ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆ, 27.5 ಲಕ್ಷ ರೈತರಿಗೆ ಬರ ಪರಿಹಾರ: ಕೃಷಿ ಸಚಿವ ಮಾಹಿತಿ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸಚಿವ ಕೃಷ್ಣ ಭೈರೇಗೌಡ, ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದಿದ್ದಾರೆ. ಅದೇ ರೀತಿಯಾಗಿ ಮೇ ಮೊದಲ ವಾರ 27.5 ಲಕ್ಷ ರೈತರಿಗೆ 2,451 ಕೋಟಿ ರೂ. ಬರ ಪರಿಹಾರ ನೀಡಿದ್ದೇವೆ. ನೀರು ಬರದೆ ಬೆಳೆಹಾನಿ ಆದ ರೈತರಿಗೆ ಪರಿಹಾರ ಕೊಡಲು ತೀರ್ಮಾನಿಸಿದ್ದೇವೆ ಎಂದರು.

ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆ, 27.5 ಲಕ್ಷ ರೈತರಿಗೆ ಬರ ಪರಿಹಾರ: ಕೃಷಿ ಸಚಿವ ಮಾಹಿತಿ
ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆ, 27.5 ಲಕ್ಷ ರೈತರಿಗೆ ಬರ ಪರಿಹಾರ: ಕೃಷಿ ಸಚಿವ ಮಾಹಿತಿ
Follow us
ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 10, 2024 | 6:20 PM

ಬೆಂಗಳೂರು, ಜೂನ್​ 10: 5 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾದರೆ, 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ (Rain) ಆಗಿದೆ. ಆ ಮೂಲಕ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷದ ಮುಂಗಾರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಹೀಗಾಗಿ ಮುಂದಿನ 15 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.

ಬರ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬರ ಪರಿಹಾರವನ್ನು ಸುಪ್ರೀಂ ಕೋರ್ಟ್​ಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ಮೊದಲ ವಾರ 27.5 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ. 7 ಲಕ್ಷ ರೈತರು ಹೊಸದಾಗಿ ಮಳೆಯಾಶ್ರಿತ ಬೆಳೆ ಹೊಂದಿದ್ದರು. ನೀರು ಬರದೆ ಬೆಳೆಹಾನಿ ಆದ ರೈತರಿಗೆ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಬೆಳಗಾವಿ, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದುವರೆದ ಮಳೆ ಆರ್ಭಟ: ಮರ ಬಿದ್ದು ಯುವಕ ಸಾವು, ಅಲ್ಲಲ್ಲಿ ಅಸ್ತವ್ಯಸ್ತ

ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಿದಂತಾಗುತ್ತೆ. 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

2800 ರೂ. ಅಥವಾ 3000 ರೂ. ಬರಬಹುದು. ಇದು ಜೀವನೋಪಾಯ‌ ನಷ್ಟದ ಪರಿಹಾರ. ಇದು ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ. ಹಿಂದಿನ ವರ್ಷಗಳಲ್ಲಿ ಕಲಬುರ್ಗಿ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಪರಿಹಾರದಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಗಳೂರು ಗ್ರಾಮಾಂತರ ಕ್ಷೇತ್ರದ ಜನ ಬದಲಾವಣೆ ಬಯಸಿ ಮತ ಹಾಕಿದ್ದಾರೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಸೋಲು ವಿಚಾರವಾಗಿ ಮಾತನಾಡಿದ್ದು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾರ್ಯಾರೋ ಸೋತಿದ್ದಾರೆ. ಶಾಂತವೇರಿ ಗೋಪಾಲಗೌಡ, ನಿಜಲಿಂಗಪ್ಪ ಸೇರಿ ಹಲವರು ಸೋತಿದ್ದಾರೆ. ಹಲವು ವಿಷಯಗಳ ಆಧಾರದಲ್ಲಿ ಜನ ಮತ ಹಾಕಿರುತ್ತಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನತೆ ಯೋಚಿಸಿದ್ದಾರೆ.

ಇದನ್ನೂ ಓದಿ: Bengaluru Rain: ಕೆಆರ್ ಮಾರುಕಟ್ಟೆ, ಲಾಲ್​ಬಾಗ್ ಸೇರಿದಂತೆ ಬೆಂಗಳೂರಿನ ಹಲವೆಡೆ ಮಳೆ

ಡಿ.ಕೆ.ಸುರೇಶ್ ಶಾಸಕರಿಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಬದಲಾವಣೆ ಬಯಸಿ ಮತ ಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರ ನಿರ್ಧಾರ ಗೌರವಿಸುತ್ತೇವೆ ಎಂದಿದ್ದಾರೆ.

ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಗ್ಯಾರಂಟಿಗಳು ರಾಜಕೀಯವಾಗಿ ಅನುಕೂಲ ಆಗಿದೆಯೋ ಇಲ್ವೋ ಗೊತ್ತಿಲ್ಲ. ನಾವು 10ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದೆವು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ
ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ರಾಣಾ ಆರತಕ್ಷತೆಗೆ ಆಗಮಿಸಿದ ನಟ ದರ್ಶನ್
ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ರಾಣಾ ಆರತಕ್ಷತೆಗೆ ಆಗಮಿಸಿದ ನಟ ದರ್ಶನ್