AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ನೋಟ್​ ಎಕ್ಸ್​ಚೇಂಜ್​ ದಂಧೆ: 3 ಕೋಟಿಗೆ 80 ಲಕ್ಷ ಕಮಿಷನ್​!

ವಿಡಿಯೋ ಜೊತೆಗೆ ಕೋಡ್​ ಕೂಡ ಕಳುಹಿಸಲಾಗುತ್ತಿತ್ತು. ಕೊಡ್ ಸಮೇತ ವಿಡಿಯೋ ಬಂದ ಬಳಿಕ ವ್ಯವಹಾರ ಮಾಡುತ್ತಿದ್ದರು ಎನ್ನುವ ವಿಚಾರ ಸದ್ಯ ಬಯಲಾಗಿದೆ.

ಬೆಂಗಳೂರಲ್ಲಿ ನೋಟ್​ ಎಕ್ಸ್​ಚೇಂಜ್​ ದಂಧೆ: 3 ಕೋಟಿಗೆ 80 ಲಕ್ಷ ಕಮಿಷನ್​!
ವಶಕ್ಕೆ ಪಡೆಯಲಾದ ಹಣ
Follow us
ರಾಜೇಶ್ ದುಗ್ಗುಮನೆ
| Updated By: ಪೃಥ್ವಿಶಂಕರ

Updated on:Jan 02, 2021 | 9:13 AM

ಬೆಂಗಳೂರು: ‘ಕೇಂದ್ರ ಸರ್ಕಾರದಿಂದ 2000 ಮುಖಬೆಲೆಯ ನೋಟ್ ಬ್ಯಾನ್ ಆಗಲಿದೆ ಹುಷಾರ್!’- ಹೀಗೊಂದು ಎಚ್ಚರಿಕೆ ನೀಡುತ್ತಾ ಯಾರೂ ಊಹಿಸಿಕೊಳ್ಳದ ದಂದೆ ನಡೆಸುತ್ತಿದ್ದ ಜಾಲವೊಂದು ಬೆಂಗಳೂರಲ್ಲಿ ಸಿಕ್ಕಿಬಿದ್ದಿದೆ. ಅಷ್ಟಕ್ಕೂ ಏನಿದು ಜಾಲ? ಇದರ ಹಿಂದೆ ಯಾರಿದ್ದರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

2000 ರೂಪಾಯಿ ನೋಟಿಗೆ 500 ರೂಪಾಯಿ ನೀಡುವುದು ಈ ದಂಧೆ ಮಾಡುವವರ ಕೆಲಸ. ಒಂದೇ ದಿನದಲ್ಲಿ 2000 ಮುಖ ಬೆಲೆಯ ಸುಮಾರು ಮೂರು ಕೋಟಿ ಹಣವನ್ನು 500 ರೂಪಾಯಿಗೆ ಎಕ್ಸ್​​ಚೆಂಜ್ ಮಾಡುತ್ತಿದ್ದರು. ಇಷ್ಟೇ ಅಲ್ಲ ಇದಕ್ಕಾಗಿ ದಂಧೆಕೋರರು ಬರೋಬ್ಬರಿ 80 ಲಕ್ಷ ಕಮಿಷನ್ ಪಡೆಯುತ್ತಿದ್ದರಂತೆ! ನೋಟ್​ ಬ್ಯಾನ್​ ಆಗುತ್ತದೆ ಎಂದು ಬೆದರಿಸಿ ಇವರು ಹಣ ಮಾಡುತ್ತಿದ್ದರು.

ಈ ದಂಧೆ ಕುರಿಂತೆ ಪಬ್​ ಮ್ಯಾನೇಜರ್​ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮ್ಯಾನೇಜರ್ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಾಹಿತಿ ನೀಡಿದ ಪಬ್​ ಮ್ಯಾನೇಜರ್ ಅವರನ್ನು ಪೊಲೀಸರು ಹಿಂಬಾಲಿಸಿದ್ದರು.

ಮೊದಲಿಗೆ ಮಾರತ್ ಹಳ್ಳಿ ಕಾಫಿಡೇನಲ್ಲಿ ಇಬ್ಬರು ಮಧ್ಯವರ್ತಿಗಳು ಪಬ್​ ಮ್ಯಾನೇಜರ್​​ಗೆ ಸಿಕ್ಕಿದ್ದರು. ಪಬ್ ಮ್ಯಾನೇಜರ್ ಹಿಂಬದಿಯಿಂದ ಪೊಲೀಸರು ಫಾಲೋ ಮಾಡಿದ್ದರು. ಮಧ್ಯವರ್ತಿಗಳು ಪಬ್​ ಮ್ಯಾನೇಜರ್​ನನ್ನು ಓಲ್ಡ್ ಏರ್ಪೋಟ್, ಕೆಆರ್ ಪುರಂ ಮೂಲಕ ಎರ್​ಪೋರ್ಟ್​ ಕಡೆಗೆ ಕರೆದೊಯ್ದಿದ್ದರು. ಮಾರ್ಗದಲ್ಲಿ ಸಿಕ್ಕ ಮತ್ತೋರ್ವ ಮಧ್ಯವರ್ತಿ ಜೊತೆ ಇವರು ಚರ್ಚೆ ಮಾಡಿದ್ದರು. ಚರ್ಚೆ ವೇಳೆ ದಾಳಿ ಮಾಡಿ ಲೋಹಿತ್, ರವಿಕುಮಾರ್ ಹಾಗೂ ಸುದರ್ಶನ್ ಎಂಬ ಮೂವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದರು. ದಂಧೆಯ ಕಿಂಗ್​ ಪಿನ್​ ಹಿಡಿಯಲು ಪೊಲೀಸರು ಇವರನ್ನೇ ಬಳಕೆ ಮಾಡಿಕೊಂಡಿದ್ದರು.

ಬಂಧಿತರು

ಮೂವರು ಮಧ್ಯವರ್ತಿಗಳನ್ನು ಕರೆದುಕೊಂಡು ಬೆಂಗಳೂರಿನ ಚಿಕ್ಕಪೇಟೆಯ ಏರಿಯಾಗೆ ಮಾರತ್​ಹಳ್ಳಿ ಪೊಲೀಸರು ಬಂದಿದ್ದರು. ಈ ವೇಳೆ 10ರೂನ ಹರಿದ ನೋಟ್​ಅನ್ನು ವ್ಯಕ್ತಿಯೋರ್ವ ಇವರಿಗೆ ಕೊಟ್ಟಿದ್ದ. ಬಳಿಕ ಆಟೋ ಶಿವು ಎಂಬಾತನ ಬಳಿ ಮಫ್ತಿಯಲ್ಲಿದ್ದ ಪೊಲೀಸರನ್ನು ಕರೆದೊಯ್ಯಲಾಯಿತು. ಅಲ್ಲಿಂದ ಹರಿದ 10ರೂ. ನೋಟ್ ಹಿಡಿದು ಹೊರಟ ಪೊಲೀಸರನ್ನು ಮಧ್ಯವರ್ತಿಗಳು ಚಿಕ್ಕಪೇಟೆ ಸುತ್ತಿಸಿದ್ದರು. ಮೂರು ಕಾರುಗಳನ್ನು ಕೂಡ ಬದಲಾಯಿಸಿದ್ದರು. ಅಂತಿಮವಾಗಿ ಚಿಕ್ಕಪೇಟೆಯ ಒಂದು ಮನೆಗೆ ಮಧ್ಯವರ್ತಿಗಳು ಇವರನ್ನು ಕರೆದೊಯ್ದಿದ್ದರು.

ಈವೇಳೆ ಅಕ್ಷಯ್, ಕಮಲೇಶ್, ಅರವಿಂದ್ ಎಂಬ ವ್ಯಕ್ತಿಗಳನ್ನು ಪೊಲೀಸರು ಭೇಟಿ ಮಾಡಿದ್ದರು. ಹಣ ಕೊಟ್ಟು ಎಕ್ಸ್ ಚೇಂಜ್ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇವರು ಪೊಲೀಸರೆಂದು ಅನುಮಾನಗೊಂಡು ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಕೂಡಲೇ ಕಾರ್ಯಪ್ರವೃತ್ತರಾಗಿ ನಾಲ್ಕು ಜನರನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಮಧ್ಯವರ್ತಿಗಳಾದ ರವಿಕುಮಾರ್, ಆಟೋಶಿವ, ಸುದರ್ಶನ್ ಹಾಗೂ ಅರವಿಂದ್​ನನ್ನು ಬಂಧನ ಮಾಡಲಾಗಿದೆ. ಈ ವೇಳೆ ಅಕ್ಷಯ್, ಕಮಲೇಶ್ ಹಾಗೂ ಲೊಹಿತ್ ಎಸ್ಕೇಪ್ ಆಗಿದ್ದಾರೆ.

ಇವರ ಮೊಬೈಲ್​ನಲ್ಲಿ ಕಂತೆ ಕಂತೆ ನೋಟುಗಳ ವಿಡಿಯೋ ಪತ್ತೆ ಆಗಿದೆ. ಪ್ರತಿ ವಿಡಿಯೋದಲ್ಲೂ 2000 ಸಾವಿರ ಮುಖಬೆಲೆಯ ಕೋಟಿ ಕೋಟಿ ಹಣ ಇತ್ತು. ವಿಡಿಯೋ ಜೊತೆಗೆ ಕೋಡ್​ ಕೂಡ ಕಳುಹಿಸಲಾಗುತ್ತಿತ್ತು. ಕೊಡ್ ಸಮೇತ ವಿಡಿಯೋ ಬಂದ ಬಳಿಕ ವ್ಯವಹಾರ ಮಾಡುತ್ತಿದ್ದರು ಎನ್ನುವ ವಿಚಾರ ಸದ್ಯ ಬಯಲಾಗಿದೆ.

ನವೆಂಬರ್​ನಲ್ಲಿ ₹ 1.04 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ

Published On - 7:52 am, Sat, 2 January 21

ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ