Nitin Gadkari: ರಾಜ್ಯದ ವಿವಿಧೆಡೆ ಹೆದ್ದಾರಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ ಧನ್ಯವಾದ

National Highways Development in Karnataka: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆ ಕಾಮಗಾರಿಗಳಿಗೆ 3 ಸಾವಿರ ಕೋಟಿ ರೂಗೂ ಹೆಚ್ಚು ಅನುದಾನ ಪ್ರಕಟಿಸಿದ್ದಾರೆ.

Nitin Gadkari: ರಾಜ್ಯದ ವಿವಿಧೆಡೆ ಹೆದ್ದಾರಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ ಧನ್ಯವಾದ
ನಿತಿನ್ ಗಡ್ಕರಿ

Updated on: Feb 08, 2023 | 2:09 PM

ಬೆಂಗಳೂರು: ಈ ಬಾರಿ ಬಜೆಟ್​ನಲ್ಲಿ ಹೆದ್ದಾರಿ ಇಲಾಖೆಗೆ ಬಹಳಷ್ಟು ಅನುದಾನ ಕೊಡಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಬಹಳಷ್ಟು ಹೆದ್ದಾರಿ ಯೋಜನೆಗಳಿಗೆ ಅನುದಾನ ಕೊಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆ ಕಾಮಗಾರಿಗಳಿಗೆ 3 ಸಾವಿರ ಕೋಟಿ ರೂಗೂ ಹೆಚ್ಚು ಅನುದಾನ ಪ್ರಕಟಿಸಿದ್ದಾರೆ. ಇವುಗಳ ಪೈಕಿ ಬಿಜಾರಪುದ ಮಹಾರಾಷ್ಟ್ರ ಗಡಿಭಾಗದ ಕನಮಡಿಬಿಜ್ಜರಗಿತಿಕೋಟ ಸೆಕ್ಷನ್​ನಲ್ಲಿ ದ್ವಿಪಥ ರಸ್ತೆಯ ಅಗಲೀಕರಣಕ್ಕೆ 196 ಕೋಟಿ ರೂ ಅನುದಾನ ನೀಡಲಾಗಿರುವ ವಿಚಾರವನ್ನು ತಿಳಿಸಿ ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರ ಈ ಟ್ವೀಟ್​ಗೆ ಪ್ರತಿಕ್ರಿಯಿಸಿ, ವಿಶ್ವದರ್ಜೆಯ ಇನ್​ಫ್ರಾಸ್ಟ್ರಕ್ಚರ್ ಅನ್ನು ಒದಗಿಸಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.


ಯಾವ್ಯಾವ ಯೋಜನೆಗೆ ಎಷ್ಟೆಷ್ಟು ಅನುದಾನ?

* ಕನಮಡಿ ಬಿಜ್ಜರಗಿ ಟಿಕೋಟಾ ಸೆಕ್ಷನ್​ನಲ್ಲಿ (ಬಿಜಾಪುರ) ದ್ವಿಪಥ ರಸ್ತೆಯ ಅಗಲೀಕರಣ: 196.05 ಕೋಟಿ ರೂ

* ವಿಜಯಪುರ ಕಲಬುರ್ಗಿಯ ಮಹಾರಾಷ್ಟ್ರ ಗಡಿಭಾಗದ ರಾಹೆ-548ಬಿಗೆ ಸೇರುವ ಮುರುಂನಿಂದ ಐಬಿ ಸರ್ಕಲ್​ವರೆಗಿನ ದ್ವಿಪಥ ರಸ್ತೆಯ ಅಗಲೀಕರಣ ಯೋಜನೆ: 957.09 ಕೋಟಿ ರೂ

* ಕೊಪ್ಪಳ ಮತ್ತು ಗದಗ್​ನಲ್ಲಿ ರಾಹೆ-367ರ ಗಡ್ಡನಕೇರಿ ಸೆಕ್ಷನ್​ನಲ್ಲಿ ಕುಕುನೂರ, ಯಲಬುರ್ಗ, ಗಜೇಂದ್ರಗಡದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ: 333.96 ಕೋಟಿ ರೂ.

* ಬಾಗಲಕೋಟೆ ಜಿಲ್ಲೆ ರಾಹೆ-367: ಸರ್ಜಾಪುರದಿಂದ ಪಟ್ಟದಕಲ್ಲು ರಸ್ತೆ ಅಗಲೀಕರಣ ಯೋಜನೆ: 445.62 ಕೋಟಿ ರೂ

* ಮೈಸೂರಿನಿಂದ ಕುಶಾಲನಗರದರೆಗಿನ ರಾಹೆ 275, ಗುಡ್ಡೆಹೊಸೂರು ಬಳಿ ನಾಲ್ಕು ಪಥ ರಸ್ತೆ ಅಗಲೀಕರಣ ಯೋಜನೆ: 909.86 ಕೋಟಿ ರೂ

* ಮೈಸೂರು ಜಿಲ್ಲೆ ಯಲವಾಲ ಕೆಆರ್ ನಗರ ರಸ್ತೆ ಜಂಕ್ಷನ್​ನಲ್ಲಿ ನಾಲ್ಕು ಲೇನ್ ರಸ್ತೆ ನಿರ್ಮಾಣ ಯೋಜನೆ: 739.39 ಕೋಟಿ ರೂ.

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us