Karnataka Assembly Election: ವೋಟರ್ ಲಿಸ್ಟ್ನಲ್ಲಿ ಹೆಸರು ನಾಪತ್ತೆ; ಮತಗಟ್ಟೆಯಲ್ಲಿ ಭುಗಿಲೆದ್ದ ಮತದಾರರ ಆಕ್ರೋಶ
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಇಂದು(ಮೇ.10) ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿದ್ದು, ಮತದಾನ ಮಾಡಲು ಉತ್ಸಾಹದಿಂದ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ವೋಟರ್ ಲಿಸ್ಟ್ನಲ್ಲಿ ಅನೇಕರ ಹೆಸರು ನಾಪತ್ತೆಯಾಗಿದೆ. ಈ ಕುರಿತು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಇಂದು(ಮೇ.10) ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿದ್ದು, ಮತದಾನ ಮಾಡಲು ಉತ್ಸಾಹದಿಂದ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಜಯನಗರ(Jayanagar) ಕ್ಷೇತ್ರದ ವ್ಯಾಪ್ತಿಯಲ್ಲಿ ಜೆ.ಪಿ. ನಗರ 5ನೇ ಹಂತದಲ್ಲಿರುವ ಸಂವೇದ್ ಸ್ಕೂಲ್ ಮತಗಟ್ಟೆಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿದೆ. ಹೌದು ಒಂದೇ ಮನೆಯಲ್ಲಿನ ಮೂವರು ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ. ಮತ ಹಾಕಲು ಹೋದಾಗ ಪತಿ ಹೆಸರು ಮಾತ್ರ ಪಟ್ಟಿಯಲ್ಲಿದೆ. ಉಳಿದ ಪತ್ನಿ, ಅತ್ತೆ, ಮಾವರವರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದೆ. ಈ ಕುರಿತು ಮತಗಟ್ಟೆ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಕೆಲವರ ಹೆಸರು ನಾಪತ್ತೆಯಾಗಿದೆ. ಇನ್ನು ಈ ಕುರಿತು ಜೆ.ಪಿ ನಗರ 5ನೇ ಹಂತದ ನಿವಾಸಿ ಚೈತ್ರಾ ಪರ್ಯಾಯ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರೆ, ಅದರ ಬಗ್ಗೆ ನಮಗೆ ತರಬೇತಿ ಆಗಿಲ್ಲ, ಎಂದು ಮತಗಟ್ಟೆ ಅಧಿಕಾರಿ ಉತ್ತರಿಸುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ ಬಾರಿಯೂ ಕೂಡ ಹೀಗೆ ಆಗಿದ್ದು, ಪಟ್ಟಿಯಿಂದ ಹೆಸರು ಡಿಲೀಟ್ ಆಗಿ ಮತದಾನದಿಂದ ವಂಚಿತರಾಗಿದ್ದರಂತೆ. ಮತ್ತೆ ಈ ಬಾರಿ ಹೀಗಾಗಿದ್ದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಸೆಲೆಬ್ರಿಟಿಗಳು ಮತದಾನ ಮಾಡಾಯ್ತು.. ನೀವು ಮಾಡಿದ್ರಾ? ಇಲ್ಲಿದೆ ವೋಟ್ ಹಾಕಿದ ಸ್ಟಾರ್ಸ್ ಫೋಟೋ
ಮತದಾರ ಪಟ್ಟಿಯಲ್ಲಿ ಹೆಸರಿಲ್ಲದೇ ಬ್ಯಾಟರಾಯನಪುರ ಕ್ಷೇತ್ರದ ಮತದಾರರ ಪರದಾಟ
ಬೆಂಗಳೂರು: ಮತದಾತ ಮಾಡುವ ಉತ್ಸಾಹದಿಂದ ಬಂದಿದ್ದ ಬ್ಯಾಟರಾಯನಪುರ ಕ್ಷೇತ್ರದ ಇಬ್ಬರು ಮತದಾರರು ಮತದಾನ ಮಾಡಲಾಗದೇ ನಿರಾಸೆಯಿಂದ ಹೊರಟಿದ್ದಾರೆ. ಹೌದು ಮತದಾರರ ಪಟ್ಟಿಯಲ್ಲಿ ಕುಟುಂಬದವರ ಹೆಸರಿದೆ. ಆದ್ರೆ, ನಮ್ಮ ಹೆಸರು ಬಿಟ್ಟುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ ಬ್ಯಾಟರಾಯನಪುರ ಮತಗಟ್ಟೆ 219 ರಲ್ಲಿ ಸಾರ್ವಜನಿಕರ ಗಲಾಟೆ ತಗೆದಿದ್ದಾರೆ. ಒಂದೂವರೆ ಗಂಟೆಯಿಂದ ಮತ ಹಾಕಲು ಜನರು ಕಾಯುತ್ತಿದ್ದು, ಅಧಿಕಾರಿಗಳಿಂದ ಪ್ರಕ್ರಿಯೆ ತಡವಾಗುತ್ತಾ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಮತದಾರರು ಮತ ಹಾಕದೇ ವಾಪಸ್ ಹೋಗುತ್ತಿದ್ದಾರೆ.
ಕರ್ನಾಟಕ ಚುನಾವಣೆ 2023 ಲೈವ್ ಅಪ್ಡೇಟ್ಸ್
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ