ಯಾರಿಗೇ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ: ಬೊಮ್ಮಾಯಿ ಅಚ್ಚರಿ ಹೇಳಿಕೆ

|

Updated on: Jun 10, 2024 | 7:54 PM

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನೂತನ ಸಂಸದ ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಯಾರಿಗೇ ಟಿಕೆಟ್​ ಕೊಟ್ಟರೂ ನನಗೂ ಶಿಗ್ಗಾಂವಿ ಕ್ಷೇತ್ರಕ್ಕೂ ಇರುವ ಅವಿನಾಭವ ಬಾಂಧವ್ಯಕ್ಕೆ ಧಕ್ಕೆ ಬರಲ್ಲ. ನನ್ನ ಮಗನ ಹೆಸರು ಕೇಳಿ ಬರೋದು ಸಹಜ. ಆದರೆ ಆಥರದ ಪ್ರಸ್ತಾವನೆ ನಮ್ಮ ಕಡೆಯಿಂದ ಇಲ್ಲ ಎಂದಿದ್ದಾರೆ.

ಯಾರಿಗೇ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ: ಬೊಮ್ಮಾಯಿ ಅಚ್ಚರಿ ಹೇಳಿಕೆ
ಯಾರಿಗೆ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ: ಬೊಮ್ಮಾಯಿ ಅಚ್ಚರಿ ಹೇಳಿಕೆ
Follow us on

ಬೆಂಗಳೂರು, ಜೂನ್​ 10: ಶಿಗ್ಗಾಂವಿ ಕ್ಷೇತ್ರಕ್ಕೆ (Shiggaon) ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷ ಯಾರನ್ನೇ ನಿಲ್ಲಿಸಿದರೂ ನಮ್ಮ ಬೆಂಬಲ ಇದೆ ಎಂದು ನೂತನ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಹೆಸರು ಕೇಳಿ ಬರೋದು ಸಹಜ. ಆದರೆ ಆಥರದ ಪ್ರಸ್ತಾವನೆ ನಮ್ಮ ಕಡೆಯಿಂದ ಇಲ್ಲ. ಇದರಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಉದಾಸಿಗೇ ಕೊಡಲಿ, ಯಾರಿಗೇ ಕೊಡಲಿ ಅದು ಪಕ್ಷಕ್ಕೆ ಬಿಟ್ಟಿದ್ದು. ಯಾರಿಗೇ ಟಿಕೆಟ್​ ಕೊಟ್ಟರೂ ನನಗೂ ಶಿಗ್ಗಾಂವಿ ಕ್ಷೇತ್ರಕ್ಕೂ ಇರುವ ಅವಿನಾಭವ ಬಾಂಧವ್ಯಕ್ಕೆ ಧಕ್ಕೆ ಬರಲ್ಲ. ಹಾಗಾಗಿ ಯಾರಿಗೆ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ. ನಾನು ಕ್ಷೇತ್ರದ ಜನತೆಯ ಮನೆ ಮಗ, ಅಣ್ಣ, ತಮ್ಮ, ಅವರ ಮನೆಯ ಸದಸ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಥಣಿಯಲ್ಲಿ ಬಿಜೆಪಿಗೆ ಲೀಡ್​: ಜಾರಕಿಹೊಳಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಲಕ್ಷ್ಮಣ ಸವದಿ

ನಾವೆಲ್ಲಾ ಮುಖ್ಯಮಂತ್ರಿಯಾಗಿ ಕೆಲಸವನ್ನ ಮಾಡಿದ್ದೇವೆ. ಬೇರೆಯವರಿಗೆ ಅವಕಾಶ ನೀಡೋಣ. ಮೈತ್ರಿ ಇರೋದ್ರಿಂದ ನಾವು ಹಿರಿಯರು ಸಹಕರಿಸಬೇಕಿದೆ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅಂತ ಕೆಲಸ ಮಾಡಿದ್ವಿ. ನಮ್ಮ ಆಕಾಂಕ್ಷೆ ಯಾವುದೂ ಇಲ್ಲ ಎಂದಿದ್ದಾರೆ.

ಕೇಂದ್ರ ಸಂಪುಟದಲ್ಲಿ ಉತ್ತರ ಕನ್ನಡ ಭಾಗಕ್ಕೆ ಪ್ರಾತಿನಿಧ್ಯ ಇಲ್ಲದ ವಿಚಾರವಾಗಿ ಮಾತನಾಡಿದ್ದು, ನಮ್ಮ‌ ಪಕ್ಷ ದೇಶದ ಹಿತದೃಷ್ಟಿಯಿಂದ ಆಲೋಚಿಸುತ್ತದೆ. ಪ್ರಲ್ಹಾದ್​​ ಜೋಶಿ ಉತ್ತರ ಕರ್ನಾಟಕದವರು, ಸಮರ್ಥರು. ಜೋಶಿ ಈಗಾಗಲೇ 5 ವರ್ಷ ಕೆಲಸವನ್ನ ಮಾಡಿದ್ದಾರೆ. ಕ್ಯಾಬಿನೆಟ್ ವಿಸ್ತರಣೆಗೆ 2ನೇ ಹಂತ ಅನ್ನೋದು ಇಲ್ಲ. ಸಮಗ್ರ ದೇಶ ನೋಡಿ ಸಚಿವ ಸಂಪುಟ ಮಾಡಲಾಗುತ್ತೆ. ಕೆಲ ರಾಜ್ಯಗಳಲ್ಲಿ SC, ST,‌ OBCಗೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಕೇವಲ ರಾಜಕೀಯ ಲಾಭಕ್ಕೆ ಮಾಡಲಾಗಿದೆ

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಮುಂದುವರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಗ್ಯಾರಂಟಿ ಬಗ್ಗೆ ಆಡಳಿತ ಪಕ್ಷದಲ್ಲಿ ಕೆಲ ಗೊಂದಲ‌ ಇವೆ. ರಾಜ್ಯ ಸರ್ಕಾರ ಗೊಂದಲಗಳಿಗೆ ಸ್ಪಷ್ಟನೆಯನ್ನ ಕೊಡ್ಬೇಕು. ಅದನ್ನ ನಾವು ಪ್ರಶ್ನೆ ಮಾಡುವುದಿಲ್ಲ. ಗ್ಯಾರಂಟಿ ಕೇವಲ ರಾಜಕೀಯ ಲಾಭಕ್ಕೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆ, 27.5 ಲಕ್ಷ ರೈತರಿಗೆ ಬರ ಪರಿಹಾರ: ಕೃಷಿ ಸಚಿವ ಮಾಹಿತಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಪ್ರಕರಣವಾಗಿ ಮಾತನಾಡಿದ್ದು, ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೆಸರು ಕೇಳಿ ಬಂದಿದೆ. ಆರೋಪ ಸಾಬೀತಾದ್ರೆ ರಾಜೀನಾಮೆ ನೀಡಬೇಕಾಗುತ್ತೆ. ಆದರೆ, ಅವರು ನಾನು ನಿರಪರಾಧಿ ಎಂದು ಹೇಳಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.