ಆಷಾಢ ಅಮಾವಾಸ್ಯೆ; ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಈ ದಿನಗಳಲ್ಲಿ ಭಕ್ತರ ಭೇಟಿ ಸಂಪೂರ್ಣ ನಿಷೇಧ
ಮೈಸೂರಿನಲ್ಲಿ ಕೊರೊನಾ ಭೀತಿ ಕಡಿಮೆಯಾಗಿಲ್ಲ. ಅದಲ್ಲದೆ ಇಂದು ಆಷಾಢ ಶುಕ್ರವಾರ ಇರುವುದರಿಂದ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡ್ತಾರೆ. ಇದರಿಂದ ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಿದೆ.
ಮೈಸೂರು: ಇಂದು ಆಷಾಢ ಶುಕ್ರವಾರ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಭಕ್ತರ ಭೇಟಿ ನಿಷೇಧ ಮಾಡಲಾಗಿದೆ. ಆಷಾಢ ಶುಕ್ರವಾರಗಳಂದು ಭೇಟಿ ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಭೀತಿ ಕಡಿಮೆಯಾಗಿಲ್ಲ. ಅದಲ್ಲದೆ ಇಂದು ಆಷಾಢ ಶುಕ್ರವಾರ ಇರುವುದರಿಂದ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡ್ತಾರೆ. ಇದರಿಂದ ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 4 ಆಷಾಢ ಶುಕ್ರವಾರ, 2 ಅಮಾವಾಸ್ಯೆ ದಿನ ಭೇಟಿ ನಿರ್ಬಂಧ ಮಾಡಿ ಮೈಸೂರು ಡಿಸಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ನಾಲ್ಕು ಆಷಾಢ ಶುಕ್ರವಾರ ಎರಡು ದಿನ ಅಮಾವಾಸ್ಯೆ ದಿನ ನಿರ್ಬಂಧ 09/07/2021 ಆಷಾಡ ಅಮಾವಾಸ್ಯೆ, 16/07/2021 ಮೊದಲನೇ ಆಷಾಡ ಶುಕ್ರವಾರ, 23/07/2021 2ನೇ ಆಷಾಡ ಶುಕ್ರವಾರ, 30/07/2021 3ನೇ ಆಷಾಡ ಶುಕ್ರವಾರ, ಅಮ್ಮನವರ ವರ್ಧಂತಿ, 06/08/2021 4ನೇ ಆಷಾಡ ಶುಕ್ರವಾರ, 08/08/2021 ಭೀಮನ ಆಮಾವಾಸ್ಯೆ ದಿನ ನಿರ್ಬಂಧ ಹೇರಲಾಗಿದೆ. ಆಷಾಡ ಮಾಸದ ಶನಿವಾರ ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ಭಕ್ತರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ.
ಇನ್ನು ಸಾಮಾನ್ಯವಾಗಿ ಪ್ರತಿದಿನ ಸಂಜೆ 6.00 ಘಂಟೆಯ ನಂತರವೂ ನಿರ್ಬಂಧವಿದೆ. ಉತ್ತನಹಳ್ಳಿ ಗ್ರಾಮದಲ್ಲಿರುವ ಜ್ವಾಲಾ ತ್ರಿಪುರಸುಂದರಿ ದೇವಾಲಯಕ್ಕೂ ಈ ಆದೇಶ ಅನ್ವಯವಾಗುತ್ತದೆ. ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಪ್ರವೇಶಕ್ಕೂ ಬ್ರೇಕ್ ಹಾಕಲಾಗಿದೆ. ದಾಸೋಹ, ಊಟದ ವ್ಯವಸ್ಥೆ ಪ್ರಸಾದ ವಿತರಣೆ ಮಾಡುವಂತಿಲ್ಲ. ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ತುರ್ತು ಸೇವಾ ವಾಹನಗಳು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಎಂದಿನಂತೆ ಅರ್ಚಕರಿಂದ ಪೂಜಾ ಕೈಂಕರ್ಯ ಜರುಗುತ್ತೆ.
ಇನ್ನು ಬೆಂಗಳೂರಿನಲ್ಲಿ ಇಂದು ಶುಕ್ರವಾರದ ಅಮಾವಾಸ್ಯೆ ಹಿನ್ನಲೆಯಲ್ಲಿ ದೇವಾಲಯಗಳ ಕಡೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಮೆಜೆಸ್ಟಿಕ್ನ ಅಣ್ಣಮ್ಮ ದೇವಾಲಯದಲ್ಲಿ ಬೆಳಂ ಬೆಳಗ್ಗೆಯೇ ದೇವಿಯ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದೆ. ಬನಶಂಕರಿ ದೇವಸ್ಥಾನದಲ್ಲೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ. ಸರ್ಕಾರದ ನಿಯಮಗಳ ಪ್ರಕಾರ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ‘ಚಾಮುಂಡಿ ಬೆಟ್ಟದ ಮೇಲೆ ಒಂದು ಸಾವಿರ ಬಾರಿ ನನ್ನ ಹುಡುಗಿ ಹೆಸರು ಬರೆದು ಅರೆಸ್ಟ್ ಆಗಿದ್ದೆ’
Published On - 9:13 am, Fri, 9 July 21