಷಣೆ

ಇದಲ್ಲದೆ, NDRF ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ಉಂಟಾಗಿರುವ ಹಾನಿಯ ವಿವರವನ್ನು ಸಹ ನೀಡಿದೆ.
1. ಮನುಷ್ಯರ ಸಾವಿನ ಸಂಖ್ಯೆ: 1
2. ಜಾನುವಾರುಗಳ ಸಾವಿನ ಸಂಖ್ಯೆ: 517
3. ಮನೆಕುಸಿತ: (ಭಾಗಶಃ: 2712; ಸಂಪೂರ್ಣ: 318)

Published On - 7:15 pm, Thu, 15 October 20