Covid-19 Cluster | ಬೆಂಗಳೂರಿನ ಸಂಭ್ರಮ ಕಾಲೇಜ್ ಕ್ಯಾಂಪಸ್​ನಲ್ಲಿ 10 ವಿದ್ಯಾರ್ಥಿಗಳಿಗೆ ಕೊರೊನಾ

ಕೊರೊನಾ ಕೇಸ್​ಗಳು ದೃಢವಾದ ಬೆನ್ನಲ್ಲೇ ಎಚ್ಚೆತ್ತಿರುವ ಕಾಲೇಜಿನ ಆಡಳಿತ ಮಂಡಳಿ, ಪರೀಕ್ಷೆ ಬರೆಯುವವರನ್ನು ಬಿಟ್ಟು ಮತ್ಯಾರಿಗೂ ಕ್ಯಾಂಪಸ್​ ಒಳಗೆ ತೆರಳಲು ಅವಕಾಶ ನೀಡುತ್ತಿಲ್ಲ.

Covid-19 Cluster | ಬೆಂಗಳೂರಿನ ಸಂಭ್ರಮ ಕಾಲೇಜ್ ಕ್ಯಾಂಪಸ್​ನಲ್ಲಿ 10 ವಿದ್ಯಾರ್ಥಿಗಳಿಗೆ ಕೊರೊನಾ
ಸಂಗ್ರಹ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on:Feb 27, 2021 | 2:40 PM

ಬೆಂಗಳೂರು: ಕೊರೊನಾ ಸೋಂಕಿನ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ಮತ್ತೆ ಕೊವಿಡ್​-19 ಕೇಸ್​ಗಳು ಏರುಗತಿಯಲ್ಲಿ ಸಾಗುತ್ತಿವೆ. ಇಂದು ಯಲಹಂಕದ ಅಟ್ಟೂರು​ ಭಾಗದಲ್ಲಿರುವ ಸಂಭ್ರಮ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ ಕ್ಯಾಂಪಸ್​ನಲ್ಲಿ 10 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್​ ದೃಢವಾಗಿದ್ದು, ಇದನ್ನು ಕೊವಿಡ್ ಕ್ಲಸ್ಟರ್​ ಎಂದು ಗುರುತಿಸಲಾಗಿದೆ. ಸಂಭ್ರಮ ಇಂಜಿನಿಯರಿಂಗ್​ ಕಾಲೇಜ್​ ಕೂಡ ಇದೇ ಕ್ಯಾಂಪಸ್​ನಲ್ಲಿದ್ದು, ಇಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇದು ಸಾಕಷ್ಟು ಆತಂಕ ಮೂಡಿಸಿದೆ. ಕೊರೊನಾ ಪಾಸಿಟಿವ್​ ಬಂದ ವಿದ್ಯಾರ್ಥಿಗಳು ಪಿಜಿಯಲ್ಲಿ ಉಳಿದುಕೊಳ್ಳುವವರಾಗಿದ್ದಾರೆ. ಕೊರೊನಾ ಕೇಸ್​ಗಳು ದೃಢವಾದ ಬೆನ್ನಲ್ಲೇ ಎಚ್ಚೆತ್ತಿರುವ ಕಾಲೇಜಿನ ಆಡಳಿತ ಮಂಡಳಿ, ಪರೀಕ್ಷೆ ಬರೆಯುವವರನ್ನು ಬಿಟ್ಟು ಮತ್ಯಾರಿಗೂ ಕ್ಯಾಂಪಸ್​ ಒಳಗೆ ತೆರಳಲು ಅವಕಾಶ ನೀಡುತ್ತಿಲ್ಲ. ಕೊರೊನಾ ಪಾಸಿಟಿವ್​ ಬಂದ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದವರನ್ನು ನಾವು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕಾ ನ್ಯೂ ಟೌನ್​ ಅಪಾರ್ಟ್​ಮೆಂಟ್​ನಲ್ಲಿ ಸಾಕಷ್ಟು ಕೊರೊನಾ ಕೇಸ್​ಗಳು ವರದಿ ಆಗಿದ್ದವು. ಈಗ ಅಲ್ಲಿ ಯಾವುದೇ ಹೊಸ ಕೇಸ್​ಗಳು ವರದಿ ಆಗಿಲ್ಲ. ಇದು ಅಧಿಕಾರಿಗಳಿಗೆ ನೆಮ್ಮದಿ ತಂದಿದೆ.

ಸಣ್ಣ ಪ್ರದೇಶದಲ್ಲಿ ಹೆಚ್ಚು ಜನರು ಉಳಿದುಕೊಳ್ಳುವಂತಹ ಹೊಸ್ಟೇಲ್​ಗಳು, ಪಿಜಿ, ಅಪಾರ್ಟ್​ಮೆಂಟ್​ಗಳಲ್ಲಿ ಕೊರೊನಾ ಪ್ರಕರಣ ಹೆಚ್ಚುವ ಭಯ ಕಾಡಿದೆ. ಈಗ ಶಾಲಾ-ಕಾಲೇಜುಗಳು ಮತ್ತೆ ಆರಂಭವಾಗಿದ್ದು, ಅಲ್ಲಿಯೂ ಕೇಸ್​ಗಳು ಹೆಚ್ಚುವ ಸಾಧ್ಯತೆ ಇದೆ ಎನ್ನುವುದು ಆರೋಗ್ಯ ಅಧಿಕಾರಿಗಳ ಅಭಿಪ್ರಾಯ. ಇನ್ನು, ಜಿಮ್​, ಪಾರ್ಕ್​ ಮತ್ತು ಲಿಫ್ಟ್​ ಸೇರಿ ಅನೇಕ ಪ್ರದೇಶಗಳನ್ನು ಸ್ಯಾನಿಟೈಸ್​ ಮಾಡುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ, ಕೇರಳ ಭಾಗದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸದ್ಯ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಆದಾಗ್ಯೂ, ಕೊರೊನಾ ಹೆಚ್ಚದಂತೆ ನೋಡಿಕೊಳ್ಳಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಆರೋಗ್ಯದ ಅಧಿಕಾರಿಗಳ ಮಾತು.

ಇದನ್ನೂ ಓದಿ: ಆಂಧ್ರ ದಿಕ್ಕಿನಿಂದಲೂ ಬರುತ್ತಿದೆ ಕೊರೊನಾ ಮಹಾಮಾರಿ! ಬಳ್ಳಾರಿಯ ಸತ್ಯನಾರಾಯಣಪೇಟೆ ಅಪಾಟ್ಮೆಂಟ್​ನಲ್ಲಿ 7 ಜನರಿಗೆ ಕೊರೊನಾ ದೃಢ!

ಬೆಂಗಳೂರಿನ ಅಪಾರ್ಟ್‌ಮೆಂಟ್​ನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಆನೇಕಲ್‌ನಲ್ಲಿಯೂ ಕಾಲಿಟ್ಟಿದೆ!

Published On - 2:33 pm, Sat, 27 February 21