Cashback And Gift Vouchers: ಕ್ಯಾಶ್​ಬ್ಯಾಕ್ ಹಾಗೂ ಗಿಫ್ಟ್​ ವೋಚರ್​ಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದಿಲ್ಲ: ಕರ್ನಾಟಕ ಹೈಕೋರ್ಟ್​

ಕ್ಯಾಶ್​ಬ್ಯಾಕ್(Cash Back) ​ ಹಾಗೂ ಗಿಫ್ಟ್​ ವೋಚರ್​ಗಳು ಸರಕು ಮತ್ತು ಸೇವೆಗಳಡಿಯಲ್ಲಿ ಬರುವುದಿಲ್ಲ ಹೀಗಾಗಿ ಇವುಗಳು ಜಿಎಸ್​ಟಿ (GST)ವ್ಯಾಪ್ತಿಗೆ ಸೇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ

Cashback And Gift Vouchers: ಕ್ಯಾಶ್​ಬ್ಯಾಕ್ ಹಾಗೂ ಗಿಫ್ಟ್​ ವೋಚರ್​ಗಳು ಜಿಎಸ್​ಟಿ ವ್ಯಾಪ್ತಿಗೆ ಬರುವುದಿಲ್ಲ: ಕರ್ನಾಟಕ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್​
Follow us
ನಯನಾ ರಾಜೀವ್
|

Updated on: Feb 16, 2023 | 10:05 AM

ಕ್ಯಾಶ್​ಬ್ಯಾಕ್(Cash Back) ​ ಹಾಗೂ ಗಿಫ್ಟ್​ ವೋಚರ್​ಗಳು ಸರಕು ಮತ್ತು ಸೇವೆಗಳಡಿಯಲ್ಲಿ ಬರುವುದಿಲ್ಲ ಹೀಗಾಗಿ ಇವುಗಳು ಜಿಎಸ್​ಟಿ (GST)ವ್ಯಾಪ್ತಿಗೆ ಸೇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಮತ್ತು ಶಿವಶಂಕರೇಗೌಡ ಅವರ ಪೀಠವು ಜನವರಿ 16 ರಂದು ಈ ತೀರ್ಪು ನೀಡಿತು. ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಅಥವಾ ಗ್ರಾಹಕರಿಗೆ  ಗಿಫ್ಟ್​ ವೋಚರ್​ಅಥವಾ ಕ್ಯಾಶ್​ಬ್ಯಾಕ್​ ಅನ್ನು ಪ್ರೋತ್ಸಾಹಕವಾಗಿ ನೀಡುತ್ತಾರೆ ಹಾಗಾಗಿ ಅದನ್ನು ಜಿಎಸ್​ಟಿ ವ್ಯಾಪ್ತಿಗೆ ತರಬಾರದು ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರು, ಮೌಲ್ಯಮಾಪಕರು, M/s ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್, ಗಿಫ್ಟ್ ವೋಚರ್‌ಗಳು, ಕ್ಯಾಶ್ ಬ್ಯಾಕ್ ವೋಚರ್‌ಗಳು ಮತ್ತು ಇ-ವೋಚರ್‌ಗಳನ್ನು ಒಳಗೊಂಡಂತೆ ಪ್ರಿ-ಪೇಯ್ಡ್​ ಪೇಮೆಂಟ್ ಇನ್​ಸ್ಟ್ರುಮೆಂಟ್​ಗಳನ್ನು ವಿತರಕರುಗಳಿಂದ ಪಡೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಗ್ರಾಹಕರಿಗೆ ಪೂರೈಸುತ್ತಾರೆ.

ಮತ್ತಷ್ಟು ಓದಿ: Paytm Wallet Transit Card: ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್​ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಗ್ರಾಹಕರು ತಮ್ಮ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಅಥವಾ ಪ್ರಚಾರದ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಈ ಗಿಫ್ಟ್​ ಕೂಪನ್​ಗಳನ್ನು ನೀಡಲಾಗುತ್ತದೆ. ಡೆಬಿಟ್ ಹಾಗೂ ಕ್ರೆಡಿಟ್​ ಕಾರ್ಡ್​ಗಳ ಪ್ರಾಮುಖ್ಯತೆಯನ್ನು ಅಲ್ಲಗಳೆಯುವಂತಿಲ್ಲ, ಕೆಲವೊಂದು ಮಳಿಗೆಗಳಲ್ಲಿ ಇಂತಿಷ್ಟು ಮೌಲ್ಯದ ವಸ್ತುಗಳನ್ನು ಕೊಂಡರೆ ಒಂದಷ್ಟು ಹಣವನ್ನು ಕ್ಯಾಶ್​ಬ್ಯಾಕ್​ ರೂಪದಲ್ಲಿ ನೀಡಲಾಗುತ್ತದೆ. ಕೆಲವೊಂದು ಮಳಿಗೆಗಳಲ್ಲಿ ಕ್ರೆಡಿಟ್ ಕಾರ್ಡ್​ ಬಳಕೆ ಮಾಡಿ ವಸ್ತುಗಳನ್ನು ಕೊಂಡರೆ ಕ್ಯಾಶ್​ಬ್ಯಾಕ್ ಸಿಗುತ್ತದೆ.

ಇನ್ನೂ ಕೆಲವು ಕಡೆ ಇಂತಿಷ್ಟು ದಿನದೊಳಗೆ ಆ ವಸ್ತುಗಳನ್ನು ಖರೀದಿಸಿದರೆ ಇಂತಿಷ್ಟು ಹಣವನ್ನು ಹಿಂದಿರುಗಿಸಲಾಗುವುದು ಎಂದು ಫಲಕ ಅಳವಡಿಸಿರುತ್ತಾರೆ. ಇನ್ನೂ ಕೆಲವು ಕಡೆ ಗಿಫ್ಟ್​ ವೋಚರ್​ಗಳನ್ನು ನೀಡಿ ಯಾವುದೋ ಅವಧಿಯೊಳಗೆ ಖರೀದಿಸಬೇಕು ಎಂದು ಗಡುವು ನೀಡಿರುತ್ತಾರೆ. ಆದರೆ ಇದ್ಯಾವುದೂ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ ಅದಕ್ಕೆ ವಿನಾಯಿತಿ ನೀಡಲಾಗುವುದು ಎಂದು ಕೋರ್ಟ್​ ಹೇಳಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್