ಹುಬ್ಬಳ್ಳಿ, ಮೇ 15: ಯುವತಿಯನ್ನು ಪಾಗಲ್ ಪ್ರೇಮಯೊಬ್ಬನು ಭೀಕರವಾಗಿ ಹತ್ಯೆ (murder) ಮಾಡಿ ಪರಾರಿಯಾಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಕಾಕತಾಳೀಯ ಎಂಬಂತೆ ನಿರಂಜನ ಹಿರೇಮಠ (niranjan hiremath) ವಾರ್ಡ್ನಲ್ಲಿಯೇ, ನೇಹಾ ಹತ್ಯೆ ಮಾದರಿಯಲ್ಲಿ ಮತ್ತೊಂದು ಹತ್ಯೆಯಾಗಿದೆ. ಕೊಲೆಯಾದ ಅಂಜಲಿ ಕುಟುಂಬಸ್ಥರನ್ನು ನಿರಂಜನ ಹಿರೇಮಠ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಮಗಳು ನೇಹಾ ಕಳೆದುಕೊಂಡ ದುಃಖದಲ್ಲಿದ್ದೇವೆ. ಈಗ ನಮ್ಮ ವಾರ್ಡ್ನ ಮಗಳನ್ನು ಕಳೆದುಕೊಂಡಿದ್ದೇವೆ. ಇನ್ನೂ ಎಷ್ಟು ಬಲಿಯಾಗಬೇಕು. ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಹುಬ್ಬಳ್ಳಿಗೆ ದಕ್ಷ ಪೊಲೀಸ್ ಅಧಿಕಾರಿ ಬೇಕು. ಗೃಹ ಇಲಾಖೆ ನಿರ್ಲಕ್ಷ್ಯ ಮಾಡಿದೆ, ನಿಮಗೆ ನಿಭಾಯಿಸಲು ಆಗದೆ ಹೋದರೆ ರಾಜೀನಾಮೆ ಕೊಡಿ ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಆರೋಪಿಯನ್ನು ಎನ್ಕೌಂಟರ್ ಮಾಡಬೇಕು. ನೇಹಾ ಕೊಲೆ ಮಾಡಿದ ಆರೋಪಿಯನ್ನು ಎನ್ಕೌಂಟರ್ ಮಾಡಿದ್ದರೆ ಹೀಗೆ ಆಗುತ್ತಿರಲ್ಲಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅವತ್ತು ಬೆಂಡಿಗೇರಿ ಪೊಲೀಸ್ರು ಕರೆದು ವಿಚಾರಣೆ ಮಾಡಿದ್ರೆ ಅಂಜಲಿ ಹತ್ಯೆಯಾಗ್ತಿರಲಿಲ್ಲ: ಮಹೇಶ್ ಟೆಂಗಿನಕಾಯಿ
ಅಂಜಲಿ ಹತ್ಯೆ ಖಂಡಿಸಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ನಲ್ಲಿ ಪ್ರತಿಭಟನೆ ಮಾಡಲಾಗಿದೆ. ಅಂಜಲಿ ಹತ್ಯೆ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾಕಾರರನ್ನು ಮನವೊಲಿಸಿದ ಪೊಲೀಸರು, ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿತ್ತು.
ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ವಿಶ್ವ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯಾದ ಅಂಜಲಿ ಮತ್ತು ಆರೋಪಿ ವಿಶ್ವ ಸಹಪಾಠಿಗಳಾಗಿದ್ದು, ಅಂಜಲಿ ಜೊತೆಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಇಂದು ಬೆಳಗಿನ ಜಾವಾ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದ್ದಾನೆ. ಅಂಜಲಿಯೇ ಬಾಗಿಲು ತೆರಿದ್ದಾಳೆ. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಅಂತ ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಲು ಶುರು ಮಾಡಿದ್ದಾನೆ.
ಇದನ್ನೂ ಓದಿ: Hubballi Anjali Murder Case: ತಾನು ಕರೆದ ಕಡೆ ಬಾರದಿದ್ದಕ್ಕೆ ಸಹಪಾಠಿ ಅಂಜಲಿಯನ್ನ ಕೊಲೆ ಮಾಡಿದ್ನಾ ವಿಶ್ವ?
ಇದನ್ನು ಅಂಜಲಿ ಕುಟುಂಬಸ್ಥರು ತಡೆಯಲು ಮುಂದಾದರು ಮನೆಯ ತುಂಬೆಲ್ಲಾ ಅಂಜಲಿ ಎಳೆದಾಡಿ ಚಾಕುವಿನಿಂದ ಮನಬಂದಂತೆ ಚುಚ್ಚಿದ ವಿಶ್ವ, ಅಂಜಲಿ ಸತ್ತ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇನ್ನೂ ಆರೋಪಿ ವಿಶ್ವ ಒಂದು ವಾರದ ಹಿಂದೆಯೆ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದು, ನನ್ನ ಜೊತೆಗೆ ಬಾರದಿದ್ದ್ರೆ ನೇಹಾ ತರ ಕೊಲೆ ಮಾಡುವೆ ಅಂತ ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಅಂಜಲಿ ಕುಟುಂಬಸ್ಥರಿಗೆ ಬೈದು ನಿಮ್ಮದು ಮೂಢನಂಬಿಕೆ ಆಗೇನು ಆಗಲ್ಲ ಹೋಗಿ ಅಂತ ನಿರ್ಲಕ್ಷ್ಯ ತೋರಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.