ಬಳ್ಳಾರಿಯಲ್ಲಿ ಸುಳ್ಳು ಗುರುತಿನಲ್ಲಿ ವಾಸಿಸುತ್ತಿದ್ದ ಪಿಎಫ್ಐ ಶಸ್ತ್ರಾಸ್ತ್ರ ತರಬೇತುದಾರನನ್ನು ಬಂಧಿಸಿದ ಎನ್‌ಐಎ
ಆರೋಪಿ ನಂದ್ಯಾಲ್‌ನ ನೋಸಮ್ ಮೊಹಮ್ಮದ್ ಯೂನಸ್ 2022 ರ ಸೆಪ್ಟೆಂಬರ್‌ನಲ್ಲಿ ಎನ್‌ಐಎ ತನ್ನ ಮನೆಯನ್ನು ಶೋಧಿಸುವ ಮೊದಲು ತನ್ನ ಕುಟುಂಬದೊಂದಿಗೆ ನಾಪತ್ತೆಯಾಗಿದ್ದನು. ಎನ್‌ಐಎ ತನಿಖೆಯ ಪ್ರಕಾರ, ಈತ ತನ್ನ ಇಡೀ ಕುಟುಂಬವನ್ನು ಆಂಧ್ರಪ್ರದೇಶದಿಂದ ಸ್ಥಳಾಂತರಿಸಿ ಕರ್ನಾಟಕದಲ್ಲಿ ಸುಳ್ಳು ಗುರುತಿನಡಿಯಲ್ಲಿ ವಾಸಿಸುತ್ತಿದ್ದ.
ನಿಜಾಮಾಬಾದ್ ಭಯೋತ್ಪಾದನೆ (Nizamabad terror conspiracy) ಸಂಚಿನ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಯ ಮಾಸ್ಟರ್ ಶಸ್ತ್ರ ತರಬೇತುದಾರನನ್ನು ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಶಕ್ಕೆ ತೆಗೆದುಕೊಂಡಿದೆ. ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯೊಂದಿಗೆ ಅದಕ್ಕಾಗಿ ಯುವಜನರನ್ನು ಆಯ್ಕೆ ಮಾಡಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು ನಿರ್ಬಂಧಿತ ಪಿಎಫ್ಐ ನಾಯಕರು ಶ್ರಮಿಸುತ್ತಿದ್ದರು. ಆರೋಪಿ ನಂದ್ಯಾಲ್‌ನ ನೋಸಮ್ ಮೊಹಮ್ಮದ್ ಯೂನಸ್ 2022 ರ ಸೆಪ್ಟೆಂಬರ್‌ನಲ್ಲಿ ಎನ್‌ಐಎ ತನ್ನ ಮನೆಯನ್ನು ಶೋಧಿಸುವ ಮೊದಲು ತನ್ನ ಕುಟುಂಬದೊಂದಿಗೆ ನಾಪತ್ತೆಯಾಗಿದ್ದನು. ಎನ್‌ಐಎ ತನಿಖೆಯ ಪ್ರಕಾರ, ಈತ ತನ್ನ ಇಡೀ ಕುಟುಂಬವನ್ನು ಆಂಧ್ರಪ್ರದೇಶದಿಂದ ಸ್ಥಳಾಂತರಿಸಿ ಕರ್ನಾಟಕದಲ್ಲಿ ಸುಳ್ಳು ಗುರುತಿನಡಿಯಲ್ಲಿ ವಾಸಿಸುತ್ತಿದ್ದ. ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶಗಳಲ್ಲಿ ಪಿಎಫ್‌ಐನಿಂದ ನೇಮಕಗೊಂಡ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸಬೇಕೆಂದು ಕಲಿಸಿದ ಯೂನಸ್ ಮಾಸ್ಟರ್ ಶಸ್ತ್ರಾಸ್ತ್ರ ತರಬೇತುದಾರರಾಗಿದ್ದ ಎಂದು ಹೇಳಲಾಗಿದೆ.
NIA ARRESTS PFI MASTER WEAPONS TRAINER LIVING UNDER FALSE IDENTITY IN KARNATAKA pic.twitter.com/U5IbMerjzN
— NIA India (@NIA_India) June 14, 2023
ನಿಜಾಮಾಬಾದ್ ಪಿಎಫ್‌ಐ ಪ್ರಕರಣದಲ್ಲಿ ಯೂನಸ್ ಈ ಎರಡು ರಾಜ್ಯಗಳಿಗೆ ಪಿಇ ತರಬೇತಿ ರಾಜ್ಯ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆತನ ಬಂಧನದೊಂದಿಗೆ ದೇಶವನ್ನು ವಿಭಜಿಸುವ ಮತ್ತು ದೇಶದ ಸಮುದಾಯಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳು ಮಾಡಲು ಅಮಾಯಕ ಮುಸ್ಲಿಂ ಯುವಕರನ್ನು ಬಳಸಿಕೊಳ್ಳುವ ಪಿಎಫ್‌ಐನ ಮೂಲಭೂತ ಯೋಜನೆಗಳನ್ನು ಎನ್‌ಐಎ ಮತ್ತೊಮ್ಮೆ ಬಹಿರಂಗಪಡಿಸಿದೆ.
ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡು ಅದನ್ನು (RC-03/2022/NIA/HYD) ಎಂದು ಮರು-ನೋಂದಣಿ ಮಾಡುವ ಮೊದಲು, ತೆಲಂಗಾಣ ಪೊಲೀಸರು ಮೊದಲು ಜುಲೈ 4, 2022 ರಂದು ಎಫ್‌ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: NIA Raid: ಕರ್ನಾಟಕ ಸೇರಿದಂತೆ ಹಲವೆಡೆ ಎನ್ಐಎ ದಾಳಿ, ಅಪಾರ ಪ್ರಮಾಣದ ನಗದು ಜಪ್ತಿ
ಈ ಪ್ರಕರಣದಲ್ಲಿ ಎನ್‌ಐಎ ಈಗಾಗಲೇ 16 ವ್ಯಕ್ತಿಗಳ ವಿರುದ್ಧ ಎರಡು ಚಾರ್ಜ್‌ಶೀಟ್‌ಗಳನ್ನು ನೀಡಿದೆ.
ಸೆಪ್ಟೆಂಬರ್ 2022 ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ (MHA) PFI ಮತ್ತು ಅದರ ಹಲವಾರು ಅಂಗಸಂಸ್ಥೆಗಳನ್ನು “ಕಾನೂನುಬಾಹಿರ ಸಂಘ” ಎಂದು ಘೋಷಿಸಿತು. ಈ ಸಂಘಟನೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ವಿವಿಧ ರಾಜ್ಯ ಪೊಲೀಸ್ ಘಟಕಗಳು ಮತ್ತು ರಾಷ್ಟ್ರೀಯ ಏಜೆನ್ಸಿಗಳ ತನಿಖೆಯ ಸಮಯದಲ್ಲಿ ಪತ್ತೆಯಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Wed, 14 June 23