ಕರ್ನಾಟಕದಲ್ಲಿ ಯಾವುದೇ ರೀತಿ ರಸಗೊಬ್ಬರ ಕೊರತೆ ಇಲ್ಲ: ಕೃಷಿ ಇಲಾಖೆ ಮಾಧ್ಯಮ ಪ್ರಕಟಣೆ

6,05,760 ಮೆಟ್ರಿಕ್ ಟನ್ ರಸಗೊಬ್ಬರ (ಡಿಎಪಿ 33,570 ಮೆಟ್ರಿಕ್ ಟನ್, ಎಂಒಪಿ 28,420 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 3,16,140 ಮೆಟ್ರಿಕ್ ಟನ್ ಹಾಗೂ ಯೂರಿಯಾ 2,27,630 ಮೆಟ್ರಿಕ್ ಟನ್) ದಾಸ್ತಾನು ಇದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಯಾವುದೇ ರೀತಿ ರಸಗೊಬ್ಬರ ಕೊರತೆ ಇಲ್ಲ: ಕೃಷಿ ಇಲಾಖೆ ಮಾಧ್ಯಮ ಪ್ರಕಟಣೆ
ಸಾಂದರ್ಭಿಕ ಚಿತ್ರ
Updated By: ganapathi bhat

Updated on: Oct 26, 2021 | 6:41 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಯಾವುದೇ ರೀತಿ ರಸಗೊಬ್ಬರ ಕೊರತೆ ಇಲ್ಲ. ಸೆಪ್ಟೆಂಬರ್​​ವರೆಗೆ 7,08,850 ಮೆಟ್ರಿಕ್ ಟನ್ ದಾಸ್ತಾನಿದೆ. ದಾಸ್ತಾನಿರುವ ಗೊಬ್ಬರ ಹಿಂಗಾರಿಗೂ ಬಳಸಿಕೊಳ್ಳಬಹುದು ಎಂದು ಕೃಷಿ ಇಲಾಖೆಯಿಂದ ಇಂದು (ಅಕ್ಟೋಬರ್ 26) ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ರಾಜ್ಯದಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಅಕ್ಟೋಬರ್ 2021 ರಿಂದ ಮಾರ್ಚ್ 2022 ರವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಗೊಬ್ಬರಗಳಿಗೆ 16 ಲಕ್ಷದ 94 ಸಾವಿರ ಮೆಟ್ರಿಕ್ ಟನ್ ಬೇಡಿಕೆಯಿದೆ. ಅಕ್ಟೋಬರ್ 2021 ರ ಅಂತ್ಯದವರೆಗೆ 2,80,456 ಮೆಟ್ರಿಕ್ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರಗಳಿಗೆ ಬೇಡಿಕೆಯಿದೆ. ಆರಂಭಿಕ ಶುಲ್ಕ ಸೆಪ್ಟೆಂಬರ್ 2021 ರ ಅಂತ್ಯದವರೆಗೆ 7,0 8850 ಮೆಟ್ರಿಕ್ ಟನ್ ಒಳಗೊಂಡಂತೆ ಅಕ್ಟೋಬರ್ 2,30,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರ ಸರಬರಾಜಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಟ್ಟು ರಾಜ್ಯದಲ್ಲಿ ಅಕ್ಟೋಬರ್ ಗೆ 9,39,000 ಮೆಟ್ರಿಕ್ ಟನ್ ಲಭ್ಯವಿರುತ್ತದೆ. 26-10-2021ರವರೆಗೆ 3,33,000 ಮೆಟ್ರಿಕ್ ಮಾರಾಟವಾಗಿದೆ. ಉಳಿದ 6,05,760 ಮೆಟ್ರಿಕ್ ಟನ್ ರಸಗೊಬ್ಬರ (ಡಿಎಪಿ 33,570 ಮೆಟ್ರಿಕ್ ಟನ್, ಎಂಒಪಿ 28,420 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 3,16,140 ಮೆಟ್ರಿಕ್ ಟನ್ ಹಾಗೂ ಯೂರಿಯಾ 2,27,630 ಮೆಟ್ರಿಕ್ ಟನ್) ದಾಸ್ತಾನು ಇದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಹೇಳಲಾಗಿದೆ.

ಮುಂಗಾರು ಹಂಗಾಮಿನಲ್ಲಿ 26,47,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ ನ ರಸಗೊಬ್ಬರಕ್ಕೆ ಬೇಡಿಕೆಯಿರುವುದನ್ನು ಯಾವುದೇ ಕೊರತೆಯಿಲ್ಲದೇ ಪೂರೈಸಲಾಗಿದೆ. ಆರಂಭಿಕ ಶುಲ್ಕ (11,54,320 ಮೆ.ಟ) ಹಾಗೂ 24 ಲಕ್ಷ ಮೆಟ್ರಿಕ್ ಟನ್ ಸರಬರಾಜು ಒಳಗೊಂಡಂತೆ ಒಟ್ಟು 35,63,000 ಮೆ.ಟನ್ ವಿವಿಧ ರಸಗೊಬ್ಬರ ಮುಂಗಾರಿನಲ್ಲಿ ಪೂರೈಸಲಾಗಿದೆ. ಮುಂಗಾರಿನಲ್ಲಿ 28,54,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ ನ ರಸಗೊಬ್ಬರ ಮಾರಾಟವಾಗಿದೆ. ಪೂರೈಕೆಯ ಬಳಿಕವೂ ಸೆಪ್ಟೆಂಬರ್ 2021 ಅಂತ್ಯಕ್ಕೆ ಸೆಪ್ಟೆಂಬರ್ 2021 ರ ಅಂತ್ಯದವರೆಗೆ 7,0 8850 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ಈ ದಾಸ್ತಾನನ್ನು ಹಿಂಗಾರಿಗೂ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಏಳು ವರ್ಷದಲ್ಲಿ ಎಲ್ಲಿಯೂ ಗೊಬ್ಬರ ಕೊರತೆಯಾಗಿಲ್ಲ; ಕೊರತೆ ಇದ್ದ ಕಡೆ ಗೊಬ್ಬರ ಪೂರೈಸುತ್ತೇವೆ: ಭಗವಂತ

ಇದನ್ನೂ ಓದಿ: ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ; ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತರು