ಬಜರಂಗದಳ ನಿಷೇಧ: ಮೂರ್ಖತನಕ್ಕೆ ಒಂದು ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್

ಬಜರಂಗದಳ((Bajrang Dal)ವು ಕೋಮು ಸೌಹಾರ್ದತೆಗೆ ಭಂಗ ತಂದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಂಘಟನೆ ನಿಷೇಧಿಸಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮೂರ್ಖತನಕ್ಕೆ ಒಂದು ಉದಾಹರಣೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜರಂಗದಳ ನಿಷೇಧ:  ಮೂರ್ಖತನಕ್ಕೆ ಒಂದು ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Image Credit source: Hindustan Times

Updated on: May 10, 2023 | 11:35 AM

ಬಜರಂಗದಳ((Bajrang Dal)ವು ಕೋಮು ಸೌಹಾರ್ದತೆಗೆ ಭಂಗ ತಂದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಂಘಟನೆ ನಿಷೇಧಿಸಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮೂರ್ಖತನಕ್ಕೆ ಒಂದು ಉದಾಹರಣೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡಿ ಮಾತನಾಡಿದ ಅವರು, ನಾವು ಯಾವಾಗಲೂ ಬಜರಂಗಬಲಿಯನ್ನು ಪೂಜಿಸುತ್ತೇವೆ, ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ, ಆದರೆ ಕಾಂಗ್ರೆಸ್​ಗೆ ಇದು ಚುನಾವಣಾ ವಿಷಯವಾಗಿದೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಯುವ ಘಟಕವಾದ ಬಜರಂಗದಳದ ಮೇಲೆ ನಿಷೇಧ ಹೇರುವ ಭರವಸೆ ನೀಡಿರುವುದು ಮೂರ್ಖತನಕ್ಕೆ ನಿದರ್ಶನವಾಗಿದೆ.. ಆದರೆ, ಕಾಂಗ್ರೆಸ್ಸಿಗೆ ಇದು ಚುನಾವಣಾ ವಿಷಯವಾಗಿದೆ. ಕರ್ನಾಟಕವು ಹನುಮಂತನ ಜನ್ಮಸ್ಥಳವಾಗಿದೆ. ಕಾಂಗ್ರೆಸ್ ನಾಯಕರು ಅಲ್ಲಿ, ಇಲ್ಲಿ ಹೇಳಿಕೆ ನೀಡುತ್ತಿಲ್ಲ, ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳುತ್ತಿದೆ. ಇದು ಮೂರ್ಖತನಕ್ಕೆ ನಿದರ್ಶನವಾಗಿದೆ ಎಂದಿದ್ದಾರೆ.

ಮತ್ತಷ್ಟು ಓದಿ: ಕಾಂಗ್ರೆಸ್ ​​ಪ್ರಣಾಳಿಕೆಯಲ್ಲಿರುವ ಬಜರಂಗದಳ ಬ್ಯಾನ್ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ ಮೊದಲು ಕ್ಷಮೆ ಕೇಳಲಿ – ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಗುಡುಗು

ಬಜರಂಗದಳ ನಿಷೇಧ ಮಾಡುವ ಕಾಂಗ್ರೆಸ್ ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ವಿಎಚ್‌ಪಿ, ಬಜರಂಗದಳ ಮೇ 9ರಂದು ಹಲವೆಡೆ ಪ್ರತಿಭಟನೆ ನಡೆಸಿತ್ತು.

ಕಳೆದ ವಾರ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಬದ್ಧವಾಗಿದ್ದು, ತಮ್ಮ ಸರ್ಕಾರ ಬಂದರೆ ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು. ಕಾಂಗ್ರೆಸ್ ಪಕ್ಷದ ಈ ನಡೆ ವಿರುದ್ಧ ಹಿಂದೂಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ