Namma Metro: ಜುಲೈ ಅಂತ್ಯಕ್ಕೆ ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಸಂಚಾರ ಆರಂಭ ಸಾಧ್ಯತೆ
Bengaluru Namma Metro: ಬೆಂಗಳೂರು ಜನರಿಗೆ ವೇಗದ ಮತ್ತು ಸುಖಕರ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಸಹಾಯಕಾರಿಯಾಗಿದೆ. ಹೀಗಾಗಿ ಬೆಂಗಳೂರಿನ ಜನ ತಮ್ಮ ಸ್ವಂತ ವಾಹನ ಬಿಟ್ಟು ಮೆಟ್ರೋದಲ್ಲಿ ಹೆಚ್ಚು ಪ್ರಯಾಣ ಮಾಡಲು ಬಯಸುತ್ತಿದ್ದಾರೆ. ಹೀಗಾಗಿ ನಗರದ ವಿವಿಧ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಜನರ ಬೇಡಿಕೆಯಾಗಿದೆ. ಜನರ ಬೇಡಿಕೆ ಮೇರೆಗೆ ಇದೀಗ ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ.
ಬೆಂಗಳೂರು ಮೇ 15: ನಮ್ಮ ಮೆಟ್ರೋ (Namma Metro) ಹಸಿರು ಕಾರಿಡಾರ್ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ ಅಕ್ಷರಶಃ ಪಂಚವಾರ್ಷಿಕ ಯೋಜನೆಯಾಗಿತ್ತು. ಕಳೆದ ಐದು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ಕಾಮಗಾರಿ ಅಂತಿಮ ಹಂತ ತಲುಪಿದ್ದು ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮೆಟ್ರೋ (Metro) ಸಂಚಾರ ಆರಂಭವಾಗಲಿದೆ. 298 ಕೋಟಿ ರೂ. ವೆಚ್ಚದ ಈ ಮಾರ್ಗ ಯೋಜನೆ ಪ್ರಕಾರ ಸಾಗಿದ್ದರೆ 2019ರ ಅಗಸ್ಟನಲ್ಲಿಯೇ ಜನಸಂಚಾರಕ್ಕೆ ಲಭ್ಯವಾಗಬೇಕಿತ್ತು.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (BMRCL) ಅಧಿಕಾರಿಗಳು ಮಾತನಾಡಿ, ಮಾರ್ಗದ ಹಳಿ ಅಳವಡಿಕೆ ಕಾಮಗಾರಿ ಮುಗಿದಿದೆ. ನಡುವಿನ ,ಊರು ಮೆಟ್ರೋ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿನ್ನೂ ನೆಲಹಾಸಿಗೆ ಗ್ರಾನೈಟ್ ಕಲ್ಲು ಅಳವಡಿಕೆ, ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್ ಹಾಗೂ ಬಣ್ಣ ಬಳಿಯುವ ಕೆಲಸ ಆಗಬೇಕಿದೆ. ಕಾಮಗಾರಿ ಮುಗಿದ ಬಳಿಕ ಜೂನ್ ಹಾಗೂ ಜುಲೈ ಮಧ್ಯಂತರದಲ್ಲಿ ಮಾರ್ಗದ ತಪಾಸಣೆ ನಡೆಯಲಿದ್ದು, ಜುಲೈ ಅಂತ್ಯದ ವೇಳೆಗೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದರು.
ಇದನ್ನೂ ಓದಿ: ಕ್ಯೂ ತಪ್ಪಿಸಲು ಕ್ಯೂಆರ್ ಟಿಕೆಟ್ ಮಿಷನ್: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬಂದಿದೆ ಹೊಸ ವ್ಯವಸ್ಥೆ
2017ರಲ್ಲಿ ಕಾಮಗಾರಿ ಆರಂಭವಾಗಿತ್ತು. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ 2019ರ ಮಧ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾದೀನ, ಸ್ಥಳೀಯರ ವಿರೋಧ ಹಾಗೂ ನಂತರ ಕೋವಿಡ್ ಸಮಸ್ಯೆ ಸೇರಿ ಹತ್ತು ಹಲವು ಸವಾಲು, ಸಮಸ್ಯೆಗಳ ಕಾರಣದಿಂದ ಐದು ವರ್ಷ ತಡವಾಗಿ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಲಭ್ಯವಾಗುತ್ತಿದೆ.
ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮೆಟ್ರೋ ನಿಲ್ದಾಣಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ