ಮೈಸೂರಿನಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಕೊರತೆ ಇಲ್ಲ: ಸಚಿವ ಸೋಮಶೇಖರ್
ಮೈಸೂರಿಗೆ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.ಇದರಿಂದ ಕೆಲವು ಕಡೆ ಸಮಸ್ಯೆಯಾಗಿದೆ ಈ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಈ ವಿಚಾರದಲ್ಲಿ ಗೊಂದಲಗಳು ಬೇಡ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.
ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಕೊರತೆ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ. ಖಾಸಗಿ ಆಸ್ಪತ್ರೆ ಸಹಕಾರ ಚೆನ್ನಾಗಿದೆ ಒಪ್ಪಿಕೊಂಡಷ್ಟು ಬೆಡ್ ನೀಡಿದ್ದಾರೆ. ಮೈಸೂರಿಗೆ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.ಇದರಿಂದ ಕೆಲವು ಕಡೆ ಸಮಸ್ಯೆಯಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಈ ವಿಚಾರದಲ್ಲಿ ಗೊಂದಲಗಳು ಬೇಡ ಎಂದು ಸಚಿವರು ಹೇಳಿದ್ದಾರೆ.
ಆಕ್ಸಿಜನ್ ಸರಬರಾಜಾಗದಿದ್ದರೆ ಇನ್ನು 2-3 ದಿನದಲ್ಲಿ ಸಮಸ್ಯೆ: ರೋಹಿಣಿ ಸಿಂಧೂರಿ ತೀವ್ರ ಆತಂಕ ಮೈಸೂರಿಗೆ ತುರ್ತಾಗಿ ಪರ್ಯಾಯವಾಗಿ ಆಕ್ಸಿಜನ್ ಬೇಕಿದೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ವಾರಾಂತ್ಯದಲ್ಲಿ 50 ವೆಂಟಿಲೇಟರ್ ನೀಡುವ ಭರವಸೆ ನೀಡಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ ಹೊಸ ಪ್ಲ್ಯಾಂಟ್‌ಗೆ ಅನುಮತಿ ಸಿಕ್ಕಿದೆ. ಆದರೆ ಅದಕ್ಕೆ ಕನಿಷ್ಠ 25 ದಿನ ಬೇಕು
ಆಕ್ಸಿಜನ್ ಸರಬರಾಜಾಗದಿದ್ದರೆ ಇನ್ನು 2-3 ದಿನದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ರೋಹಿಣಿ ಸಿಂಧೂರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಒಂದೇ ದಿನ 1500 ಪಾಸಿಟಿವ್ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಹಳೆಯ ಅಂಕಿ ಅಂಶಗಳೆಲ್ಲಾ ಸೇರಿ ನೀಡಿದ ಒಟ್ಟು ಪಾಸಿಟಿವ್ ರೋಗಿಗಳ ಸಂಖ್ಯೆ. ಅಂಕಿ ಅಂಶಗಳು ಎರಡು ದಿನದು ಸೇರಿದಾಗ ಈ ರೀತಿ ಹೆಚ್ಚಾದಂತೆ ಕಾಣುತ್ತದೆ. ಸಾವಿರ ದಾಟಿದೆ ಎಂದು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಲಗೇಜ್ ಆಟೊದಲ್ಲಿ ಬಂದ ಕೊರೊನಾ ಸೋಂಕಿತ, ಬೆಡ್ ಸಿಗದೆ ಪರದಾಟ ತುಮಕೂರು: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಆಂಬುಲೆನ್ಸ್ ಸಿಗದೆ ಆಟೊದಲ್ಲಿಯೇ ಆಸ್ಪತ್ರೆಗೆ ಬಂದಿದ್ದಾರೆ. ಲಗೇಜ್ ಆಟೊದಲ್ಲಿ ಬಂದಿದ್ದ ಆ ವ್ಯಕ್ತಿಗೆ ಆಸ್ಪತ್ರೆಯಲ್ಲಿಯೂ ಬೆಡ್ ಸಿಗಲಿಲ್ಲ. ಸೋಂಕಿತನ ತಪಾಸಣೆ ಮಾಡದೇ ಸಿಬ್ಬಂದಿಯ ನಿರ್ಲಕ್ಷ್ಯವಹಿಸಿದ್ದು ಬೆಡ್ ಸಿಗದೆ ಆಟೊದಲ್ಲಿಯೇ ಕುಳಿತಿರಬೇಕಾದ ಪರಿಸ್ಥಿತಿ ಬಂದೊದಗಿದೆ.
ದಾವಣಗೆರೆ: ಹಣದ ದಾಹಕ್ಕೆ ರೋಗಿ ಪರದಾಟ
ಮಹಾಮಾರಿ ಕೊರೊನಾ ಸಮಯದಲ್ಲಿ ಅನೇಕ ಮುಖವಾಡಗಳು ಬಯಲಾಗುತ್ತಿವೆ. ಖಾಸಗಿ ಆಸ್ಪತ್ರೆಗಳು ತಮ್ಮ ಹಣದ ದಾಹಕ್ಕೆ ಏನೆನೋ ಹೀನ ಕೃತ್ಯಕ್ಕೆ ಮುಂದಾಗಿರುವ ಬಗ್ಗೆ ಅನೇಕ ಸಂಗತಿಗಳು ಹರಿದಾಡುತ್ತಿವೆ. ಈಗ ಇದಕ್ಕೆ ಪುಷ್ಟಿಕೊಡುವಂತೆ ಖಾಸಗಿ ಆಸ್ಪತ್ರೆಯ ಹಣದ ದಾಹಕ್ಕೆ ಉಸಿರಾಟ ಸಮಸ್ಯೆಯಿಂದ ವೃದ್ಧೆ ಪರದಾಡಿದಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮುಂಗಡ ಹಣ ಪಾವತಿಸಲಾಗದೆ ವೃದ್ಧೆ ಮನೆಗೆ ವಾಪಸ್ ಆಗಿದ್ದಾರೆ. ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೋಡಿಯಾಲ ಗ್ರಾಮದ ಅನುಸೂಯಮ್ಮಗೆ ಉಸಿರಾಟ ಸಮಸ್ಯೆ ಇತ್ತು. ಹೀಗಾಗಿ ದಾವಣೆಗೆರೆ ಆಸ್ಪತ್ರೆಗೆ ಬಂದಿದ್ದರು. ಆದ್ರೆ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದರು. ಬಳಿಕ ಹಲವು ಆಸ್ಪತ್ರೆಗಳು ಸುತ್ತಾಡಿದ್ದ ವೃದ್ಧೆ ಅನುಸೂಯಮ್ಮಗೆ ಬೆಡ್ ಸಿಕ್ಕಿಲ್ಲ. ಜಿಲ್ಲಾಸ್ಪತ್ರೆಯಿಂದ ರೆಫರೆನ್ಸ್ ಲೆಟರ್ ಇದ್ದರೂ ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಂಡಿಲ್ಲ. ಕೊವಿಡ್ ನೆಗೆಟಿವ್ ಇದ್ದರೂ ಆಕೆಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕಿವೆ.
ಅದರಲ್ಲೂ ಒಂದು ಖಾಸಗಿ ಆಸ್ಪತ್ರೆ ಮುಂಗಡವಾಗಿ 20 ಸಾವಿರ ಪಾವತಿಸಲು ಸೂಚಿಸಿದೆ. ಹಣ ಪಾವತಿಸಲು ಸಾಧ್ಯವಾಗದೆ ವೃದ್ಧೆ ತಮ್ಮ ಊರಿಗೆ ವಾಪಸ್ ಆಗಿದ್ದಾರೆ. ದಾವಣಗೆರೆಯಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ಸಿಗುವುದು ಕೂಡ ಕಷ್ಟವಾಗಿದೆ.
ಇದನ್ನೂ ಓದಿ: ಕೊವಿಡ್ ಹಿನ್ನೆಲೆ ಆರ್ಥಿಕ ಸಂಕಷ್ಟ: ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ- CM ಬಿ ಎಸ್ ಯಡಿಯೂರಪ್ಪ
ಕೊರೊನಾ ಸಂಕಷ್ಟ: ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಬಿಲ್ ಕಟ್ಟಲು ಆಗದೇ ಪತಿಯ ಮೃತದೇಹ ಬಿಟ್ಟು ಹೋದ ಮಹಿಳೆ
(No bed shortage for coronavirus patients in Mysore says Minister ST Somashekar)
Published On - 5:30 pm, Tue, 27 April 21