ಬಾಗಲಕೋಟೆ, ಏಪ್ರಿಲ್ 29: ಕರ್ನಾಟಕ(Karnataka)ದಲ್ಲಿ ಕಾಂಗ್ರೆಸ್(Congress) ಸರ್ಕಾರವನ್ನು ನಿರ್ವಹಿಸುತ್ತಿಲ್ಲ ವಸೂಲಿ ಗ್ಯಾಂಗ್ನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಇಂದು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಲೂಟಿಕೋರ ಸರ್ಕಾರ, ಈ ಸರ್ಕಾರದ ಕೈಗೆ ಇಂಥಾ ದೊಡ್ಡ ದೇಶವನ್ನು ಕೊಡಬೇಕೆ? ಎಂದು ಜನರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಲೂಟಿ ಮಾಡುವ ಎಟಿಎಂ ಮಾಡಿಕೊಂಡಿದ್ದು, ಕಡಿಮೆ ಸಮಯದಲ್ಲಿ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ. ಮುಂದೊಂದು ದಿನ ಸರ್ಕಾರಕ್ಕೆ ತನ್ನ ನೌಕರರಿಗೆ ಸಂಬಳ ಕೊಡಲೂ ಹಣವಿರುವುದಿಲ್ಲ, ಜತೆಗೆ ನಿಮ್ಮ ಮಕ್ಕಳನ್ನೂ ಹಸಿವಿನಿಂ ನರಳುವಂತೆ ಮಾಡುವುದರಲ್ಲಿ ಸಂಶಯವಿಲ್ಲ, ಕಾಂಗ್ರೆಸ್ ಮೊದಲೇ ಪ್ಲ್ಯಾನ್ ಮಾಡಿ ವಸೂಲಿ ಮಾಡಿ ಸರ್ಕಾರದ ಖಜಾನೆಯಿಂದ ತನ್ನ ತಿಜೋರಿಯನ್ನು ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಕಾಂಗ್ರೆಸ್ ಕರ್ನಾಟಕದಲ್ಲಿ 2ಜಿ ಹಗರಣ ಮಾದರಿಯ ಲಕ್ಷಾಂತರ ಕೋಟಿಯ ಸ್ಕ್ಯಾಮ್ ಮಾಡುವ ಕನಸು ಕಾಣುತ್ತಿದೆ.
ಕರ್ನಾಟಕದ ಲೂಟಿ ಮಾಡುವವರಿಗೆ 7 ಮೇ ಶಿಕ್ಷೆ ಸಿಗಬೇಕು, ಕಾಂಗ್ರೆಸ್ನ ಭ್ರಷ್ಟಾಚಾರವನ್ನು ಅಂತ್ಯಗೊಳಿಸಬೇಕು ಎಂದು ಮೋದಿ ಹೇಳಿದರು.
ಮತ್ತಷ್ಟು ಓದಿ: ಬಾಗಲಕೋಟೆ ಯುವಕನಿಂದ ಮೋದಿಗೆ ರಕ್ತದಿಂದ ಬಿಡಿಸಿದ ಭಾವಚಿತ್ರ ಉಡುಗೊರೆ
ಮೋದಿ 10 ವರ್ಷಗಳಲ್ಲಿ ಕತ್ತಲಿನಲ್ಲಿದ್ದ 18 ಸಾವಿರ ಹಳ್ಳಿಗಳನ್ನು ವಿದ್ಯುತ್ ದೀಪಗಳಿಂದ ಬೆಳಕಿದ್ದಾರೆ. ಶೇ,16ರಷ್ಟು ಜನರಿಗೆ ಮಾತ್ರ ಈ ಮೊದಲು ಜಲಜೀವನ್ ಮಿಷನ್ ಅಡಿ ನೀರು ತಲುಪುತ್ತಿತ್ತು ಆದರೆ ಈಗ ಐದು ವರ್ಷಗಳಲ್ಲಿ ಶೇ.75ರಷ್ಟು ಜನರಿಗೆ ನೀರು ತಲುಪುತ್ತಿದೆ.
ನಮ್ಮ ಸಂಕಲ್ಪ ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಟಾಪ್ 3 ಆರ್ಥಿಕತೆಯನ್ನಾಗಿಸುವುದು, ಭಾರತವನ್ನು ವಿಶ್ವದ ಮೂರನೇ ಆರ್ಥಿಕತೆ ಮಾಡುವ ತಾಕತ್ತು ನಿಮ್ಮ ಮತಕ್ಕಿದೆ ಎಂದರು.
2024ರ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ, ಈ ಚುನಾವಣೆಯು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದ ಚುನಾವಣೆಯಾಗಿದೆ. ಈ ಚುನಾವಣೆ ಸ್ವಾವಲಂಬಿ ಭಾರತದ ಸಾಧನೆಗಾಗಿ ನಡೆಯುವ ಚುನಾವಣೆಯಾಗಿದೆ ಎಂದರು.
ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ನಮ್ಮ ಸಂಕಲ್ಪ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವನ್ನು ಕೌಶಲ್ಯ ಕೇಂದ್ರವನ್ನಾಗಿ ಮಾಡುತ್ತೇವೆ ಎಂದರು.
ನಮ್ಮ ಸರ್ಕಾರ ಕರ್ನಾಟಕದಲ್ಲಿ ಹಲವು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಈ ಪೈಕಿ ಒಂದು ವಿಜಯಪುರದಲ್ಲೂ ಸಿದ್ಧವಾಗುತ್ತಿದೆ. ಭಾಗಲ್ಪುರ ರೈಲು ನಿಲ್ದಾಣವನ್ನು ಅಮೃತ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಭಾಗಲ್ಪುರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಸಹ ವಿಸ್ತರಿಸಲಾಗುತ್ತಿದೆ. ಇದು ಬಾದಾಮಿ ಪಟ್ಟದಕಲ್ಲು ಮತ್ತು ಐಹೊಳೆಯಂತಹ ಐತಿಹಾಸಿಕ ಸ್ಥಳಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Mon, 29 April 24