ಗುಡ್ ನ್ಯೂಸ್: ವೇಗ ಪಡೆದುಕೊಂಡ ಮೈಸೂರು-ಚೆನ್ನೈ ಬುಲೆಟ್ ಟ್ರೈನ್ ಯೋಜನೆ
Chennai-Mysore Bullet Train: ದಕ್ಷಿಣ ಭಾರತದ ಮೊದಲ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಆಗಿ, ಬೆಂಗಳೂರಿಂದ ಚೆನ್ನೈಗೆ ಕೇವಲ 1 ಅವಧಿಯಲ್ಲಿ ತಲುಪಬಲ್ಲ, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದ ಬುಲೆಟ್ ರೈಲು ಕಾರಿಡಾರ್ ನಿರ್ಮಾಣ ಯೋಜನೆ ಚುರುಕುಗೊಂಡಿದೆ. ಮೈಸೂರು-ಚೆನ್ನೈ ಬುಲೆಟ್ ಟ್ರೈನ್ ಯೋಜನೆ ಡಿಪಿಆರ್ ಸಿದ್ಧಗೊಳುತ್ತಿದೆ. ಈ ಬಗ್ಗೆ ನ್ಯಾಷನಲ್ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಮಹತ್ವದ ಅಪ್ಡೇಟ್ ನೀಡಿದೆ.

ಬೆಂಗಳೂರು, (ಜುಲೈ 24): ಚೆನ್ನೈ -ಬೆಂಗಳೂರು-ಮೈಸೂರು-ಬುಲೆಟ್ ರೈಲು (Chennai-Mysore Bullet Train) ಯೋಜನೆ ಚುರುಕುಗೊಂಡಿದೆ. ಸುಮಾರು 435 ಕಿಲೋಮೀಟರ್ ಉದ್ದದ ಈ ಮಹತ್ವಾಕಾಂಕ್ಷೆಯ ಹೈಸ್ಪೀಡ್ ರೈಲು ಕಾರಿಡಾರ್, ಮೂರು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ನ್ಯಾಷನಲ್ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಪ್ರಾರಂಭಿಸಿದೆ. ಈ ರೈಲು ಮೈಸೂರು ಮತ್ತು ಚೆನ್ನೈ ನಡುವಿನ ಪ್ರಸ್ತುತ 6 ಗಂಟೆ 30 ನಿಮಿಷಗಳ ಪ್ರಯಾಣದ ಸಮಯವನ್ನು ಕೇವಲ 2 ಗಂಟೆ 25 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ.
ಈ ಬಗ್ಗೆ ನ್ಯಾಷನಲ್ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಟ್ವೀಟ್ ಮಾಡಿದ್ದು, ಹೊಸ ಬುಲೆಟ್ ರೈಲು ಕಾರಿಡಾರ್‌ಗಳಿಗೆ ಡಿಪಿಆರ್‌ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದು, ದೆಹಲಿ-ವಾರಣಾಸಿ, ದೆಹಲಿ- ಅಹಮಾದಾಬಾದ್, ಮುಂಬೈ- ಹೈದರಾಬಾದ್, ಚೆನ್ನೈ-ಮೈಸೂರು, ದೆಹಲಿ- ಅಮೃತಸರ,ವಾರಣಾಸಿ-ಹೌರಾ ನಡುವಿನ ಬುಲೆಟ್ ಟ್ರೈನ್ ಯೋಜನೆಯ ಡಿಪಿಆರ್ ತಯರಾಗುತ್ತಿದೆ. ಲಿಸ್ಟ್ ನಲ್ಲಿ ಚೆನ್ನೈ ಟು ಮೈಸೂರು ಬುಲೆಟ್ ಟ್ರೈನ್ ಸಹ ಇದೆ. ಈ ಮೂಲಕ ಈ ಭಾಗದ ಜನರ ಬುಲೆಟ್ ಟ್ರೈನ್ ಕನಸು ನನಸಾಗುವ ಸಮಯ ಸಮೀಪಿಸುತ್ತಿದೆ.
ಇದನ್ನೂ ಓದಿ: ಬರಲಿದೆ ಬುಲೆಟ್ ಟ್ರೈನ್: ಚೆನ್ನೈ ಮೈಸೂರು ಮಧ್ಯೆ ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣ
🚨 NHSRCL has started preparing DPRs for new Bullet train corridors.
Possible high speed rail network:
• Delhi – Varanasi • Delhi – Ahmedabad • Mumbai – Nagpur • Mumbai – Hyderabad • Chennai – Mysore • Delhi – Amritsar • Varanasi – Howrah
— Indian Tech & Infra (@IndianTechGuide) July 24, 2025
ಈ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯು ಮೂರು ರಾಜ್ಯಗಳಾದ್ಯಂತ 463 ಕಿಲೋಮೀಟರ್‌ಗಳನ್ನು ವ್ಯಾಪಿಸುತ್ತದೆ. ಅವುಗಳೆಂದರೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ. ಈ ಬುಲೆಟ್ ರೈಲು ಬೆಂಗಳೂರಿನಲ್ಲಿ ಮೂರು ಸೇರಿದಂತೆ ಒಟ್ಟು 11 ನಿಲ್ದಾಣಗಳನ್ನು ಹೊಂದಿರುತ್ತದೆ. ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದ ಬುಲೆಟ್ ರೈಲು ಕಾರಿಡಾರ್ 463 ಕಿ.ಮೀ. ಉದ್ದದ ಯೋಜನೆಯಾಗಿದ್ದು, ಚೆನ್ನೈದಿಂದ ಆರಂಭವಾಗುವ ರೈಲು ಕೋಲಾರ ಮಾರ್ಗವಾಗಿ ಬೆಂಗಳೂರು ಹಾಗೂ ಮೈಸೂರಿಗೆ ತಲುಪಲಿದ್ದು, ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋಗಬಹುದಾಗಿದೆ.
ಗಂಟೆಗೆ 350 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವಿರುವ ಬುಲೆಟ್ ರೈಲು ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸಲಿದೆ. ಉಭಯ ನಗರಗಳ ನಡುವಣ ಪ್ರಯಾಣದದಲ್ಲಿ ಗಂಟೆಗೆ ಸರಾಸರಿ 250 ಕಿಮೀ ವೇಗದಲ್ಲಿ ಸಂಚರಿಸಲಿದೆ. ಹೈಸ್ಪೀಡ್ ರೈಲು ಎರಡೂ ನಗರಗಳ ನಡುವಣ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಮಾರ್ಗವು ಚೆನ್ನೈ, ಪೂನಮಲ್ಲಿ, ಚಿತ್ತೂರು, ಕೋಲಾರ, ಕೋಡಹಳ್ಳಿ, ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೆಂಗೇರಿ, ಮಂಡ್ಯ ಮತ್ತು ಮೈಸೂರುಗಳಲ್ಲಿ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ