ಏಕೆ ಪ್ರದೀಪ್​ ಈಶ್ವರ್​ ರಾಜೀನಾಮೆ ಕೊಡಿಸಿಲ್ಲವೆಂದು ಕೊಲೆಗೆ ಯತ್ನ: ಸುಧಾಕರ್ ಬೆಂಬಲಿಗರ ವಿರುದ್ಧ ಆರೋಪ

ಲೋಕಸಭೆ ಚುನಾವಣೆಯಲ್ಲಿ ಸುಧಾಕರ್ ಗೆದ್ದರೆ ರಾಜೀನಾಮೆ ಕೊಡ್ತೇನೆಂದು ಪ್ರದೀಪ್ ಈಶ್ವರ್​ ಹೇಳಿಕೆ ವಿಚಾರವಾಗಿ ರಾಜ್ಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಈ ವಿಚಾರವಾಗಿ ಏಕೆ ಪ್ರದೀಪ್​ ಈಶ್ವರ್​ ರಾಜೀನಾಮೆ ಕೊಡಿಸಿಲ್ಲ ಎಂದು ಬಿಯರ್ ಬಾಟಲ್​​​ನಿಂದ ತಿವಿದು ಕೊಲೆಗೆ ಯತ್ನಿಸಿರುವುದಾಗಿ ಸಂಸದ ಡಾ.ಸುಧಾಕರ್ ಬೆಂಬಲಿಗರ ವಿರುದ್ಧ ಆರೋಪ ಮಾಡಲಾಗಿದೆ.

ಏಕೆ ಪ್ರದೀಪ್​ ಈಶ್ವರ್​ ರಾಜೀನಾಮೆ ಕೊಡಿಸಿಲ್ಲವೆಂದು ಕೊಲೆಗೆ ಯತ್ನ: ಸುಧಾಕರ್ ಬೆಂಬಲಿಗರ ವಿರುದ್ಧ ಆರೋಪ
ಏಕೆ ಪ್ರದೀಪ್​ ಈಶ್ವರ್​ ರಾಜೀನಾಮೆ ಕೊಡಿಸಿಲ್ಲವೆಂದು ಕೊಲೆಗೆ ಯತ್ನ: ಸುಧಾಕರ್ ಬೆಂಬಲಿಗರ ವಿರುದ್ಧ ಆರೋಪ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Jun 10, 2024 | 7:11 PM

ಚಿಕ್ಕಬಳ್ಳಾಫುರ, ಜೂನ್ 10: ಲೋಕಸಭೆ ಚುನಾವಣೆಯಲ್ಲಿ ಸುಧಾಕರ್ ಗೆದ್ದರೆ ರಾಜೀನಾಮೆ ಕೊಡ್ತೇನೆಂದು ಪ್ರದೀಪ್ ಈಶ್ವರ್ (Pradeep Eshwar)​ ಹೇಳಿಕೆ ವಿಚಾರವಾಗಿ ಸದ್ಯ ಕೊಲೆ ಆರೋಪ ಕೇಳಿಬಂದಿದೆ. ಏಕೆ ಪ್ರದೀಪ್​ ಈಶ್ವರ್​ ರಾಜೀನಾಮೆ ಕೊಡಿಸಿಲ್ಲ ಎಂದು ಬಿಯರ್ ಬಾಟಲ್​​​ನಿಂದ ತಿವಿದು ಕೊಲೆಗೆ ಯತ್ನಿಸಿರುವುದಾಗಿ ಸಂಸದ ಡಾ.ಸುಧಾಕರ್ (K. Sudhakar) ಬೆಂಬಲಿಗರ ವಿರುದ್ಧ ಆರೋಪ ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗೋಪಾಲ ಎಂಬುವವರ ಮೇಲೆ ಚಂದ್ರಪ್ಪ, ಅರ್ಜುನ್ ಹಲ್ಲೆ ಮಾಡಿದ್ದು, ಪ್ರದೀಪ್ ಈಶ್ವರ್​ ಕರೆಸುವಂತೆ ಧಮ್ಕಿ ಹಾಕಿದ ಆರೋಪ ಮಾಡಲಾಗಿದೆ. ಈ ಕುರಿತಾಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಸೆಕ್ಷನ್ 324, 504, 506, 34ರಡಿ ಪ್ರಕರಣ ದಾಖಲಾಗಿದೆ.

ಫಾಲ್ಸ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಬಿದ್ದು ಯುವಕ ಸಾವು

ಚಿಕ್ಕಮಗಳೂರು: ಫಾಲ್ಸ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಬಿದ್ದು ಯುವಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್​ನಲ್ಲಿ ದುರಂತ ಸಂಭವಿಸಿದೆ. ಹೈದರಾಬಾದ್ ಮೂಲದ ಪ್ರವಾಸಿಗ ಶ್ರವಣ್(25) ದುರ್ಮರಣ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣು

ಬೆಳಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್​ಗೆ ಹೈದರಾಬಾದ್​​ನ ಇಬ್ಬರು ಯುವಕರು ಬಂದಿದ್ದರು. ಫಾಲ್ಸ್​ನಲ್ಲಿ ಸೆಲ್ಫಿ ತೆಗೆಯುವ ವೇಳೆಯಲ್ಲಿ ಓರ್ವನ ಕಾಲು ಜಾರಿದ್ದು, ಕಡಿಮೆ ಪ್ರಮಾಣದ ನೀರಿದ್ದ ಹಿನ್ನೆಲೆ ಬಂಡೆಗೆ ತಲೆ ಬಡಿದು ಮೃತಪಟ್ಟಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮರ ಉರುಳಿಬಿದ್ದು ಗಾಯಗೊಂಡಿದ್ದ ಮತ್ತೋರ್ವ ಸವಾರ ಸಾವು

ಬೆಳಗಾವಿ: ಮರ ಉರುಳಿಬಿದ್ದು ಗಾಯಗೊಂಡಿದ್ದ ಮತ್ತೋರ್ವ ಸವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಬಳಿ ನಿನ್ನೆ ನಡೆದಿದೆ. ವಿಠ್ಠಲ್ ತಳವಾರ(20) ಮೃತ ಸವಾರ.

ಇದನ್ನೂ ಓದಿ: ಮೈಸೂರು; ಮಾರಕಾಸ್ತ್ರಗಳಿಂದ ಕೊಚ್ಚಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿ ಕೊಲೆ, ಆಪ್ತ ಸಹಾಯಕ ಅರೆಸ್ಟ್

ಬೈಕ್​ನಲ್ಲಿ ಮೂವರು ತೆರಳ್ತಿದ್ದಾಗ ಬೃಹತ್ ಮರ ಉರುಳಿ ಬಿದ್ದಿತ್ತು. ಸೋಮನಾಥ್ ಮುಚ್ಚಂಡಿಕರ್(21) ಸ್ಥಳದಲ್ಲೇ ಮೃತಪಟ್ಟಿದ್ದ. ಸ್ವಪ್ನಿಲ್ ದೇಸಾಯಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ