ಬೆಂಗಳೂರು, ಅಕ್ಟೋಬರ್ 11: ಫೋಟೋ ತೆಗೆಯುವಾಗ ಅಡ್ಡಬಂದರೆಂದು ಹೆಚ್ಎಎಲ್ ಉದ್ಯೋಗಿಗೆ (HAL employee) ರಕ್ತ ಬರುವಂತೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವಂತಹ ಘಟನೆ ಸೆ.29ರಂದು ಕಬ್ಬನ್ಪಾರ್ಕ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಭಾರತದ ವ್ಯಕ್ತಿಯಿಂದ ಹೆಚ್ಎಎಲ್ ಡಿಫೆನ್ಸ್ ವಿಭಾಗದ ಟೆಕ್ನಿಷಿಯನ್ ಆಗಿರುವ ಉದ್ಯೋಗಿ ರವಿಕಿರಣ್ಗೆ ನಿಂದಿಸಿ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕಬ್ಬನ್ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೆ.29ರಂದು ಮಧ್ಯಾಹ್ನ 3.30ಕ್ಕೆ ಕಬ್ಬನ್ಪಾರ್ಕ್ಗೆ ಬಂದಿದ್ದ ರವಿಕಿರಣ್, ಉತ್ತರ ಭಾರತದ ವ್ಯಕ್ತಿ ಫೋಟೋ ತೆಗೆಯುವಾಗ ಅಡ್ಡಹೋಗಿದ್ದರು. ನಾನು ಫೋಟೋ ತೆಗೆಯುವಾಗ ನೀನ್ಯಾಕೆ ಅಡ್ಡ ಬಂದೆ ಎಂದು ನಿಂದಿಸಿ, ಪಾರ್ಕ್ ನಿಮ್ಮಪ್ಪಂದ ಎಂದು ಬೈಯ್ದು ಕೈಯಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಿಕಿತ್ಸೆ ಪಡೆದು ಕಬ್ಬನ್ಪಾರ್ಕ್ ಠಾಣೆಗೆ ರವಿಕಿರಣ್ ದೂರು ನೀಡಿದ್ದರು.
ಕೋಲಾರ: ಕೋಲಾರ ತಾಲೂಕಿನ ವೇಮಗಲ್ ಬಳಿ ಸೂರ್ಯ ಮಲ್ಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಸುಮಾರು 50ರಿಂದ 60 ವರ್ಷದ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ವೇಮಗಲ್ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೊಪ್ಪಳ: ಬಹಿರ್ದೆಸೆಗೆ ಹೋಗಿದ್ದ ಬಾಲಕ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿ ಪಟ್ಟಣದ ಹನ್ನೊಂದು ವರ್ಷದ ವಿನಯ್ ಮೃತ ಬಾಲಕ.
ಇದನ್ನೂ ಓದಿ: ರಾಮನಗರ: ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣು
ಪಟ್ಟಣದ ಹೊರವಲಯದಲ್ಲಿರುವ ಕೆರೆ ಸಮೀಪ ವಿನಯ್ ಬಹಿರ್ದೆಸೆಗೆ ಹೋಗಿದ್ದ. ಈ ಸಮಯದಲ್ಲಿ ವಿದ್ಯುತ್ ತಂತಿ ಆತನ ಮೈಮೇಲೆ ಬಿದ್ದಿದೆ. ಇನ್ನು ದುರ್ಘಟನೆಗೆ ಜೆಸ್ಕಾಂ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.