ನವಜಾತ ಶಿಶು ಕೊಲೆ ಪ್ರಕರಣ: ಬಂಧಿತ ಮಹಿಳೆಯಿಂದ ಕ್ಷಣಕ್ಕೊಂದು ಹೇಳಿಕೆ; ಶಿಶು, ಮಹಿಳೆಯ ಡಿಎನ್​ಎ ಪರೀಕ್ಷೆಗೆ ನಿರ್ಧಾರ

ನವಜಾತ ಶಿಶು ಕೊಲೆ ಪ್ರಕರಣ ಸಂಬಂಧಿಸಿ ಆರೋಪಿ ಬಂಧಿತ ಮಹಿಳೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಾಗೇಪಲ್ಲಿ ತಾಲೂಕಿನ ಚಾಕವೇಲು ಮೂಲದ ಮಮತಾ (29) ಬಂಧನವಾಗಿತ್ತು.

ನವಜಾತ ಶಿಶು ಕೊಲೆ ಪ್ರಕರಣ: ಬಂಧಿತ ಮಹಿಳೆಯಿಂದ ಕ್ಷಣಕ್ಕೊಂದು ಹೇಳಿಕೆ; ಶಿಶು, ಮಹಿಳೆಯ ಡಿಎನ್​ಎ ಪರೀಕ್ಷೆಗೆ ನಿರ್ಧಾರ
ಹತ್ಯೆಯಾದ ನತದೃಷ್ಟ ಮಗು
Follow us
TV9 Web
| Updated By: ganapathi bhat

Updated on:Jul 05, 2021 | 5:03 PM

ಚಿಕ್ಕಬಳ್ಳಾಫುರ: ಸರ್ಕಾರಿ ಆಸ್ಪತ್ರೆಯ ಬಾತ್​ರೂಮ್​ನಲ್ಲಿ ನವಜಾತ ಶಿಶು ಕೊಲೆ ಪ್ರಕರಣ ಸಂಬಂಧಿಸಿ ಆರೋಪಿ ಬಂಧಿತ ಮಹಿಳೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಾಗೇಪಲ್ಲಿ ತಾಲೂಕಿನ ಚಾಕವೇಲು ಮೂಲದ ಮಮತಾ (29) ಬಂಧನವಾಗಿತ್ತು. ಮಹಿಳೆಯ ಜೊತೆಗಿದ್ದ ಆಕೆಯ ಪತಿ ವೇಣುಗೋಪಾಲ ರೆಡ್ಡಿ ಕೂಡ ಬಂಧನ ಆಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಜೂನ್ 3ರಂದು ಪ್ರಕರಣ ನಡೆದಿತ್ತು.

ತಾನು ಗರ್ಭೀಣಿ ಆಗಿದ್ದು ಮನೆಯಲ್ಲಿ ಗೊತ್ತಿಲ್ಲವೆಂದು ಆಕೆ ಹೇಳಿಕೆ ನೀಡಿದ್ದಾರೆ. ಗರ್ಭೀಣಿಯಾಗಿರುವ ವಿಷಯ ತಿಳಿಯದೆ ಮಗುವನ್ನು ತಗೊಂಡು ಹೊದ್ರೆ ಅನುಮಾನವೆಂದು ಹೇಳಿಕೆ ಕೊಟ್ಟಿದ್ದಾರೆ. ಅತ್ತೆ ಪ್ರಶ್ನಿಸುತ್ತಾಳೆ ಅನ್ನೊ ಭಯಕ್ಕೆ ಕೃತ್ಯವೆಂದು ಹೇಳಿದ್ದಾರೆ.

ಹೊಟ್ಟೆ ನೋವಿಗೆ ಚಿಕೀತ್ಸೆ ಪಡೆಯಲು ಗಂಡನ ಜೊತೆ ಬಂದಿದ್ದಾಗಿ ಹೇಳಿದ್ದು, ಹೆರಿಗೆಯಾದ ಮೇಲೆ ಗಂಡನಿಗೆ ಗೊತ್ತಾಯಿತು ಎಂದು ಹೇಳಿದ್ದಾರೆ. ಮಗು ಸತ್ತು ಹೋಯಿತು ಅಂತ ಗಂಡನಿಗೆ ತಿಳಿಸಿದ್ದಾಗಿ ಹಾಗೂ ಹೆರಿಗೆಯಾದ ಮಗುವನ್ನು ಆಚೆ ಹಾಕಲು ಯತ್ನಿಸಿದಾಗ ಮಗುವನ್ನು ಅಲ್ಲೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ.

ಮಹಿಳೆಯ ಹೇಳಿಕೆಯಿಂದ ಗೊಂದಲಕ್ಕೆ ಸಿಲುಕಿರುವ ಪೊಲೀಸರು. ಮಹಿಳೆಗೆ ವೈದ್ಯಕೀಯ ಪರೀಕ್ಷೆ ಮಾಡಿಸಲು ನಿರ್ಧರಿಸಿದ್ದಾರೆ. ಮಹಿಳೆ ಗರ್ಭೀಣಿಯಾಗಿದ್ದಳಾ? ಎಷ್ಟು ತಿಂಗಳು ಗರ್ಭೀಣಿಯಾಗಿದ್ದಳು? ಮೃತ ನವಜಾತ ಶಿಶುವಿಗೆ ಎಷ್ಟು ತಿಂಗಳು ಆಗಿತ್ತು. ಹೆರಿಗೆಯಾದಾಗ ಶಿಶು ಬದುಕಿತ್ತಾ? ಇತ್ಯಾದಿ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಶಿಶು ಹಾಗೂ ಮಹಿಳೆಯ ಡಿ.ಎನ್.ಎ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ. ಚಿಂತಾಮಣಿ ನಗರ ಠಾಣೆ ಪೊಲೀಸರಿಂದ ನಿರ್ಧಾರ ಕೈಗೊಳ್ಳಲಾಗಿದೆ.

ಒಂದೇ ಒಂದು ಮಗು ಆಗಲಿ, ಮಗುವಿನ ಬಾಯಲ್ಲಿ ಅಪ್ಪ, ಅಮ್ಮ ಎಂದು ಕರೆಯಿಸಿಕೊಳ್ಳುವ ಭಾಗ್ಯ ನಮಗೂ ಸಿಗಲಿ ಎಂದು ಅದೆಷ್ಟೊ ದಂಪತಿಗಳು ಇದ್ದಬದ್ದ ಆಸ್ಪತ್ರೆಗಳ ಮೆಟ್ಟಿಲನ್ನೆಲ್ಲಾ ಹತ್ತಿಳಿದು ದೇವರು, ದಿಂಡಿರು, ಪೂಜೆ ಪುನಸ್ಕಾರ ಎಂದೆಲ್ಲಾ ಮೊರೆ ಹೋಗುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಆಗತಾನೇ ಹುಟ್ಟಿದ ಮಗುವನ್ನೇ ಕಂಡಕಂಡಲ್ಲಿ ಎಸೆದು ನಿರ್ದಯವಾಗಿ ಹೋಗುವವರೂ ಇದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯೊಂದು ಎಂತಹ ಕಲ್ಲು ಹೃದಯವನ್ನೂ ಹಿಂಡುವಂತಿದೆ. ನವಜಾತ ಶಿಶುವೊಂದನ್ನು ಆಸ್ಪತ್ರೆಯ ಬಚ್ಚಲು ಕೋಣೆಯ ಕಿಟಕಿಗೆ ನೇಣು ಹಾಕಿ ಕೊಂದಿರುವ ಅತ್ಯಂತ ಅಮಾನವೀಯ ಘಟನೆ ನಡೆದಿತ್ತು.

ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವಕ ಕೃತ್ಯ ನಡೆದಿದ್ದು, ಆಗತಾನೇ ಹುಟ್ಟಿದ ಮಗುವನ್ನು ಬಚ್ಚಲ ಕೋಣೆಯ ಕಿಟಕಿಗೆ ನೇತುಹಾಕಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯನ್ನು ಸ್ವಚ್ಚಗೊಳಿಸುತ್ತಿದ್ದಾಗ ಬೆಳಗ್ಗೆ 8 ಗಂಟೆ ಸಮಯದಲ್ಲಿ ಬಚ್ಚಲಿನ ಬಾಗಿಲು ಬಂದ್​ ಆಗಿತ್ತು, ಸ್ವಚ್ಚಗೊಳಿಸಲೆಂದು ಎರಡು ಮೂರು ಸಲ ಹೋದಾಗಲೂ ಬಾಗಿಲು ಹಾಕಿತ್ತು. ನಂತರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೋಗಿ ನೋಡಿದಾಗ ಅಲ್ಲಿ ಹೆರಿಗೆಯಾದ ವಾಸನೆ ಬಂದಿದೆ. ತಕ್ಷಣ ಸಿಬ್ಬಂದಿ ಆಚೀಚೆ ನೋಡಿ ಕಣ್ಣೆತ್ತಿ ಗಮನ ಹರಿಸಿದಾಗ ಆಗ ತಾನೆ ಜನಿಸಿದ ಹೆಣ್ಣು ನವಜಾತ ಶಿಶು ನೇತಾಡುತ್ತಿರುವುದು ಕಂಡುಬಂದಿತ್ತು.

ನವಜಾತ ಶಿಶುವನ್ನು ನೇತು ಹಾಕಿದ್ದನ್ನು ನೋಡಿ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ ವೆಂಕಟೇಶ ಕೂಡಲೇ ವಿಷಯವನ್ನು ಕರ್ತವ್ಯ ನಿರತ ವೈದ್ಯ ಡಾ.ಜಯರಾಮ್ ಅವರಿಗೆ ತಿಳಿಸಿದ್ದರು. ತಕ್ಷಣ ವೈದ್ಯರು, ದಾದಿಯರು ಬಂದು ಪರಿಶೀಲಿಸಿದಾಗ ಮಗು ನೇತಾಡುತ್ತಾ ಉಸಿರಾಡುತ್ತಿತ್ತು. ತಡಮಾಡದೇ ಚಿಕಿತ್ಸೆ ನೀಡಲು ವೈದ್ಯರು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ನವಜಾತ ಶಿಶು ಮೃತಪಟ್ಟಿತ್ತು.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯ ಬಚ್ಚಲಲ್ಲಿ ನವಜಾತ ಶಿಶು ಹತ್ಯೆ; ಆರೋಪಿ ತಾಯಿ ಅರೆಸ್ಟ್

ಅಂಬಿಗನಿಗೆ ನವಜಾತ ಶಿಶುವನ್ನು ಉಡುಗೊರೆ ಕೊಟ್ಟ ಗಂಗಾನದಿ..: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ರಿಂದ ಭರವಸೆ, ಶ್ಲಾಘನೆ

Published On - 5:01 pm, Mon, 5 July 21